• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಂಪೇಗೌಡ ಏರ್‌ಪೋರ್ಟ್‌ಗೆ ಎಚ್‌ಎಎಲ್‌ನಿಂದ ಹೆಲಿ ಟ್ಯಾಕ್ಸಿ ಹಾರಲ್ಲ!

|

ಬೆಂಗಳೂರು, ನವೆಂಬರ್ 15: ಎಚ್‌ಎಎಲ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿ ಟ್ಯಾಕ್ಸಿ ಯೋಜನೆಯನ್ನು ಕೈಬಿಡಲಾಗಿದೆ.

ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಏರ್‌ಪೋರ್ಟ್‌ ನಡುವೆ ಹೆಲಿ ಟ್ಯಾಕ್ಸಿಯನ್ನು ಆರಂಬಿಸಲಾಗಿತ್ತು, ಅದರೆಂತೆ ಎಚ್‌ಎಎಲ್ ವಿಮಾನ ನಿಲ್ದಾಣದಿಂದಲೂ ಹೆಲಿ ಟ್ಯಾಕ್ಸಿ ಯೋಜನೆಯನ್ನು ಆರಂಭಿಸಲು ಥಂಬಿ ಏವಿಯೇಷನ್ ಆಲೋಚಿಸಿತ್ತು ಆದರೆ ಯೋಜನೆಯನ್ನು ಇದೀಗ ಕೈಬಿಟ್ಟಿದೆ.

ಹೆಲಿ ಟ್ಯಾಕ್ಸಿಯಲ್ಲಿ ತೆರಳಬೇಕೆ? ಹಾಗಾದರೆ ಬುಕಿಂಗ್ ಹೇಗೆ?

ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳ ಹಿಂದೆ ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಲಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಲಾಗಿತ್ತು, ಅದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆಯೂ ಲಭ್ಯವಾಗಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಏರ್‌ಪೋರ್ಟ್‌ಗೆ ಹೋಗಬೇಕಾದರೆ ಹರಸಾಹಸ ಪಡಬೇಕಾಗಿತ್ತು.

ಆದರೆ ಹೆಲಿ ಟ್ಯಾಕ್ಸಿ ಸೇವೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು, ಆ ಮಾರ್ಗದಲ್ಲಿ ಟ್ಯಾಕ್ಸಿ ಆರಂಭಿಸುವ ಸಮಯದಲ್ಲೇ ಎಚ್‌ಎಎಲ್‌ನಿಂದ ಕೆಐಎ ಮಾರ್ಗದಲ್ಲೂ ಹೆಲಿ ಟ್ಯಾಕ್ಸಿ ಆರಂಭಿಸುವ ಕುರಿತು ಎಚ್‌ಎಎಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಎಚ್‌ಎಎಲ್‌ ಕೂಡ ಅದಕ್ಕೆ ಸಮ್ಮತಿ ನೀಡಿತ್ತು.

ಎಚ್‌ಎಎಲ್‌ನಿಂದ ಹೆಲಿ ಟ್ಯಾಕ್ಸಿ: ಯೋಜನೆ ಕೈಬಿಟ್ಟ ಥಂಬಿ ಏವಿಯೇಷನ್‌

ಆದರೆ ಒಂದು ತಿಂಗಳು ಕಳೆದರೂ ಈ ಕುರಿತು ಪ್ರತಿಕ್ರಿಯೆ ಬಾರದಿರುವ ಹಿನ್ನೆಲೆಯಲ್ಲಿ ಥಂಬಿ ಏವಿಯೇಷನ್‌ ಸಂಸ್ಥೆಯು ಆ ಮಾರ್ಗದಲ್ಲಿ ಹೆಲಿ ಟ್ಯಾಕ್ಸಿ ಆರಂಭಿಸುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಎಚ್‌ಎಎಲ್‌ನಿಂದ ಖಾಸಗಿ ವಿಮಾನ, ಹೆಲಿಕಾಪ್ಟರ್ ಹಾರಾಟ

ಎಚ್‌ಎಎಲ್‌ನಿಂದ ಖಾಸಗಿ ವಿಮಾನ, ಹೆಲಿಕಾಪ್ಟರ್ ಹಾರಾಟ

ಎಚ್‌ಎಎಲ್‌ನಿಂದ ಖಾಸಗಿ ವಿಮಾನ, ಹೆಲಿಕಾಪ್ಟರ್ ಹಾರಾಟ ನಡೆಸಬಹುದು, ಆದರೆ ಶೇರ್ ರೈಡ್ ಮಾಡಲು ತಾಂತ್ರಿಕವಾಗಿ ಅವಕಾಶ ಇಲ್ಲ, ಹೀಗಾಗಿ ಕೆಐಎಗೆ ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಸೇವೆ ಒದಗಿಸಲು ಆಗುತ್ತಿಲ್ಲ ಎಂದು ಥಂಬಿ ಏವಿಯೇಷನ್ ನಿರ್ದೇಶಕ ಗೋವಿಂದ್ ನಾಯರ್ ತಿಳಿಸಿದ್ದಾರೆ.

ಎರಡು ಮಾದರಿಯ ಸೇವೆ

ಎರಡು ಮಾದರಿಯ ಸೇವೆ

ಪ್ರತಿ ಸೀಟಿನ ಮೇಲೆ ಬೇರೆ ಬೇರೆ ಪ್ರಯಾಣಿಕರು ಪ್ರಯಾಣ ಶುಲ್ಕ ಪಾವತಿ ಮಾಡುವುದು ಹಾಗೂ ಒಬ್ಬನೇ ವ್ಯಕ್ತಿ ಪೂರ್ಣ ಹೆಲಿಕಾಪ್ಟರ್ ಬುಕ್ಕಿಂಗ್ ಹೀಗೆ ಎರಡು ಮಾದರಿಯ ಸೇವೆಯನ್ನು ಥಂಬಿ ಏವಿಯೇಷನ್ ಒದಗಿಸುತ್ತಿದೆ.

ಮೈಸೂರು, ಮಡಿಕೇರಿಗೂ ಹಾರಲಿದೆ ಹೆಲಿ ಟ್ಯಾಕ್ಸಿ!

ಒಬ್ಬರೇ ವ್ಯಕ್ತಿ ಹೆಲಿಕಾಪ್ಟರ್ ಬುಕಿಂಗ್ ಮಾಡಲು ಅವಕಾಶ

ಒಬ್ಬರೇ ವ್ಯಕ್ತಿ ಹೆಲಿಕಾಪ್ಟರ್ ಬುಕಿಂಗ್ ಮಾಡಲು ಅವಕಾಶ

ಒಬ್ಬರೇ ವ್ಯಕ್ತಿ ಹೆಲಿಕಾಪ್ಟರ್ ಬುಕಿಂಗ್ ಮಾಡಲು ಅವಕಾಶವಿರುತ್ತದೆ, ಈಗಾಗಲೇ ಎಚ್‌ಎಎಲ್‌ನಿಂದ ಹಾರಾಟ ನಡೆಸಲಾಗುತ್ತಿದೆ. ಆರೆ ಪ್ರತಿ ಸೀಟಿನ ಮೇಲೆ ಪ್ರತ್ಯೇಕವಾಗು ಶುಲ್ಕ ಕಟ್ಟಿಸಿಕೊಂಡು ಎಚ್‌ಎಎಲ್‌ನಿಂದ ಕಾರ್ಯಾಚರಣೆ ನಡೆಸಲು ಬರುವುದಿಲ್ಲ ಅದಕ್ಕೆ ಎಚ್‌ಎಎಲ್ ಮತ್ತು ಕೆಐಎ ಆಡಳಿತ ಮಂಡಳಿ ತಾಂತ್ರಿಕ ಕಾರಣ ನೀಡಿ ನಮ್ಮ ಪ್ರಸ್ತಾವನೆಯನ್ನು ತಳ್ಳಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

2017ರಲ್ಲಿ ಮೊದಲ ಹೆಲಿ ಟ್ಯಾಕ್ಸಿ ಸೇವೆ ಆರಂಭ

2017ರಲ್ಲಿ ಮೊದಲ ಹೆಲಿ ಟ್ಯಾಕ್ಸಿ ಸೇವೆ ಆರಂಭ

ಎಲೆಕ್ಟ್ರಾನಿಕ್ ಸಿಟಿ ಮತ್ತು ಕೆಐಎ ನಡುವೆ ದೇಶದ ಮೊದಲ ಹೆಲಿ ಟ್ಯಾಕ್ಸಿ ಯೋಜನೆಗೆ 2017ರಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಚಾಲನೆ ನೀಡಿದ್ದರು. ಎಚ್‌ಎಎಲ್‌ನಲ್ಲಿರುವ ಎರಡು ಹೆಲಿಪ್ಯಾಡ್ ಗಳನ್ನು ಮಿಲಿಟರಿ ಮತ್ತು ವಿಐಪಿಗಳ ಹಾರಾಟಕ್ಕೆ ಬಳಸಲಾಗುತ್ತಿದೆ.

English summary
As share riding facility not available in HAL airport, proposal of heli taxi service between said airport and Kempegowda International Airport has been canceled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X