ಹೊಸದಾಗಿ ಹಾಕಿರುವ ರಸ್ತೆಗಳು ಕಿತ್ತು ಹೋಗುತ್ತಿವೆ: ವರ್ತೂರು, ವೈಟ್‌ಫೀಲ್ಡ್ ನಿವಾಸಿಗಳ ದೂರು

ಬೆಂಗಳೂರು, ಜುಲೈ. 30: ಎಚ್‌ಎಎಲ್ ವಾರ್ಡ್‌ನ ವರ್ತೂರು, ವೈಟ್‌ಫೀಲ್ಡ್ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸದಾಗಿ ಹಾಕಲಾದ ರಸ್ತೆಯಲ್ಲಿ ಗುಂಡಿಗಳು ಕಂಡುಬರುತ್ತಿವೆ. ಜೊತೆಗೆ ಹೊಸದಾಗಿ ಹಾಕಿರುವ ಟಾರ್ ಕೂಡ ಕಿತ್ತುಹೋಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಸಮಗ್ರ ಅಭಿವೃದ್ಧಿ ಯೋಜನಾ ರಸ್ತೆಯ ಭಾಗವಾಗಿರುವ ವರ್ತೂರು - ಬಳಗೆರೆ ಹಾಗೂ ಬಳಗೆರೆ ಪಾಣತ್ತೂರು ಮುಖ್ಯರಸ್ತೆಯಲ್ಲಿ ಹೊಂಡಗಳು ಕಾಣಿಸಿಕೊಳ್ಳುತ್ತಿವೆ ಎಂದಿರುವ ನಿವಾಸಿಗಳು ಕಳಪೆ ಕಾಮಗಾ ನಡೆದಿದೆ ಎಂದು ಆರೋಪಿಸಿ ಬಿಬಿಎಂಪಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಪಾವತಿಯನ್ನು ಬಾಕಿ ಇರಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

Newly laid road started developing potholes, while the tar is peeling off

ವರ್ತೂರು ಸಮೀಪದ ಆದಿತ್ಯ ಫ್ರಾಂಡೋಸೊ ಅಪಾರ್ಟ್‌ಮೆಂಟ್‌ನ ನಿವಾಸಿಯೊಬ್ಬರು ಮಾತನಾಡಿ, ವಿಧಾನಸಭೆ ಚುನಾವಣೆಗೆ ಮುನ್ನವೇ ಟಾರ್‌ ಹಾಕಲಾಗಿದ್ದು, ಎರಡು ತಿಂಗಳಲ್ಲೇ ವರ್ತೂರು ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. "ಗುಂಡಿಗಳನ್ನು ಬೇಗನೆ ತುಂಬಬೇಕು, ಇಲ್ಲದಿದ್ದರೆ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ, ಧೂಳಿನ ಸಂಬಂಧಿತ ಸೋಂಕುಗಳು ಕಂಡುಬರುತ್ತವೆ" ಎಂದು ಹೇಳಿದ್ದಾರೆ.

ವರ್ತೂರು ರೈಸಿಂಗ್‌ನ ಮತ್ತೊಬ್ಬ ನಿವಾಸಿ ಮಾತನಾಡಿ, ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಹಣ ಪಾವತಿಯಾಗದಂತೆ ಹಾಗೂ ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ವಿಶೇಷ ಆಯುಕ್ತ ತ್ರಿಲೋಕ್‌ ಚಂದ್ರ ಅವರಿಗೆ ಮನವಿ ಸಲ್ಲಿಸಲಾಗುವುದು. ದೋಷಯುಕ್ತ ಹೊಣೆಗಾರಿಕೆಗೆ ಅವಧಿ ಇದೆ. ಸಂಬಂಧಪಟ್ಟ ಗುತ್ತಿಗೆದಾರರು ರಸ್ತೆಗಳನ್ನು ಸರಿಪಡಿಸಬೇಕು. ಸೊರಹುಣ್ಸೆ ಮುಖ್ಯರಸ್ತೆ, ಹಲಸಹಳ್ಳಿ ಮುಖ್ಯರಸ್ತೆ, ಬಳಗೆರೆ-ಪಾಣತ್ತೂರು ರಸ್ತೆ, ಬಳಗೆರೆ-ಗುಂಜೂರು ರಸ್ತೆಗಳಲ್ಲಿ ಇತ್ತೀಚೆಗೆ ಡಾಂಬರೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Newly laid road started developing potholes, while the tar is peeling off

ಮಹಾದೇವಪುರ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಮುನಿ ರೆಡ್ಡಿ ಮಾತನಾಡಿ, ಹೊಂಡಗಳ ಬಗ್ಗೆ ಹೆಚ್ಚಿನ ದೂರುಗಳು ಆರ್ಟಿರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿಂದ ಬಂದಿವೆ. ಅದು ಮುಖ್ಯವಾಗಿ ಬಿಡಬ್ಲ್ಯುಎಸ್‌ಎಸ್‌ಬಿಯ ಕಾಮಗಾರಿಗಳಿಂದಾಗಿ ಆಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+