Get Updates
Get notified of breaking news, exclusive insights, and must-see stories!

Bengaluru-Mysuru Highway: ಬೆಂಗಳೂರು-ಮೈಸೂರು ರಸ್ತೆಯ ವಾಹನ ಸವಾರರ ಮೇಲೆ ಕ್ಯಾಮರಾ ಕಣ್ಣು

ಬೆಂಗಳೂರು, ಫೆಬ್ರವರಿ 06: ಹೆದ್ದಾರಿಗಳಲ್ಲಿ ಅಪಘಾತಗಳು ಕಾಮನ್ ಎನ್ನಿಸುವಷ್ಟು ಹೆಚ್ಚಾಗಿವೆ. ಹೆದ್ದಾರಿ ಎಂದು ವಾಹನಗಳು ಕೂಡ ಹೆಚ್ಚು ವೇಗವಾಗಿ ಹೋಗುತ್ತವೆ. ಅಪಘಾತಗಳನ್ನು ತಡೆಯಲು ಸಾರಿಗೆ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಅಪಘಾತ, ವೇಗದ ವಾಹನ ಚಾಲನೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಇನ್ನು, ಕಳೆದ ವರ್ಷ ಉದ್ಘಾಟನೆಯಾಗಿರುವ ಮತ್ತು ಹೆಚ್ಚು ಅಪಘಾತ ಪ್ರಕರಣಗಳು ವರದಿಯಾಗುತ್ತಿರುವ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಹೆದ್ದಾರಿಯ 6 ಸ್ಥಳಗಳಲ್ಲಿ ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲು ಎನ್‌ಎಚ್‌ಎಐ ಅನುಮೋದಿಸಿದೆ.

NHAI approved installation of cameras at Bengaluru-Mysuru Highway

ವಾಹನ ಚಾಲನೆಯ ಮಾಡುವಾಗ ಎಚ್ಚರ: ಕ್ಯಾಮೆರಾ ಕಣ್ಗಾವಲು ಇದೆ!

ಅಪಘಾತ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 3.6 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 6 ಸ್ಥಳಗಳಲ್ಲಿ ಎಎನ್‌ಪಿಆರ್ (Automatic Number Plate Recognition) ಕ್ಯಾಮೆರಾಗಳನ್ನು ಅಳವಡಿಸಲು ಅನುಮೋದ ನೀಡಿದೆ.

ಈ ಎಎನ್‌ಪಿಆರ್ ಕ್ಯಾಮೆರಾಗಳು ಓವರ್ ಸ್ಪೀಡಿಂಗ್, ಲೇನ್ ಶಿಸ್ತು, ರಾಂಗ್ ಸೈಡ್ ಮೂವ್ ಮೆಂಟ್‌ಗಳ ಮೇಲೆ ಗಮನ ಇರಿಸಲಿವೆ. ಇದರ ಜೊತೆಗೆ ಎಕ್ಸಸಪ್ರೆಸ್‌ವೇ ನಲ್ಲಿ ದ್ವಿ ಚಕ್ರ ಮತ್ತು ಆಟೋ ಓಡಾಟದ ಮೇಲೂ ಕಣ್ಗಾವಲು ಇಡಲಿವೆ. ಇದರಿಂದ ಅಪಘಾತ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ.

ಎನ್‌ಎಚ್‌ಎಐ ಮಾಹಿತಿ ಹಂಚಿಕೊಂಡ ಪ್ರತಾಪ್ ಸಿಂಹ

ಇನ್ನು, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶ ಪ್ರತಿಯನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "3.6 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 6 ಸ್ಥಳಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸಲು ಎನ್‌ಎಚ್‌ಎಐ ಅನುಮೋದಿಸಿದೆ. ಇದು ಓವರ್ ಸ್ಪೀಡಿಂಗ್, ಲೇನ್ ಶಿಸ್ತು, ರಾಂಗ್ ಸೈಡ್ ಮೂವ್ ಮೆಂಟ್ ಮತ್ತು 2/3 ವೀಲರ್ ಇತ್ಯಾದಿಗಳನ್ನು ಸೆರೆಹಿಡಿಯುತ್ತದೆ" ಎಂದು ಹೇಳಿದ್ದಾರೆ.

NHAI approved installation of cameras at Bengaluru-Mysuru Highway

ಇತ್ತ, ಮಾರ್ಚ್ 12, 2023 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಿದ್ದರು. ವರ್ಷವಾಗುತ್ತಾ ಬಂದರೂ ಕೂಡ ಇನ್ನು ಅಲ್ಲಿನ ಸಮಸ್ಯೆಗು ಮಾತ್ರ ಕಡಿಮೆಯಾಗಿಲ್ಲ. ಒಂದಲ್ಲ ಒಂದು ಸಮಸ್ಯೆ ವರದಿಯಾಗುತ್ತಲೆ ಇವೆ. ಅಪಘಾತ ಪ್ರಕರಣಗಳಲ್ಲಿ ದಾಖಲೆ ಬರೆಯುತ್ತಿದೆ ಈ ಹೆದ್ದಾರೆ. ಮುಗಿಯದ ಸರ್ವಿಸ್ ರಸ್ತೆಗಳ ಕಾಮಗಾರಿ, ಮಾರಣಾಂತಿಕ ಅಪಘಾತಗಳು, ದರೋಡೆಗಳು, ಟೋಲ್ ಶುಲ್ಕ ಸೇರಿ ಹಲವು ವಿವಾದಗಳಿಗೆ ಈ ಹೆದ್ದಾರಿ ಸುದ್ದಿಯಾಗುತ್ತಿದೆ.

ANPR ಕ್ಯಾಮೆರಾಗಳು

Automatic Number Plate Recognition (ANPR) ಕ್ಯಾಮೆರಾಗಳು ನೈಜ ಸಮಯದಲ್ಲಿ ವಾಹನಗಳ ನಂಬರ್ ಪ್ಲೇಟ್‌ಗಳನ್ನು ರೆಕಗೈಸ್ ಮಾಡಿ ಡಿಜಿಟಲ್ ಮಾಡುವ ಕ್ಯಾಮೆರಾಗಳಾಗಿವೆ. ಈ ಕ್ಯಾಮೆರಾಗಳು ಸರ್ವರ್‌ಗಳು ಅಥವಾ ಟ್ರಿಗ್ಗರ್‌ಗಳಿಲ್ಲದೆಯೇ ಸಂಪೂರ್ಣ ಪತ್ತೆ/ರೆಕಾರ್ಡಿಂಗ್/ಪ್ರಕ್ರಿಯೆ/ರವಾನೆ ಪ್ರಕ್ರಿಯೆಯನ್ನು ಸ್ವತಃ ಮಾಡುತ್ತವೆ. ಉದ್ದುದ್ದದ ವೀಡಿಯೊಗಳು/ಚಿತ್ರಗಳ ಬದಲಿಗೆ ಕಾಂಪ್ಯಾಕ್ಟ್ ಡಿಜಿಟಲ್ ಡೇಟಾವನ್ನು ಇವುಗಳ ಮೂಲಕ ಕಳುಹಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+