ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ನಲ್ಲಿ ಗಂಡನನ್ನು ಹುಡುಕಲು ಹೋಗಿ 18 ಲಕ್ಷ ರೂ. ಗಂಟು ಕಳೆದುಕೊಂಡ ಮಹಿಳೆ!

|
Google Oneindia Kannada News

ಬೆಂಗಳೂರು, ಅ. 19: ಆನ್‌ಲೈನ್ ಡೇಟಿಂಗ್ ಆಪ್‌ ನಲ್ಲಿ ವರನನ್ನು ಆಯ್ಕೆ ಮಾಡಿಕೊಳ್ಳಲು ಹೋಗಿ ಮಹಿಳೆಯೊಬ್ಬಳು ಬರೋಬ್ಬರಿ 18 ಲಕ್ಷ ರೂ. ಕಳೆದುಕೊಂಡಿದ್ದಾಳೆ. ಇನ್ನೊಂದೆಡೆ ಆನ್‌ಲೈನ್ ನಲ್ಲಿ ನಲ್ಲಿ ಪಾರ್ಟ್ ಟೈಮ್ ಜಾಬ್ ಪಡೆಯುವ ಆಸೆಗೆ ಬಿದ್ದ ಮಹಿಳೆಗೆ ಸೈಬರ್ ಕ್ರಿಮಿನಲ್ ಗಳು 19 ಲಕ್ಷ ರೂ. ದೋಖಾ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ಸೈಬರ್ ವಂಚನೆಗೆ ಒಳಗಾದ ಅಸಲಿ ಕಥೆಯಿದು.

ಬದುಕಲು ಬೇಕಾದಷ್ಟು ಹಣವದ್ದರೂ ಮತ್ತಷ್ಟು ಗಳಿಸುವ ಆಸೆಗೆ ಬಿದ್ದ ಮಹಿಳೆ ಹಣ ಕಳೆದುಕೊಂಡಿದ್ದು ಒಂದೆಡೆಯಾದರೆ, ಆನ್‌ಲೈನ್ ನಲ್ಲಿ ವಿದೇಶಿ ವರನನ್ನು ಹುಡುಕಿ ಸೆಟ್ಲ್ ಆಗುವ ಕನಸು ಕಾಣುತ್ತಿದ್ದ ಮಹಿಳೆ ತನ್ನ ಬ್ಯಾಂಕ್ ಖಾತೆಗಳಲ್ಲಿ ಇಟ್ಟುಕೊಂಡಿದ್ದ ಎಲ್ಲಾ ಹಣ ಕೊಟ್ಟು ನಾಮ ಹಾಕಿಸಿಕೊಂಡಿದ್ದಾಳೆ. ಇಡೀ ಬದುಕೇ ಆನ್‌ಲೈನ್ ಮಯವಾಗಿರುವ ಈ ದಿನಗಳಲ್ಲಿ ಸೈಬರ್ ವಂಚನೆಗಳು ಅಷ್ಟೇ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ.

ಪಾರ್ಟ್ ಟೈಮ್ ಜಾಬ್ ಆಸೆ ಬಿದ್ದಿದ್ದಕ್ಕೆ 19.67 ಲಕ್ಷ ದೋಖಾ:

ಮನೆಯಲ್ಲಿಯೇ ತಾತ್ಕಾಲಿಕವಾಗಿ ಕೆಲಸ ಮಾಡಿ ಹಣ ಗಳಿಸಲು ಆಸೆ ಬಿದ್ದ ಮಹಿಳೆ ಆನ್‌ಲೈನ್ ನಲ್ಲಿ ಐಡಿಯಾ ಹುಡುಕುತ್ತಿದ್ದಳು. ಸಾಮಾಜಿಕ ಜಾಲ ತಾಣದಲ್ಲಿ ಪರಿಚಯವಾದ ವ್ಯಕ್ತಿ, ಉತ್ಪನ್ನಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದ. ಇದನ್ನು ನಂಬಿದ್ದ ಮಡಿವಾಳದ ಮಾರುತಿನಗರ ನಿವಾಸಿ ಯೊನ್ನೆ ನಟಾಶಾ, ಆತ ಹೇಳಿದಂತೆ ಮಾಡುತ್ತಿದ್ದಳು. ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಆಸೆ ಹುಟ್ಟಿಸಿ ಆನ್ ಲೈನ್ ನಲ್ಲಿ ಪರಿಚಯವಾಗಿದ್ದ ಅಪರಿಚಿತ ವ್ಯಕ್ತಿ ಲಿಂಕ್ ಕಳುಹಿಸಿ ವಿವರಗಳನ್ನು ಭರ್ತಿ ಮಾಡಿ ಕಳುಹಿಸುವಂತೆ ಸೂಚಿಸಿದ್ದ. ಅದೇ ರೀತಿ ತನ್ನ ಎಲ್ಲಾ ವಿವರಗಳನ್ನು ನಟಾಶಾ ಕಳುಹಿಸಿದ್ದಳು.

new scam of online fraud reported in Bengaluru

ಅರ್ಜಿ ತುಂಬಿಸುವ ನೆಪದಲ್ಲಿ ಎಲ್ಲಾ ವಿವರಗಳನ್ನು ಪಡೆದಿದ್ದ ಅಪರಿಚಿತ ವ್ಯಕ್ತಿ ಪಾರ್ಟ್ ಟೈಮ್ ಜಾಬ್ ಕೇಳಿದ್ದ ಮಹಿಳೆಯ ಬ್ಯಾಂಕ್ ಖಾತೆಗಳಲ್ಲಿದ್ದ 19.67 ಲಕ್ಷ ರೂ. ಹಣವನ್ನು ಎಗರಿಸಿದ್ದಾನೆ. ಆ ಬಳಿಕ ಸಂಪರ್ಕಕ್ಕೆ ಸಿಗದೇ ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡು ಎಸ್ಕೇಪ ಆಗಿದ್ದಾನೆ. ಪಾರ್ಟ್ ಟೈಮ್ ಜಾಬ್ ಗೆ ಆಸೆ ಬಿದ್ದು ಕೈಯಲ್ಲಿದ್ದ ಅಷ್ಟೂ ಹಣ ಕಳೆದುಕೊಂಡ ನಟಾಶಾ ಮೋಸ ಹೋಗಿರುವ ವಿಚಾರ ಅರಿವಿಗೆ ಬಂದ ನಂತರ ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪಾರ್ಟ್ ಟೈಮ್ ಜಾಬ್ ನಿಂದ ಹಣ ಗಳಿಸುವ ಆಸೆಗೆ ಬಿದ್ದು ಇದ್ದ ಹಣ ಕಳೆದುಕೊಂಡು ಇದೀಗ ಬೀದಿಗೆ ಬಿದ್ದಂತಾಗಿದೆ.

ಡೇಟಿಂಗ್ ಆಪ್ ನಲ್ಲಿ ಗಂಡನ ಹುಡುಕಲು ಹೋಗಿ ಕೈ ಸುಟ್ಟುಕೊಂಡಳು!:

ಇನ್ನು ಬಾಳ ಸಂಗಾತಿ ಹುಡುಕಿಕೊಡುವ ಅನೇಕ ಡೇಟಿಂಗ್ ಆಪ್‌ಗಳು ಹುಟ್ಟಿಕೊಂಡಿವೆ. ಆನ್‌ಲೈನ್ ನಲ್ಲಿ ಬಾಳ ಸಂಗಾತಿ ಹುಡುಕುವರ ಮನಸ್ಥಿತಿ ಅರಿತಿರುವ ಸೈಬರ್ ಕಳ್ಳರು ನಾನಾ ವೇಷದಲ್ಲಿ ಗಾಳ ಹಾಕಿ ನಾಮ ಹಾಕುವುದನ್ನು ಕರಗತ ಮಾಡಿಕೊಂಡಿದ್ದಾರೆ. ಡೇಟಿಂಗ್ ಆಪ್ ಮೂಲಕ ಸೂಕ್ತ ವರನ ಶೋಧದಲ್ಲಿ ತೊಡಗಿದ ಮಧ್ಯ ವಯಸ್ಕ ಮಹಿಳೆ ಅಪರಿಚಿತನನ್ನು ನಂಬಿ 18.29 ಲಕ್ಷ ರೂ. ಕಳೆದುಕೊಂಡಿದ್ದಾರೆ.

new scam of online fraud reported in Bengaluru

ಆಸ್ಟಿನ್ ಟೌನ್ ನಿವಾಸಿ ನಿಲೋಫರ್ ಹಣ ಕಳೆದುಕೊಂಡವರು. ಆಸ್ಟಿನ್ ಟೌನ್ ಫ್ಲಾಟ್ ನಲ್ಲಿ ತಂಗಿರುವ ನಿಲೋಫರ್ ಖಾಸಗಿ ಕಂಪನಿಯ ಉದ್ಯೋಗಿ. ಡೇಟಿಂಗ್ ಆಪ್ ಮೂಲಕ ಸೂಕ್ತ ವರನನ್ನು ನೋಡಿ ಮದುವೆಯಾಗಲು ನಿಶ್ಚಯಿಸಿದ್ದಳು. ಡೇಟಿಂಗ್ ಆಪ್ ನಲ್ಲಿ ಪರಿಚಿತವಾದ ವ್ಯಕ್ತಿ ಪರಸ್ಪರ ಚಾಟ್ ಮಾಡುತ್ತಿದ್ದರು. ಇಬ್ಬರು ಮದುವೆಯಾಗುವ ಮಾತುಕತೆ ಆಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯಲು ತುದಿಗಾಲಲ್ಲಿ ನಿಂತಿದ್ದ ನಿಲೋಫರ್‌ನ ಮನಸ್ಥಿತಿ ಅರಿತ ಸೈಬರ್ ವಂಚಕ, ತಾನು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದೇನೆ. ಸಹಾಯ ಮಾಡುವಂತೆ ಕೇಳಿದ್ದಾನೆ. ಆತನ ಮಾತು ನಂಬಿ ಭಾವಿ ಪತಿಗೆ ತನ್ನ ಬ್ಯಾಂಕ್ ಖಾತೆಗಳಲ್ಲಿದ್ದ 18. 29 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದ್ದಾಳೆ. ಹಣ ಪೂರ್ತಿ ಕೈಗೆ ಸಿಕ್ಕ ಮೇಲೆ ಆನ್‌ಲೈನ್ ವರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ. ಅತನ ವಿವರಗಳು ಕೂಡ ನಿಲೋಫರ್ ಬಳಿ ಇಲ್ಲ. ವರನೂ ಇಲ್ಲ, ಹಣವೂ ಇಲ್ಲ, ಎಲ್ಲಾ ಕಳೆದುಕೊಂಡ ನಿಲೋಫರ್ ಮೋಸ ಹೋದ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Recommended Video

ಮೈದಾನದಲ್ಲಿ Rishab Pant ಅವರು Ashwinಗೆ ಹೇಳಿದ್ದೇನು | Oneindia Kannada

English summary
Woman Loses 18 Lakhs to Find Husband in Online; A woman who falls for a part-time job has fallen into a cyber scam and lost 20 lakh know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X