ಸಿಬ್ಬಂದಿಗೆ ಸೋಂಕು; ಬೆಂಗಳೂರಿನ ಕೋವಿಡ್ ಪರೀಕ್ಷೆ ಲ್ಯಾಬ್‌ಗೆ ಬೀಗ
ಬೆಂಗಳೂರು, ಜುಲೈ 07 : ಪ್ರತಿದಿನ ಸುಮಾರು 1 ಸಾವಿರ ಕೊರೊನಾ ವೈರಸ್ ಸೋಂಕಿನ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದ ಪ್ರಾಯೋಗಾಲಯ ಬಾಗಿಲು ಮುಚ್ಚಿದೆ. ಶುಕ್ರವಾರದ ತನಕ ಬೆಂಗಳೂರು ನಗರದಲ್ಲಿನ ಈ ಲ್ಯಾಬ್ ಕಾರ್ಯ ನಿರ್ವಹಣೆ ಮಾಡುವುದಿಲ್ಲ.
ಬೆಂಗಳೂರಿನ ಜಯನಗರದಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ (ಎನ್‌ಐವಿ)ಯಲ್ಲಿನ ಕೋವಿಡ್ -19 ಪ್ರಾಯೋಗಾಲಯ ಮುಚ್ಚಲಾಗಿದೆ. ಲ್ಯಾಬ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ ಹಿನ್ನಲೆಯಲ್ಲಿ ಬಾಗಿಲು ಹಾಕಲಾಗಿದೆ.
ಲ್ಯಾಬ್ ಬಾಗಿಲು ಮುಚ್ಚಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ. ಇದಕ್ಕಾಗಿ 7 ದಿನಗಳ ಕಾಲ ಮುಚ್ಚಲಾಗಿದೆ. ಕೊರೊನಾ ವೈರಸ್ ಸೋಂಕು ಕಂಡು ಬಂದ ಸಿಬ್ಬಂದಿಗಳನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್‌ಐವಿ ಕ್ಯಾಂಪಸ್‌ನಲ್ಲಿನ ಈ ಲ್ಯಾಬ್ ನಗರದಲ್ಲಿಯೇ ಮೊದಲು ಆರ್‌ಟಿ-ಪಿಸಿಆರ್ ಪ್ರಯೋಗ ನಡೆಸಿದ ಲ್ಯಾಬ್ ಆಗಿದೆ. ಇದುವರೆಗೂ 55,245 ಮಾದರಿಗಳನ್ನು ಇಲ್ಲಿ ಪರೀಕ್ಷೆ ನಡೆಸಲಾಗಿದೆ. ಕ್ವಿದಾಯಿ ಆಸ್ಪತ್ರೆಯ ತುರ್ತು ಅಗತ್ಯವಿಲ್ಲದ ಎಲ್ಲಾ ಸೇವೆಗಳನ್ನು ಗುರುವಾರದ ತನಕ ಸ್ಥಗಿತಗೊಳಿಸಲಾಗಿದೆ.
ಕಿದ್ವಾಯಿ ಆಸ್ಪತ್ರೆಯ ತುರ್ತು ವಿಭಾಗವನ್ನು ತೆರೆಯಲಾಗಿದೆ. ಕಳೆದ ಮೂರು ವಾರದಲ್ಲಿ 12 ಕ್ಯಾನ್ಸರ್ ರೋಗಿಗಳು, 10 ಸಿಬ್ಬಂದಿಗಳು, ನರ್ಸ್, ಡಾಕ್ಟರ್‌ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ ಹಲವಾರು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.












Click it and Unblock the Notifications