Mysuru To Bengaluru: ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವರರಿಗೆ ನಿತಿನ್ ಗಡ್ಕರಿ ಗುಡ್ ನ್ಯೂಸ್
Mysuru To Bengaluru Travel: ಹೆದ್ದಾರಿ ಕಾಮಗಾರಿಗಳ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಅಪ್ಡೇಟ್‌ಗಳನ್ನು ನೀಡುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ಮೂಲಸೌಕರ್ಯವನ್ನ ಉತ್ತೇಜಿಸುವುದರ ಜೊತೆಗೆ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಕುರಿತು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ ಗಮನಿಸಿ.
ಈಗಾಗಲೇ ರಾಜ್ಯದ ಹಲವೆಡೆ ಕೆಲ ಹೆದ್ದಾರಿ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಇನ್ನೂ ಕೆಲವು ಆರಂಭದ ಹಂತದಲ್ಲಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಈಗಾಗಲೇ ಸಂಚಾರಕ್ಕೂ ಮುಕ್ತಾಯವಾಗಿದ್ದು, ವಾಹನಗಳು ಸಂಚಾರ ಮಾಡುತ್ತಿವೆ. ಇದೀಗ ಈ ಎರಡು ನಗರಗಳ ನಡುವೆ ಇದ್ದ ಪ್ರಯಾಣ ಸಮಯವನ್ನು ಮತ್ತಷ್ಟು ಕಡಿತಗೊಳಿಸಲಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.

ಮೈಸೂರು-ಬೆಂಗಳೂರು ಪ್ರಯಾಣ ಮಾಡಬೇಕೆಂದರೆ ಪ್ರಯಾಣದ ಸಮಯ ನಾಲ್ಕು ಗಂಟೆ ಆಗುತ್ತಿದೆ. ಇದೀಗ ಈ ಎರಡು ನಗರಗಳ ನಡುವಿನ ಪ್ರಮಾಣದ ಸಮಯವನ್ನು ಇನ್ನೇರಡು ವರ್ಷಗಳಲ್ಲಿ ಕೇವಲ ಒಂದು ಗಂಟೆಗೆ ಇಳಿಕೆ ಮಾಡಲಾಗುತ್ತದೆ. ಅಲ್ಲದೆ, ಇನ್ನೂ ಬೇರೆ ಕಡೆಗಳಲ್ಲಿಯೂ ಇಂತಹ ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಭಾರತದ ಹೆದ್ದಾರಿ ಜಾಲವು ಒಂದು ಅಥವಾ ಎರಡು ವರ್ಷಗಳಲ್ಲಿ ಅಮೆರಿಕದಲ್ಲಿನ ಹೆದ್ದಾರಿ ಜಾಲವನ್ನು ಮೀರಿಸಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಮೈಸೂರು-ಬೆಂಗಳೂರು ಪ್ರಯಾಣದ ಸಮಯದ ಬಗ್ಗೆ ಮಾತ್ರ ಉಲ್ಲೇಖಿಸದೆ ಬೇರೆ ಬೇರೆ ಕಡೆಗಳಲ್ಲಿನ ಪ್ರಮುಖ ನಗರದ ನಡುವಿನ ಪ್ರಯಾಣ ಸಮಯ ಕಡಿತ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗಾದ್ರೆ ಯಾವೆಲ್ಲಾ ನಗರಗಳ ನಡುವಿನ ಪ್ರಮಾಣದ ಸಮಯ ಎಷ್ಟು ಇಳಿಕೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯ ಕಡಿತ
* ಇದೀಗ ದೆಹಲಿಯಿಂದ ಡೆಹ್ರಾಡೂನ್‌ಗೆ ಪ್ರಯಾಣದ ಸಮಯ 8 ಗಂಟೆ ಬೇಕಾಗುತ್ತಿದ್ದು, ಮುಂದಿನ 4-6 ತಿಂಗಳಲ್ಲಿ 2 ಗಂಟೆಗಳಿಗೆ ಇಳಿಕೆಯಾಗಲಿದೆ.
* ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯ ಕೇವಲ 2 ಗಂಟೆಗಳು ಬೇಕಾಗುತ್ತದೆ.
* ದೆಹಲಿಯಿಂದ ಮುಂಬೈಗೆ ಪ್ರಯಾಣದ ಸಮಯ 12 ಗಂಟೆ ಬೇಕಾಗುತ್ತದೆ.
* ಮೊದಲು ಮೀರತ್‌ನಿಂದ ದೆಹಲಿಗೆ ಪ್ರಯಾಣದ ಸಮಯ 4 ಗಂಟೆ ಆಗುತ್ತಿತ್ತು, ಇದೀಗ ಕೇವಲ 45 ನಿಮಿಷಗಳು ಮಾತ್ರ ಬೇಕಾಗುತ್ತದೆ.
* ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣದ ಸಮಯ 2 ಗಂಟೆಗೆ ಇಳಿಕೆಯಾಗಲಿದೆ.
* ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣದ ಸಮಯ 4 ಗಂಟೆಗಳು ಆಗುತ್ತಿತ್ತು. ಈಗ ಕೇವಲ 1 ಗಂಟೆ ಬೇಕಾಗುತ್ತಿದೆ.
ಉದ್ಘಾನೆ ದಿನಾಂಕ ವಿಸ್ತರಣೆ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕರ್ನಾಟಕ ಭಾಗದಲ್ಲಿ ಈಗಾಗಲೇ ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯ ಆಗಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಾಗದಲ್ಲಿ ಮಾತ್ರ ಕಾಮಗಾರಿ ಬಾಕಿ ಉಳಿದಿದೆ. ಆದ್ದರಿಂದ ಇದೇ ವರ್ಷ ಉದ್ಘಾನೆ ಆಗಬೇಕಿದ್ದ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ.












Click it and Unblock the Notifications