ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ

Recommended Video

      ಮುಂದುವರೆದ ವರ್ಗಾವಣೆ ಪರ್ವ, 9 ಐಎಎಸ್ ಅಧಿಕಾರಿಗಳ ವರ್ಗಾವಣೆ | Oneindia Kannada

      ಬೆಂಗಳೂರು, ಜೂನ್ 27: ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು 9 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

      ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಅದೀನ ಕಾರ್ಯದರ್ಶಿ ನಿನ್ನೆ ಈ ಆದೇಶ ಹೊರಡಿಸಿದ್ದು, 9 ಐಎಎಸ್ ಅಧಿಕಾರಿಗಳು ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಬೇಕಿದೆ.

      ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯವಾಗಿ ಇ.ವಿ.ರಮಣ ರೆಡ್ಡಿ ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಲಾಗಿದೆ. ಅಬಕಾರಿ ಆಯುಕ್ತರಾದ ಮೌನೀಶ್ ಮೌದ್ಗೀಲ್ ಅವರನ್ನು ಸರ್ವೆ ಮತ್ತು ಭೂ ಇಲಾಖೆಗೆ ವರ್ಗ ಮಾಡಲಾಗಿದೆ.

      Nine IAS officers has been transferred by government

      ಸರ್ಕಾರ ಅಸ್ಥಿತ್ವಕ್ಕೆ ಬಂದಾಗಲೇ 4 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಲೋಕಾಯುಕ್ತ ಇಲಾಖೆಯಲ್ಲಿ ಕೂಡ ಒಂದೇ ದಿನ 19 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

      ವರ್ಗಾವಣೆ ಮಾಡಲಾಗಿರುವ ಅಧಿಕಾರಿಗಳ ಪಟ್ಟಿ ಇಂತಿದೆ.

      ಡಾ.ಇ.ವಿ.ರಮಣ ರೆಡ್ಡಿ - ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
      ಮೌನೀಶ್ ಮೌದ್ಗಿಲ್ - ಆಯುಕ್ತರು, ಸರ್ವೆ ಮತ್ತು ಭೂದಾಖಲೆ, ಬೆಂಗಳೂರು
      ಬಿ.ಎ.ಶೇಖರಪ್ಪ - ಕಾಡಾ ನಿರ್ದೇಶಕರು
      ಬಿ.ಎಂ.ವಿಜಯಶಂಕರ್ - ಬೆಂಗಳೂರು ಜಿಲ್ಲಾಧಿಕಾರಿ
      ನಿತೇಶ್ ಪಟೇಲ್- ಹೆಚ್ಚುವರಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ
      ಎಂ ಲಕ್ಷ್ಮಿನಾರಾಯಣ - ಹೆಚ್ಚುವರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
      ಕಪಿಲ್ ಮೋಹನ್ - ಡಿಜಿ ಆಡಳಿತ ಮತ್ತು ತರಬೇತಿ ಸಂಸ್ಥೆ, ಮೈಸೂರು
      ಟಿ.ಕೆ.ಅನಿಲ್ ಕುಮಾರ್- ವಸತಿ ಇಲಾಖೆ ಕಾರ್ಯದರ್ಶಿ
      ನಳಿನಿ ಅತುಲ್- ಕೆಯುಐಡಿಎಫ್‌ಸಿ, ಜಂಟಿ ವ್ಯವಸ್ಥಾಪಕ ನಿರ್ದೇಶಕಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+