Nice Road Bengaluru : ತಿಂಗಳಾದರೂ ಮುಗಿಯದ ನೈಸ್ ರಸ್ತೆ ದುರಸ್ಥಿ ಕಾರ್ಯ: ಹೀಗಿಂದ್ದರೂ ಟೋಲ್ ಯಾಕೆ?
ಬೆಂಗಳೂರಿನ ನೈಸ್ ರಸ್ತೆಯ ದುರಸ್ಥಿ ಕಾರ್ಯ ತಿಂಗಳಿಂದ ನಡೆಯುತ್ತಲೇ ಇದ್ದರೂ ಟೋಲ್ ಯಾಕೆ ಸ್ವೀಕರಿಸಲಾಗುತ್ತಿದೆ ಎಂದು ಸವಾರರು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಮಾರ್ಚ್ 4: ನಗರದ ನೈಸ್ ರಸ್ತೆಯ ದುರಸ್ತಿ ಮತ್ತು ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಿದೆ. ಇದು ಎಕ್ಸ್‌ಪ್ರೆಸ್‌ವೇ ಎಂದು ಕರೆಯಲ್ಪಡುವ ರಸ್ತೆಯುದ್ದಕ್ಕೂ ಜಾಮ್‌ಗಳನ್ನು ಉಂಟುಮಾಡುತ್ತದೆ. ಹೀಗಿರುವಾಗ ಇಲ್ಲಿ ಏಕೆ ಟೋಲ್ ತೆಗೆದುಕೊಳ್ಳುತ್ತಿದ್ದಾರೆ? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.
ನೈಸ್ ರಸ್ತೆಯ ದುರಸ್ತಿ ಮತ್ತು ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಿದ್ದರೂ ಟೋಲ್ ಮಾತ್ರ ಅಚ್ಚುಕಟ್ಟಾಗಿ ಪಡೆಯಲಾಗುತ್ತಿದೆ. ಇದು ಅಪರಾಧವಾಗಿದೆ. ರಸ್ತೆ ಕಾಮಗಾರಿ ಮುಗಿಯುವವರೆಗೆ ಟೋಲ್ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಸರಕಾರ ಆದೇಶ ನೀಡಬೇಕು ಎಂದು ಜನಸಾಮಾನ್ಯರು ಮನವಿ ಮಾಡಿದ್ದಾರೆ. ಜೊತೆಗೆ ಈ ಸಂದೇಶವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಲಾಗಿದೆ.

ನೈಸ್ ರಸ್ತೆ ಮೂಲಕ ನಿತ್ಯ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತಿವೆ. ಅದರೆ ದುಬಾರಿ ಟೋಲ್ ಶುಲ್ಕ ಪಾವತಿಸಿ ಪ್ರಯಾಣ ಮಾಡುವ ವಾಹನ ಸವಾರರು ರಸ್ತೆಯ ಹದಗೆಟ್ಟ ಸ್ಥಿತಿಯಿಂದಾಗಿ ನಿತ್ಯ ಪರದಾಡುವಂತಾಗಿದೆ. ರಸ್ತೆ ದುಸ್ಥಿತಿ ಬಗ್ಗೆ ಸಾರ್ವಜನಿಕರು ಹಾಗೂ ನಿವಾಸಿಗಳ ಮತ್ತು ಉದ್ಯಮಿಗಳು ದೂರು ನೀಡುತ್ತಲೇ ಇರುತ್ತಾರೆ. ದೂರಗಳ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡರೂ ನೈಸ್ ರಸ್ತೆಯ ದುರಸ್ತಿ ಮತ್ತು ಮರು-ಟಾರಿಂಗ್ ತಿಂಗಳುಗಳಿಂದ ನಡೆಯುತ್ತಲೇ ಇದೆ. ಆದ್ದರಿಂದ ಇಲ್ಲಿ ಟ್ರಾಫಿಕ್ ಉಂಟಾಗುತ್ತಿದೆ. ಹೀಗಿದ್ದರೂ ಟೋಲ್ ಯಾಕೆ ಸ್ವೀಕರಿಸಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.
Repairing and re-tarring of NICE road going on for months, causing mile long jams on the so-called expressway. Why are they taking toll? It is criminal. Should not the Government order them to stop till the road work is completed? @BSBommai pic.twitter.com/UgBi9jIdXN
— DP SATISH (@dp_satish) March 4, 2023
ನೈಸ್ ರಸ್ತೆಯಲ್ಲಿರುವ ರಸ್ತೆಗುಂಡಿಗಳ ಬಗ್ಗೆ ಮತ್ತು ಟೋಲ್ ಗೇಟ್ ಗಳಲ್ಲಿ ಸಮಯವ್ಯರ್ಥವಾಗುತ್ತಿರುವ ಕುರಿತು ಸಾರ್ವಜನಿಕರ ಹಲವಾರು ದೂರುಗಳಿವೆ.

ಸಂಚಾರಿ ದಟ್ಟಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ರೈತರ ಜಮೀನುಗಳನ್ನು ಭೂ ಸ್ವಾಧೀನಪಡಿಸಿಕೊಂಡು ನೈಸ್ ರಸ್ತೆ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನ ಹೊಸೂರ್ ರಸ್ತೆಯ ಎಲೆಕ್ಟ್ರಾನಿಕ್ ಸಿಟಿಯಿಂದ ತುಮಕೂರು ರಸ್ತೆಯವರೆಗೆ ಸುಮಾರು 42 ಕೀಲೋ ಮೀಟರ್ ನೈಸ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.
ರಸ್ತೆ ಅನುಕೂಲಕರವಾಗಿರುವ ಕಾರಣಕ್ಕಾಗಿ ಬೆಂಗಳೂರು ನಗರದ ಜನರು ನೈಸ್ ರಸ್ತೆಯನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಟೋಲ್‌ಗಳು ಪ್ರತಿನಿತ್ಯ ಲಕ್ಷ ಲಕ್ಷ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ನೈಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯನ್ನು ದುರಸ್ಥಿ ಕಾರ್ಯ ತಿಂಗಳಿಂದ ನಡೆಯುತ್ತಲೇ ಇದ್ದು ಪೂರ್ಣಗೊಳ್ಳುವುದು ಯಾವಾಗ ಎಂಬ ಪ್ರಶ್ನೆ ಮೂಡಿದೆ. ಇದರ ನಡುವೆ ಟೋಲ್ ಪಡೆಯುತ್ತಿರುವುದು ಸವಾರರ ಕೆಂಗೆಣ್ಣಿಗೆ ಗುರಿಯಾಗಿದೆ.












Click it and Unblock the Notifications