ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಆತ್ಮಹತ್ಯೆ ತಡೆಯಲು ನಿಮ್ಹಾನ್ಸ್ ನೀಡುತ್ತಿರುವ ತರಬೇತಿ ಏನು?

|
Google Oneindia Kannada News

ಬೆಂಗಳೂರು, ಜನವರಿ 23: ಕರ್ನಾಟಕ ಸೇರಿದಂತೆ ತಮಿಳುನಾಡು ಇನ್ನಿತರೆ ರಾಜ್ಯಗಳಲ್ಲಿ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಇದನ್ನು ತಡೆಯಲು ಪೊಲೀಸರಿಗೆ ತರಬೇತಿ ನೀಡಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ( ನಿಮ್ಹಾನ್ಸ್) ಮುಂದಾಗಿದೆ.

ತಮಿಳುನಾಡಿನ 208 ಮಂದಿ ಪೊಲೀಸರಿಗೆ ನಿಮ್ಹಾನ್ಸ್ ತರಬೇತಿ ನೀಡುತ್ತಿದೆ. ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಹೇಗೆ, ಕೋಪವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ, ಕೆಲಸದ ಒತ್ತಡದಿಂದ ಹೊರಬರುವು ಹೇಗೆ ಎನ್ನುವುದರ ಕುರಿತು ತರಬೇತಿ ನೀಡುತ್ತಿದೆ.

ಈ ತರಬೇತಿಯು 2018ರ ಅಂತ್ಯದ ವೇಳೆ ಆರಂಭವಾಗಿದೆ. ಈ ತರಬೇತಿಗೆ ಒಟ್ಟು 450 ಪೊಲೀಸರನ್ನು ಗುರುತಿಸಲಾಗಿತ್ತು. ಪೊಲೀಸರು ಈ ತರಬೇತಿ ಪಡೆದರೆ ಬಳಿಕ ತಮ್ಮ ಸಹೋದ್ಯೋಗಿಗಳು, ಕುಟುಂಬದವರಿಗೆ ತರಬೇತಿ ನೀಡಲಿದ್ದಾರೆ.

Nimhans teaching TN police to beat stress

ನಿಮ್ಹಾನ್ಸ್‌ನಲ್ಲಿ ಒಂದು ವಾರದವರೆಗೆ ಈ ತರಬೇತಿ ಮುಂದುವರೆಯಲಿದ್ದು ಒಟ್ಟು 40 ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ.

ತಮಿಳುನಾಡಿನಲ್ಲಿರುವ 1.2 ಲಕ್ಷ ಪೊಲೀಸರು ಅವರ ಕುಟುಂಬಸ್ಥರಿಗೆ ತರಬೇತಿ ಬೇಕಾಗಿದೆ. ಈಗಾಗಲೇ 7 ಬ್ಯಾಚ್‌ಗಳಿಗೆ ತರಬೇತಿ ನೀಡಲಾಗಿದೆ. ಒಟ್ಟು 5 ಸಾವಿರ ಮಂದಿಗೆ ತರಬೇತಿ ನೀಡಲಾಗುತ್ತದೆ.

Nimhans teaching TN police to beat stress

2008 ರಿಂದ 2017ರ ವರೆಗೆ ತಮಿಳುನಾಡಿನಲ್ಲಿ ಒಟ್ಟು 296 ಮಂದಿ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8 ಸಾವಿರಕ್ಕೂ ಹೆಚ್ಚು ಮಂದಿ ಕೆಲಸವನ್ನೇ ಬಿಟ್ಟಿದ್ದಾರೆ. ಪೊಲೀಸರ ಕೆಲವು ತರಬೇತಿಗಳಿಗಾಗಿ ತಮಿಳುನಾಡು ಸರ್ಕಾರ 10 ಕೋಟಿಯನ್ನು ಮೀಸಲಿಟ್ಟಿದೆ.

ಎಲ್ಲಾದರೂ ಕೊಲೆ ಇನ್ನಿತರೆ ಅವಗಢಗಳು ಸಂಭವಿಸಿದರೆ ಮೊದಲ ಜವಾಬ್ದಾರಿ ಪೊಲೀಸರದ್ದಾಗಿರುತ್ತದೆ. ಹಾಗೆಯೇ ಒತ್ತಡದ ಕೆಲಸ ಅವರದ್ದು, ಹೀಗಾಗಿ ಅವರಿಗೆ ತರಬೇತಿ ಅನಿವಾರ್ಯವಾಗಿದೆ.

English summary
National Institute of Mental Health and Neurosciences (Nimhans), one of the country’s premier mental health institutes, is teaching Tamil Nadu (TN) police how to stay calm and beat stress while at work. Over 280 policemen have been trained in the last few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X