ಮೇಯರ್, ಕಮಿಷನರ್‌ಗೆ ಬಂಗಲೆ ಬೇಕಿಲ್ಲ ಎಂದ ಮೇಯರ್ ಗಂಗಾಂಬಿಕೆ
ಬೆಂಗಳೂರು, ಅ.3: ಮೇಯರ್ ಗೆ ಸಚಿವರಿಗೆ ನೀಡುವ ರೀತಿಯಲ್ಲೇ ಬಂಗಲೆ ನಿರ್ಮಿಸಿಕೊಡಲಾಗುತ್ತಿತ್ತು, ಆದರೆ ಮೇಯರ್ ಹಾಗೂ ಕಮಿಷನರ್ ಗೆ ಬಂಗಲೆ ಬೇಡ ಎಂದು ಹೇಳುವ ಮೂಲಕ ಮೇಯರ್ ಗಂಗಾಂಬಿಕೆ ಎಲ್ಲರ ಗಮನ ಸೆಳೆದಿದ್ದಾರೆ.
ಮೇಯರ್ ಹಾಗೂ ಆಯುಕ್ತರಿಗೆ ಸಚಿವರು ಮಾದರಿಯಲ್ಲಿ ಬಂಗಲೆಗಳನ್ನು ನಿರ್ಮಿಸಿಕೊಡುವುದು ಬೇಡ ಆ ಪ್ರಸ್ತಾಪವನ್ನು ಜಾರಿಗೊಳಿಸುವ ಉದ್ದೇಶ ಇಲ್ಲ ಎಂದು ಗಂಗಾಂಬಿಕೆ ಹೇಳಿದ್ದಾರೆ.
ನಿರ್ಮಮಿತ ಮೇಯರ್ ಸಂಪತ್ ರಾಜ್ ತಮ್ಮ ಅವಧಿಯಲ್ಲಿ ಶಾಶ್ವತ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಬೇಕೆಂಬ ಆಕಾಂಕ್ಷೆಯಿಂದ ಬಂಗಲೆ ನಿರ್ಮಿಸುವ ಯೋಜನೆ ಘೋಷಣೆ ಮಾಡಲಾಗಿತ್ತು.

ಇದಕ್ಕಾಗಿ ಪಾಲಿಕೆ ಬಜೆಟ್ ನಲ್ಲಿ ಐದು ಕೋಟಿ ರೂ ಹಣ ಮೀಸಲಿಡಲಾಗಿತ್ತು, ಕೌನ್ಸಿಲ್ ಸಭೆಯ ಒಪ್ಪಿಗೆ ಪಡೆದು ಸರ್ಕಾರದ ಅನುಮೋದನೆಗೂ ಕಳುಹಿಸಲಾಗಿದೆ ಈ ಹೊಸ ಬಂಗಲೆ ನಿರ್ಮಾಣ ಕುರಿತು ಪ್ರತಿಕ್ರಿಯೆ ನೀಡಿರುವ ಮೇಯರ್ ಈ ಬಂಗಲೆಗಳನ್ನು ನಿರ್ಮಿಸುವ ಪ್ರಸ್ತಾಪವನ್ನು ಕೈಬಿಡಲು ತಿಳಿಸಿದ್ದಾರೆ.
ಇದಕ್ಕೆ ವೆಚ್ಚವಾಗುವ ಹಣವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ, ಹಿಂದೆ ನಿರ್ಧಾರ ಕೈಗೊಂಡಿದ್ದರೂ, ಆ ಪ್ರಸ್ತಾಪವನ್ನು ಈಡೇರಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications