Jan Aushadhi: ಜನೌಷಧಿ ಕೇಂದ್ರ ಸ್ಥಗಿತ: ಕೇಂದ್ರಕ್ಕೆ ದಿನೇಶ್ ಗುಂಡೂರಾವ್ ಪತ್ರ
ಬೆಂಗಳೂರು, ಆಗಸ್ಟ್ 07: ಕರ್ನಾಟಕದಾದ್ಯಂತ ಬಡವರಿಗೆ ಕಡಿಮೆ ಬೆಲೆಗೆ ಔಷಧಿ ಪೂರೈಸುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಮುಚ್ಚುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿದೆ ಎಂಬ ಮಾತುಗಳು ಕೇಳಿ ಬಂದವು. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಅದಕ್ಕೀಗ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪತ್ರ ಬರೆದು ಜನೌಷಧಿ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಜನೌಷಧಿ ಕೇಂದ್ರಗಳ ಮುಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ಕೇಂದ್ರ ಸಚಿವರಿಗೆ ದಿನೇಶ್ ಗುಂಡೂರಾವ್ ಅವರು ಪತ್ರ ಬರೆದು, ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಿಗಳ ಉಚಿತ ಪೂರೈಕೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚಿಲ್ಲ. ಕೇವಲ ಸರ್ಕಾರಿ ಆವರಣಗಳಲ್ಲಿ ಮಾತ್ರ ಅವುಗಳ ಕಾರ್ಯ ನಿರ್ವಹಣೆ ನಿಷೇಧಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜನ ಔಷಧಿ ಕೇಂದ್ರಗಳನ್ನು (Jan Aushadhi Kendras) ಸ್ಥಗಿತಗೊಳಿಸಿದರೂ, ಎಸ್ಸೆನ್ಶಿಯಲ್ ಮೆಡಿಸಿನ್ ಲಿಸ್ಟ್ (EML) ಅನುಸಾರ ಎಲ್ಲಾ ಅಗತ್ಯ ಔಷಧಿಗಳನ್ನು ಉಚಿತವಾಗಿ ಪೂರೈಸಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ರಾಜ್ಯ ಸರ್ಕಾರ ಭದ್ರತೆ ನೀಡಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಔಷಧಿಗಳನ್ನು ಕರ್ನಾಟಕ ಮೆಡಿಕಲ್ ಸಪ್ಲೈಸ್ ಕಾರ್ಪೊರೇಷನ್ ಲಿಮಿಟೆಡ್ (KMSCL) ಮೂಲಕ ಪೂರೈಸಲಾಗುತ್ತಿದೆ. ಅವಶ್ಯಕತೆಯಿದ್ದರೆ ಸ್ಥಳೀಯವಾಗಿ ಔಷಧಿ ಖರೀದಿಸಲು ಹಣವನ್ನು ಬಳಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜನ ಔಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಲು ತೆಗೆದುಕೊಂಡ ನಿರ್ಧಾರವು, ಇತರ ಖಾಸಗಿ ಔಷಧದಕಂಗಡಿಗಳಿಗೆ ತೆರಳುವಂತೆ ಮಾಡುವ ಸಾಧ್ಯತೆಯನ್ನು ತಡೆಯುವುದು. ಅಲ್ಲದೇ ಉಚಿತ ಔಷಧ ಪೂರೈಕೆಯ ಮಾಡುವ ಉದ್ದೇಶ ಹೊಂದಿದೆ. ತಾವು ಜೆ.ಪಿ.ನಡ್ಡಾ ಅವರು ಸಾರ್ವಜನಿಕ ಆರೋಗ್ಯ ಕಾಳಜಿ ವಹಿಸಿದ್ದಕ್ಕೆ ಧನ್ಯವಾದಗಳು. ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಶ್ರಮಿಸುವುದು ನಮ್ಮೆಲ್ಲ ಕರ್ತವ್ಯವೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಮುಖ್ಯಾಂಶಗಳು
* ಜನ ಔಷಧಿ ಕೇಂದ್ರ ಸ್ಥಗಿತಗೊಳಿಸಿದರೂ ಉಚಿತ ಔಷಧ ಪೂರೈಕೆ ಖಚಿತ.
* ಸರ್ಕಾರಿ ಆಸ್ಪತ್ರೆಗಳಿಗೆ ಕೆಎಂಎಸ್‌ಸಿಎಲ್ ಮೂಲಕ ಔಷಧ ಪೂರೈಕೆ.
* ಔಷಧ ಕೊರತೆ ಇದ್ದರೆ ಸ್ಥಳೀಯ ಖರೀದಿಗೆ ಅನುಮತಿ.
* ಕಮರ್ಷಿಯಲ್ ಔಷಧ ಅಂಗಡಿಗಳತ್ತ ರೆಫರ್ ಆಗುವ ಸಾಧ್ಯತೆ ತಡೆಗಟ್ಟಲು ನಿರ್ಧಾರ.
* ಸಾರ್ವಜನಿಕ ಆರೋಗ್ಯ ಮತ್ತು ನ್ಯಾಯಸಮ್ಮತ ಔಷಧ ಬಳಕೆ ಉದ್ದೇಶ.












Click it and Unblock the Notifications