ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೆಂಟ್ ಹೋದರೆ ದೂರು ಬೇಕಿಲ್ಲ: ಬೆಸ್ಕಾಂಗೆ ಆಟೋಮೆಟಿಕ್ ಮಾಹಿತಿ

|
Google Oneindia Kannada News

ಬೆಂಗಳೂರು, ಮಾರ್ಚ್ 1: ಬೆಂಗಳೂರಿನ ನಾಗರಿಕರು ಇನ್ನುಮುಂದೆ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಬೆಸ್ಕಾಂ ಸಹಾಯವಾಣಿ ಅಥವಾ ಎಸ್ಎಂಎಸ್ ಮೂಲಕ ಕಂಟ್ರೋಲ್ ರೂಂಗೆ ಕರೆ ಮಾಡಬೇಕಿಲ್ಲ.

ಯಾವುದೇ ಪ್ರದೇಶದಲ್ಲಿ ವಿದ್ಯುತ್ ಕಡಿತ ಉಂಟಾದರೂ ರಿಮೋಟ್ ಸೆನ್ಸಾರ್ ತಂತ್ರಜ್ಞಾನದ ಮೂಲಕ 11 ಕೆವಿ ವಿದ್ಯುತ್ ಕೇಂದ್ರಕ್ಕೆ ಡಿಸ್ಟ್ರಿಬ್ಯೂಷನ್ ಆಟೊಮೇಟೆಡ್ ಸಿಸ್ಟಮ್ ನೇರ ಮಾಹಿತಿ ರವಾನಿಸುತ್ತದೆ. ಈ ನೂತನ ವ್ಯವಸ್ಥೆಯನ್ನು ಬೆಂಗಳೂರಿನ ಎಲ್ಲಾ 11 ಕೆವಿ ಕೇಂದ್ರಗಳಲ್ಲಿ ಅಳವಡಿಸಲು ಬೆಸ್ಕಾಂ ಮುಂದಾಗಿದೆ.

ಪ್ರಾಯೋಗಿಕವಾಗಿ ಎಚ್ಎಸ್ಆರ್ ಲೇಔಟ್ ನಲ್ಲಿ ಕೇಂದ್ರವನ್ನು ಆರಂಭಿಸಲಾಗಿದೆ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ಬುಧವಾರ ಚಾಲನೆ ನೀಡಿದರು. ಎಲ್ಲಾ ಕಡೆಗಳಲ್ಲಿ ಕೇಂದ್ರ ಆರಂಭಗೊಂಡ ನಂತರ ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ಬೆಸ್ಕಾಂಗೂ ಕೂಡ ಸಾಕಷ್ಟು ಸಹಾಯವಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

New system helps remotely spot, fix faulty power lines

ಈ ಹೊಸ ಯೋಜನೆಯಿಂದ 5 ರಿಂದ 10 ನಿಮಿಷದಲ್ಲಿ ಕರೆಂಟ್ ಪಡೆಯಬಹುದು, ಮೊದಲು ಸಾರ್ವಜನಿಕರು ಕರೆ ಮಾಡಿ ಎಲ್ಲಿ ತೊಂದರೆಯಾಗಿದೆ ಯಾವ ಭಾಗದಲ್ಲಿ ಕರೆಂಟ್ ಹೋಗಿದೆ ಎಂದು ಮಾಹಿತಿ ನೀಡಿ, ನಂತರ ಕಂಟ್ರೋಲ್ ರೂಮಿನಲ್ಲಿರುವ ಸಿಬ್ಬಂದಿಗಳು ಮಾಹಿತಿ ರವಾನೆ ಮಾಡಿ, ಕರೆಂಟ್ ಬರುವುದು40 ನಿಮಿಷದಿಂದ 1 ಗಂಟೆ ಕಾಲ ಬೇಕಿತ್ತು ಆದರೆ ಇದೀಗ 15 ನಿಮಿಷಗಳೊಳಗಾಗಿ ಕರೆಂಟ್ ಬರಲಿದೆ.

ಗ್ರಾಹಕರ ಹಿತಾಸಕ್ತಿ ರಕ್ಷಿಸುವಂತೆ ಬಿ-ಪ್ಯಾಕ್ ಮನವಿಗ್ರಾಹಕರ ಹಿತಾಸಕ್ತಿ ರಕ್ಷಿಸುವಂತೆ ಬಿ-ಪ್ಯಾಕ್ ಮನವಿ

ಬೆಸ್ಕಾಂ ವಿದ್ಯುತ್ ಖರೀದಿ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ವಿರೋಧಬೆಸ್ಕಾಂ ವಿದ್ಯುತ್ ಖರೀದಿ ಪ್ರಸ್ತಾಪಕ್ಕೆ ಎಫ್‌ಕೆಸಿಸಿಐ ವಿರೋಧ

English summary
Citizens reeling under power cuts will not have to call the control room or helpline to complain about power outage in the area soon. Using it's newly launched Distribution Automatic System, which is capable or remotely monitoring , controlling and operation the 11kv network in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X