ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

6 ದಿನದ ವಲಸೆ ಕಾರ್ಮಿಕರ ಕಾರ್ಯಾಚರಣೆ ಅಂತ್ಯಗೊಳಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಮೇ 7: ಕಳೆದ ಆರು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1,‌08,300 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ. ಹಾಗೂ 3610 ಬಸ್ಸುಗಳನ್ನು ಕಾರ್ಯಚರಣೆ ಮಾಡಲಾಗಿದೆ.

ಆರು ದಿನಗಳ ಕಾರ್ಯಾಚರಣೆ ಇಂದಿಗೆ ಅಂತ್ಯವಾಗಿದೆ. ನಾಳೆಯಿಂದ ವಲಸೆ ಕಾರ್ಮಿಕರಿಗೆ ಉಚಿತ ಬಸ್ ಸೇವೆ ಇರುವುದಿಲ್ಲ ಎಂದು ಕೆಎಸ್ ಆರ್ ಟಿಸಿ ಆಡಳಿತ ಮಂಡಳಿ ತಿಳಿಸಿದೆ.

ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರುಕೆಎಸ್ಆರ್‌ಟಿಸಿ ಬಸ್‌ನಲ್ಲಿ ಊರಿಗೆ ಹೋದ 59 ಸಾವಿರ ವಲಸೆ ಕಾರ್ಮಿಕರು

ಕೊನೆಯ ದಿನವಾದ ಇಂದು ಸಹ ಬೆಳಗ್ಗೆ 8 ರಿಂದ ಬಸ್ಸುಗಳ ಕಾರ್ಯಾಚರಣೆ ಆರಂಭಿಸಿದ್ದವು. ಬೆಳಗ್ಗೆ 8 ರಿಂದ 6.40 ರವರೆಗೆ ಗಂಟೆಯವರೆಗೆ ಇಂದು ಒಟ್ಟು 185 ಬಸ್ಸುಗಳನ್ನು, ರಾಜ್ಯದ 43 ಸ್ಥಳಗಳಿಗೆ ಸಂಚಾರ ಮಾಡಿದೆ. ಈ ಮೂಲಕ ಕಾರ್ಮಿಕರಿಗಾಗಿ ಉಚಿತ ಬಸ್‌ ವ್ಯವಸ್ಥೆ ಇಂದಿಗೆ ಕೊನೆಗೊಂಡಿದೆ.

ಇನ್ನು ಬೆಂಗಳೂರು ನಗರದಿಂದಲೇ ಕಳೆದ ಆರು ದಿನಗಳಿಂದ ಒಟ್ಟು 2288 ಬಸ್ಸುಗಳನ್ನು ಕಾರ್ಯಾಚರಣೆ ಮಾಡಿ 69515 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

Tomorrow There Will No Bus Operation Migrant Workers

ಬೆಂಗಳೂರು ಕೆಂಪು ವಲಯದಲ್ಲಿರುವುದರಿಂದ ನಾಳೆಯಿಂದ ಯಾವುದೇ ಬಸ್ಸುಗಳು ಬೆಂಗಳೂರಿನಿಂದ ಯಾವುದೇ ಬೇರೆ ಸ್ಥಳಗಳಿಗೆ ಕಾರ್ಯಚರಣೆಯಾಗುವುದಿಲ್ಲ. ದರ ವಿಧಿಸಿ ಕಾರ್ಯಚರಣೆಯಾಗುವ ಬಸ್ಸುಗಳು ಕೂಡ ಸಂಚಾರ ಮಾಡುವುದಿಲ್ಲ.

English summary
Today is the last day of ferrying migrant workers. Tomorrow there will no bus operation from Bengaluru to any places (even charging fare), as Bengaluru falls into the Red zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X