• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರು ಬಸವಳಿದರೇ ಟ್ರಾಫಿಕ್ ಜಾಮ್‌ಗೆ: ವಾಹನ ನೋಂದಣಿ ಕುಸಿತ

By Nayana
|

ಬೆಂಗಳೂರು, ಆಗಸ್ಟ್ 25: ಬೆಂಗಳೂರಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳ ನೋಂದಣಿ ಸಂಖ್ಯೆ ಕ್ಷೀಣಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2756 ವಾಹನಗಳ ನೋಂದಣಿ ಕಡಿಮೆಯಾಗಿದೆ.

ವಾಹನಗಳ ಖರೀದಿ ಪ್ರಮಾಣ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಆದರೆ ಕಾರಣ ಮಾತ್ರ ಸಾರಿಗೆ ಇಲಾಖೆಯವರಿಗೂ ಕೂಡ ಗೊತ್ತಿಲ್ಲ, ಟ್ರಾಫಿಕ್‌ ಸಮಸ್ಯೆ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಳವು ವಾಹನಗಳ ಖರೀದಿ ಮಾಡದಿರಲು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

ಮೆಟ್ರೋ ರೈಲು ಆರಂಭಗೊಂಡ ಆರಂಭಗೊಂಡ ಬಳಿಕ ಬಹುತೇಕರು ಸ್ವಂತ ವಾಹನಗಳನ್ನು ಬಿಟ್ಟು ಮೆಟ್ರೋದಲ್ಲಿ ತೆರಳುತ್ತಿದ್ದಾರೆ. ಸಮಯ ಹಾಗೂ ಉಳಿತಾಯದ ಜತೆಗೆ ಟ್ರಾಫಿಕ್‌ ನಲ್ಲಿ ಸಿಕ್ಕಿಹಾಕಿಕೊಳ್ಳುವ ಸಮಸ್ಯೆ ಇಲ್ಲ ಎಂದು ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದಾರೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಹಿಂದೆ ಸಾರಿಗೆ ಸಚಿವರಾಗಿದ್ದ ಎಚ್‌ ಎಂ ರೇವಣ್ಣ ಪ್ರತಿ ತಿಂಗಳ ಎರಡನೇ ಭಾನವಾರವನ್ನು ವಿರಳ ಸಂಚಾರಿ ದಿನವನ್ನಾಗಿ ಆಚರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು.ಆದರೂ ಜನರು ಎಚ್ಚೆತ್ತುಕೊಂಡಂತೆ ಗೋಚರಿಸುತ್ತಿಲ್ಲ. ಆದರೂ ವಾಹನಗಳ ಖರೀದಿ ಕಡಿಮೆಯಾಗಿರುವುದು ಸಂತಸದ ಸಂಗತಿಯಾಗಿದೆ.

 ಮೆಟ್ರೋ ಆರಂಭ, ಮಾಲಿನ್ಯ ಇಳಿಮುಖ

ಮೆಟ್ರೋ ಆರಂಭ, ಮಾಲಿನ್ಯ ಇಳಿಮುಖ

ನಮ್ಮ ಮೆಟ್ರೋ ಆರಂಭದಿಂದಾಗಿ ನಗರದಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದ್ದು ವಾಯು ಮಾಲಿನ್ಯ ಪ್ರಮಾಣ ತಗ್ಗಿದೆ, ಸಾಕಷ್ಟು ಮಂದಿಮ ತಮ್ಮ ಸ್ವಂತ ವಾಹನಗಳನ್ನು ಮೆಟ್ರೋ ನಿಲ್ದಾಣಗಳಲ್ಲಿ ನಿಲ್ಲಿಸಿ ಮೆಟ್ರೋ ಮೂಲಕ ತಮ್ಮ ಕಚೇರಿಗೆ ತೆರಳುವುದರಿಂದ ನಗರದಲ್ಲಿ ವಾಹನಗಳು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

 ವರ್ಷದಲ್ಲಿ 2756 ವಾಹನಗಳ ನೋಂದಣಿ ಕಡಿಮೆ

ವರ್ಷದಲ್ಲಿ 2756 ವಾಹನಗಳ ನೋಂದಣಿ ಕಡಿಮೆ

ಸಾರಿಗೆ ಇಲಾಖೆ ಅಂಕಿ ಅಂಶಗಳ ಪ್ರಕಾರ ಈ ವರ್ಷ ಜನವರಿಯಿಂದ ಮೇವರೆಗೆ ಐದು ತಿಂಗಳಲ್ಲಿ 1,43,458 ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2756 ವಾಹನಗಳ ನೋಂದಣಿ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ 2017ರಲ್ಲಿ ಬೆಂಗಳೂರಿನ ಅನೇಕ ಸಾರಿಗೆ ಕಚೇರಿಗಳಲ್ಲಿ 1,46,224 ವಾಹನಗಳು ನೋಂದಣಿಯಾಗಿದ್ದವು.

 ಕಾರುಗಳ ನೋಂದಣಿಯೂ ಕುಸಿತ

ಕಾರುಗಳ ನೋಂದಣಿಯೂ ಕುಸಿತ

ಕಾರುಗಳ ನೋಂದಣಿಯು ಕೂಡ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆಯಾಗಿದೆ. 2018ರ ಜನವರಿಯಿಂದ ಮೇ ತಿಂಗಳವರೆಗೆ 34,118 ಕಾರುಗಳು ಬೆಂಗಳೂರಲ್ಲಿ ನೋಂದಣಿಯಾಗಿವೆ. 2017ರ ಇದೇ ಅವಧಿಯಲ್ಲಿ 38707 ಕಾರುಗಳು ನೋಂದಣಿಯಾಗಿದ್ದವು. ಬೆಂಗಳೂರಲ್ಲಿ ವಾಯು ಮಾಲಿನ್ಯ ತಗ್ಗಿಸುವ ಉದ್ದೇಶ ಮತ್ತು ವಾಹ ದಟ್ಟಣೆ ನಿಯಂತ್ರಿಸಲು ಸಕಾರ ಸಮೂಹ ಸಾರಿಗೆ ಬಳಕೆಗೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ.

 ಟ್ರಾಫಿಕ್‌ ಜಾಮ್‌, ತೈಲ ಬೆಲೆ ಹೆಚ್ಚಳವೂ ಕಾರಣ

ಟ್ರಾಫಿಕ್‌ ಜಾಮ್‌, ತೈಲ ಬೆಲೆ ಹೆಚ್ಚಳವೂ ಕಾರಣ

ವಾಹನಗಳ ಖರೀದಿಗೆ ಬೆಂಗಳೂರು ಜನತೆ ಮುಂದಾಗದಿರಲು ಟ್ರಾಫಿಕ್ ಜಾಮ್ ಪ್ರಮುಖ ಕಾರಣವಾಗಿದ್ದರೆ ಅದರ ಜತೆಗೆ ತೈಲ ಬೆಲೆ ಏರಿಕೆಯೂ ಕೂಡ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದೆ ಎನ್ನಬಹುದು.

English summary
Are Bengalureans fed up with traffic jam? According to RTO sources, new vehicles like car, bike and others registration has been declined in the last five months comparatively the same period of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X