• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನ್ನ ಭಾಗ್ಯ ಯೋಜನೆ, ಇನ್ಮುಂದೆ ಅಕ್ಕಿ ಉಚಿತವಾಗಿ ಸಿಗೋದಿಲ್ಲ?

|

ಬೆಂಗಳೂರು,ಜನವರಿ 19: ಅನ್ನಭಾಗ್ಯ ಯೋಜನೆಯಲ್ಲಿ ಇನ್ನುಮುಂದೆ ಅಕ್ಕಿ ಉಚಿತವಾಗಿ ನೀಡುವುದಿಲ್ಲ ಬದಲಾಗಿ ಪಡಿತರದಾರರು ಹಣ ಪಾವತಿಸಬೇಕಾಗುತ್ತದೆ ಎನ್ನುವ ವಿಷಯ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯ ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 5ಕೆಜಿ ಅತ್ತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 1.22 ಕೋಟಿ ಕುಟುಂಬದ 4,27 ಕೋಟಿ ಜನ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ಉಳ್ಳವರ ಬಿಪಿಎಲ್ ಕಾರ್ಡ್ ರದ್ದು: ರೈತರ ಅನ್ನದ ತಟ್ಟೆಗೆ ಕೈಹಾಕಬೇಡಿ: ಕುಮಾರಸ್ವಾಮಿ

ಕರ್ನಾಟಕ ಸರ್ಕಾರ ಸರಾಸರಿ ಹಣ ಪಡೆದು ಅಕ್ಕಿ ವಿತರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ, ಹಣವನ್ನು ಸಂಗ್ರಹಿಸಿ ಫಲಾನುಭವಿಗಳಿಗೆ ವಾಪಸ್ ನೀಡಲು ಸರ್ಕಾರ ನಿರ್ಧರಿಸಿದೆ.

ಸೂಕ್ಷ್ಮ ಪೋಷಕಾಂಶಗಳಿರುವ ಸೇರಿಸುವ ಅಕ್ಕಿಯನ್ನು ಫಲಾನುಭವಿಗಳಿಗೆ ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ. ಸರ್ಕಾರ ಈಗ ನೀಡುತ್ತಿರುವ ಅಕ್ಕಿಯಿಂದ ಫಲಾನುಭವಿಗಳಿಗೆ ನಿಗದಿತ ಪೋಷಕಾಂಶ ದೊರೆಯುತ್ತಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ ಈ ಕುರಿತು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭವಾದ ಯೋಜನೆ

ಸಿದ್ದರಾಮಯ್ಯ ಸರ್ಕಾರದಲ್ಲಿ ಆರಂಭವಾದ ಯೋಜನೆ

2013 ರಲ್ಲಿ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಪರಿಚಯಿಸಿತು. ಈ ಯೋಜನೆಯಡಿ ಅಕ್ಕಿಯ ಜೊತೆಗೆ ಅಡುಗೆ ಎಣ್ಣೆ, ತೊಗರಿ ಬೇಳೆ, ಅಯೋಡಿನ್ ಉಪ್ಪು ನೀಡಲಾಗುತ್ತಿತ್ತು. ಆದರೆ 2015 ರಿಂದ ಕೇವಲ ಅಕ್ಕಿ ಮಾತ್ರ ಪೂರೈಸಲಾಗುತ್ತಿತ್ತು.

ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಉಚಿತ

ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಉಚಿತ

ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ಉಚಿತವಾಗಿದ್ದರೆ, ಬಡತನ ರೇಖೆ (ಎಪಿಎಲ್) ಕಾರ್ಡ್‌ಗಳನ್ನು ಮೀರಿದ ಕುಟುಂಬಗಳಿಗೆ ಪ್ರತಿ ಕೆಜಿಗೆ 15 ರೂ.ಗೆ ಅಕ್ಕಿ ವಿತರಿಸಲಾಗುತ್ತಿದೆ. ಪ್ರತಿ ತಿಂಗಳು ಸರ್ಕಾರಕ್ಕೆ 2.18 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮತ್ತು ಅದನ್ನು ಖರೀದಿಸಲು ಕೋಟ್ಯಂತರ ರುಪಾಯಿ ಹಣ ಬೇಕಾಗುತ್ತದೆ.

ಅಗತ್ಯ ವಸ್ತುಗಳ ಪೂರೈಕೆ

ಅಗತ್ಯ ವಸ್ತುಗಳ ಪೂರೈಕೆ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳು, ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇತರ ಅಗತ್ಯ ವಸ್ತುಗಳನ್ನು ಪೂರೈಸಲು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

  Special Report :Karnataka-Maharashtra ಗಡಿವಿವಾದ ಬೂದಿ ಮುಚ್ಚಿದ ಕೆಂಡ- ಇದು ಇಂದು ನಿನ್ನೆಯ ವಿವಾದವಲ್ಲ..!
  ಸರ್ಕಾರ ಹಂಚಿಕೆ ಮಾಡಿರುವ ಅಕ್ಕಿ ಬಳಕೆಗಿಂತ ಹೆಚ್ಚಾಗಿದೆ

  ಸರ್ಕಾರ ಹಂಚಿಕೆ ಮಾಡಿರುವ ಅಕ್ಕಿ ಬಳಕೆಗಿಂತ ಹೆಚ್ಚಾಗಿದೆ

  ಸರ್ಕಾರ ಹಂಚಿಕೆ ಮಾಡಿದ ಅಕ್ಕಿ ಬಳಕೆಗಿಂತ ಹೆಚ್ಚಾಗಿದೆ. ಕೆಲವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಲ್ಲಿ, ಯೋಜನೆಯಡಿ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ, ಇದರಿಂದ ಏಜೆಂಟರಿಗೆ ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ , ಮತ್ತೊಂದೆಡೆ ಸರ್ಕಾರ ಇದಕ್ಕಾಗಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಪ್ರತಿ ಕೆ.ಜಿ ಅಕ್ಕಿ ಸುಮಾರು 2-3 ರುಪಾಯಿ ದರ ವಿಧಿಸಿದರೇ ಸರ್ಕಾರಕ್ಕೆ ಆದಾಯ ಬರಲಿದೆ , ಈ ಹಣವನ್ನು ಬೇರೆ ಕಾರ್ಯಕ್ಕೆ ಬಳಸಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

  English summary
  If everything goes as per proposal, the poor in Karnataka may have to pay for food grains under the ‘Anna Bhagya’ scheme which is free now. Government sources said tha only a nominal amount will be charged and the money collected will be given back to the beneficiaries.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X