• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಲಪಾಡ್ ಘಟನೆ ಇನ್ನೆಂದೂ ಮರುಕಳಿಸಬಾರದು : ಬಿಎನ್ಎಸ್ ರೆಡ್ಡಿ

By Prasad
|
   ಐಪಿಎಸ್ ಆಫೀಸರ್, ಬಿಎನ್ಎಸ್ ರೆಡ್ಡಿಯವರಿಂದ ಭಯಮುಕ್ತ ಬೆಂಗಳೂರು ಅಭಿಯಾನ | Oneindia Kannada

   ಬೆಂಗಳೂರು, ಮಾರ್ಚ್ 01 : ಕಬ್ಬನ್ ಪಾರ್ಕ್ ನಲ್ಲಿ ಯುವ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆಯಾಗುತ್ತದೆ, ಯುಬಿ ಸಿಟಿಯಲ್ಲಿ ಯುವಕನ ಮೇಲೆ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಯಾಗುತ್ತದೆ.... ನಾಗರಿಕರು ಅಸಹಾಯಕತೆಯಿಂದ ಇವನ್ನೆಲ್ಲ ನೋಡುತ್ತಿದ್ದಾರೆ. ಏನು ನಡೆಯುತ್ತಿದೆ ಶಾಂತಿಯುತ ಬೆಂಗಳೂರಿನಲ್ಲಿ?

   ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ನಿವೃತ್ತ ಪೊಲೀಸ್ ಆಯುಕ್ತ ಬಿಎನ್ಎಸ್ ರೆಡ್ಡಿ. ಬೆಂಗಳೂರು ನಾಗರಿಕರಿಗೆ ಯಾವ ರೀತಿ ಸುರಕ್ಷತೆ ನೀಡಬೇಕು. ಭಯಮುಕ್ತ ಬೆಂಗಳೂರನ್ನು ಹೇಗೆ ಸೃಷ್ಟಿಸಬೇಕು ಎಂಬ ವಿಷಯವಾಗಿ ಚರ್ಚಿಸಲು, ಶಾಂತಿನಗರವನ್ನು ಒಳಗೊಂಡ ಬೆಂಗಳೂರು ಕೇಂದ್ರದ ಡಿಸಿಪಿ ಆಗಿದ್ದ ಅವರು ಬುಧವಾರ ಚಳವಳಿಯನ್ನು ಆರಂಭಿಸಿದ್ದಾರೆ.

   ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

   ಬೆಂಗಳೂರು ಸುರಕ್ಷಿತವಾಗಿರಬೇಕು ಎಂದು ಬಯಸುವ ನಾಗರಿಕರು 90195 51122 ಸಂಖ್ಯೆಗೆ ಕರೆ ನೀಡಿ, ಅಭಿಯಾನಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ಅವರು ಕರೆ ನೀಡಿದರು. ಸಾಮಾನ್ಯ ಇನ್ನು ಮುಂದೆ ಭಯಭೀತನಾಗಿ ಇರುವ ಅವಶ್ಯಕತೆಯಿಲ್ಲವೇ ಇಲ್ಲ. ದೌರ್ಜನ್ಯದ ವಿರುದ್ಧ ದನಿಯೆತ್ತಲೇಬೇಕು ಎಂದು ಅವರು ಆಗ್ರಹಿಸಿದರು.

   ಮೊಹಮ್ಮದ್ ನಲಪಾಡ್‌ ಜಾಮೀನು ಅರ್ಜಿ ವಜಾ

   ಅದರಲ್ಲಿಯೂ ಯುಬಿ ಸಿಟಿಯಲ್ಲಿ ನಡೆದ ಹಲ್ಲೆ ಬರ್ಬರತೆಯ ಪರಮಾವಧಿ. ಇಂಥ ಅಪರಾಧವನ್ನು ನಾನು ನನ್ನ ವೃತ್ತಿಜೀವನದಲ್ಲಿಯೇ ನೋಡಿಲ್ಲ. ರಾಜಕಾರಣಿಗಳಿಂದ ಪೊಲೀಸರ ಮೇಲೆಯೇ ಒತ್ತಡ ಹೇರಲಾಗುತ್ತಿದೆ. ಸಾರ್ವಜನಿಕರು ಇಂಥ ಅನೈತಿಕ ಚಟುವಟಿಕೆಗಳನ್ನು ಪ್ರಶ್ನಿಸುವಂತಾಗಬೇಕು, ನಾವೆಲ್ಲ ಸೇರಿ ಹೋರಾಡಬೇಕು ಎಂದರು.

   ನಲಪಾಡ್ ಗ್ಯಾಂಗ್ ದಾಳಿಗೆ ನಲುಗಿದ ವಿದ್ವತ್ ಯಾರು?

   ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ವೈದ್ಯಕೀಯ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವವರ ವಿರುದ್ಧ ನ್ಯಾಯಾಲಯವೇ ಕ್ರಮ ಜರುಗಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಜನಸಾಮಾನ್ಯರ ನಂಬಿಕೆ ಮರಳುವಂತೆ ಮಾಡಬೇಕು ಎಂದು ಬಿಎನ್ಎಸ್ ರೆಡ್ಡಿಯವರು ಆಗ್ರಹಿಸಿದರು.ಅವರ ಪತ್ರಿಕಾಗೋಷ್ಠಿಯ ವಿವರಗಳು ಕೆಳಗಿನಂತಿವೆ.

   ನಲಪಾಡ್ ಘಟನೆಯಿಂದ ಬೆಂಗಳೂರಿನ ಇಮೇಜಿಗೆ ಕುಂದು

   ನಲಪಾಡ್ ಘಟನೆಯಿಂದ ಬೆಂಗಳೂರಿನ ಇಮೇಜಿಗೆ ಕುಂದು

   ಪ್ರಭಾವಿ ರಾಜಕಾರಣಿ ಶಾಂತಿನಗರದ ಶಾಸಕ ಎನ್ ಎ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ನಿಂದ ವಿದ್ವತ್ ಮೇಲೆ ನಡೆದಿರುವ ಹಲ್ಲೆಯಿಂದಾಗಿ ಬೆಂಗಳೂರಿನ ಇಮೇಜಿಗೆ ಕುಂದುಂಟಾಗಿದೆ. ನಗರದಲ್ಲಿ ಒಂದು ರೀತಿಯ ಹೆದರಿಕೆ ಆವರಿಸಿಕೊಂಡಿದೆ. ಇದಕ್ಕೆಲ್ಲ ಕಾರಣ, ಕೆಲ ಕ್ರಿಮಿಗಳಿಗೆ ಕಾನೂನಿನ ಬಗ್ಗೆ ನೈಯಾಪೈಸೆ ಗೌರವ ಇಲ್ಲದಿರುವುದು.

   ನಲಪಾಡ್ ನಡೆಸಿದ ಹಲ್ಲೆ ತೀವ್ರ ಕಲಕಿದೆ

   ನಲಪಾಡ್ ನಡೆಸಿದ ಹಲ್ಲೆ ತೀವ್ರ ಕಲಕಿದೆ

   ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ನಡೆಸಿದ ಭೀಕರ ಹಲ್ಲೆ ನನ್ನನ್ನು ತೀವ್ರವಾಗಿ ಕಲಕಿದೆ. ಸ್ವಲ್ಪವೂ ಕನಿಕರವಿಲ್ಲದೆ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದಾಗ ಉಳಿದವರು ತಡೆಯಲು ಯಾಕೆ ಹೋಗಲಿಲ್ಲ? ಇಂಥ ರೌಡಿಸಂ ಮೇಲೆ ಲವಲೇಶವೂ ಕಡಿವಾಣ ಇಲ್ಲದಂಥ ಬೆಂಗಳೂರನ್ನಾಗಿ ಮಾಡಲಾಗುತ್ತಿದೆಯೆ?

   ಬೌನ್ಸರ್, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?

   ಬೌನ್ಸರ್, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?

   ಯುಬಿ ಸಿಟಿಯಲ್ಲಿರುವ ಫಾರ್ಜಿ ಕೆಫೆ ಮ್ಯಾನೇಜ್ಮೆಂಟ್ ಏಕೆ ಬಾಯಿ ಮುಚ್ಚಿಕೊಂಡಿದೆ? ಯುಬಿ ಸಿಟಿಯಲ್ಲಿರುವ ಬೌನ್ಸರ್ ಗಳು ಆ ಭೀಕರ ಹಲ್ಲೆ ನಡೆಯುತ್ತಿದ್ದಾಗ ಏನು ಮಾಡುತ್ತಿದ್ದರು? ಅಲ್ಲದೆ, 50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಏಕೆ ಮೂಕ ಪ್ರೇಕ್ಷಕರಂತೆ ಹಲ್ಲೆ ತಡೆಯದೆ ಏಕೆ ನಿಂತಿದ್ದರು?

   ಬೆಂಗಳೂರಿಗೆ ಬೆಂಗಳೂರೇ ತಿರುಗಿನಿಲ್ಲಬೇಕು

   ಬೆಂಗಳೂರಿಗೆ ಬೆಂಗಳೂರೇ ತಿರುಗಿನಿಲ್ಲಬೇಕು

   ಜನರು ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿಯೇ, ಮೊಹಮ್ಮದ್ ನಲಪಾಡ್ ಎಂಬ ರಾಕ್ಷಸ ಹಲ್ಲೆ ಮಾಡುತ್ತಿದ್ದಾಗ, ಕಣ್ಣ ಮುಂದೆಯೆ ಏನೆಲ್ಲ ನಡೆಯುತ್ತಿದ್ದರೂ ಯಾರೂ ಮಧ್ಯ ಪ್ರವೇಶಿಸುವುದಿಲ್ಲ. ಬೆಂಗಳೂರಿಗೆ ಬೆಂಗಳೂರೇ ತಿರುಗಿನಿಲ್ಲಬೇಕು. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಂಬಿಕೆ ಮರಳಬೇಕು.

   ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಿ

   ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಿ

   ಭಯಮುಕ್ತ ಬೆಂಗಳೂರು ಅಭಿಯಾನದಲ್ಲಿ ಭಾಗಿಯಾಗಬಯಸುವವರು 90195-51122 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಬೇಕು. ಪೊಲೀಸರ ವಿರುದ್ಧ ಹಲವರು ದೂರುತ್ತಾರೆ. ಜನರು ದನಿಯೆತ್ತಿದರೆ ಪೊಲೀಸರೂ ಎಚ್ಚೆತ್ತುಕೊಳ್ಳುತ್ತಾರೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಿದ್ದರೆ ಜವಾಬ್ದಾರಿಯುತ ನಾಗರಿಕರ ಭಾಗವಹಿಸುವಿಕೆ ಬೇಕೇಬೇಕು.

   ಭದ್ರತೆಯೂ ಪಕ್ಷಗಳ ಪ್ರಣಾಳಿಕೆಯಲ್ಲಿರಲಿ

   ಭದ್ರತೆಯೂ ಪಕ್ಷಗಳ ಪ್ರಣಾಳಿಕೆಯಲ್ಲಿರಲಿ

   ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆಗಳನ್ನು ನೀಡುತ್ತವೆ. ಆದರೆ, ಜನರಿಗೆ ಬೇಕಾದ ಭದ್ರತೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಜನರೇ ಆಗ್ರಹಿಸಬೇಕು. ನಮಗೆ ಸಲಹೆ ನೀಡಿ, ಮುಂದೆ ಏನು ಮಾಡಬೇಕೆಂದು ನಾವೆಲ್ಲ ಸೇರಿ ನಿರ್ಧರಿಸೋಣ. ಯುಬಿ ಸಿಟಿಯಂಥ ಘಟನೆಗಳು ಹಲವಾರು ನಡೆಯುತ್ತಿರುತ್ತವೆ. ಆದರೆ, ಯಾವುದೇ ಕ್ರಮವನ್ನೂ ಜರುಗಿಸುವುದಿಲ್ಲ.

   ಭಯಮುಕ್ತ ಬೆಂಗಳೂರು ಅಭಿಯಾನ

   ಭಯಮುಕ್ತ ಬೆಂಗಳೂರು ಎಂಬ ಅಭಿಯಾನವನ್ನು ಆರಂಭಿಸಿರುವ ಮಾಜಿ ಪೊಲೀಸ್ ಆಯುಕ್ತ ಬಿಎನ್ಎಸ್ ರೆಡ್ಡಿಯವರು, ಇದರಲ್ಲಿ ಬೆಂಗಳೂರಿನ ನಾಗರಿಕರು ಭಯಮುಕ್ತರಾಗಿ ಭಾಗವಹಿಸಬೇಕು ಎಂದು ಕೇಳಿದ್ದಾರೆ. ಅವರು ನಡೆಸಿದ ಪತ್ರಿಕಾಗೋಷ್ಠಿಯ ವಿವರ ಈ ವಿಡಿಯೋದಲ್ಲಿದೆ.

   ನಲಪಾಡ್‌ ಇಷ್ಟೊಂದು ಕ್ರೂರಿ ಎಂದು ಗೊತ್ತಿರಲಿಲ್ಲ: ಪ್ರಕಾಶ್ ರೈ

   ಮಕ್ಕಳು ದಾರಿ ತಪ್ಪುತ್ತಿರುವುದಕ್ಕೆ ಕಾರಣರು ಯಾರು?

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಬೆಂಗಳೂರು ಸುದ್ದಿಗಳುView All

   English summary
   No more Nalapad type of attacks on citizens in Bengaluru : Super cop BNS Reddy gives a call for Bengaluru to stand up to crime. He has invited Bengaluru citizen to support Bhayamukta Bengaluru campaign by giving a missed call.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more