ಬೆಂಗಳೂರಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕಿದರೆ ₹50,000 ದಂಡ, ಎಫ್‌ಐಆರ್‌:ಬಹಿರಂಗವಾಗಿ ಶುಭಾಯಶ ಕೋರಂಗಿಲ್ಲ, ಸಂತಾಪ ಹೇಳಂಗಿಲ್ಲ

ಬೆಂಗಳೂರು, ಆಗಸ್ಟ್‌ 09: ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ನಿಷೇಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ನಿರ್ಮಿಸಲಾದ ಪ್ರತಿ ಅನಧಿಕೃತ ಹೋರ್ಡಿಂಗ್‌ಗೆ 50,000 ರೂ ದಂಡ ವಿಧಿಸುತ್ತದೆ. ಇದು ಆಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಕರ್ನಾಟಕ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. 'ಬೆಂಗಳೂರಿನಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ ವಿಚಾರವಾಗಿ ನಾವು ಗಂಭೀರವಾಗಿದ್ದೇವೆ. ಇದರಲ್ಲಿ ಯಾರನ್ನೂ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನನ್ನ ಬೆಂಬಲಿಗರೇ ಆಗಿರಲಿ, ಡಿಕೆ ಶಿವಕುಮಾರ್‌ ಬೆಂಬಲಿಗರೇ ಆಗಿರಲಿ ಫ್ಲೆಕ್ಸ್‌ ಅಥವಾ ಬ್ಯಾನರ್‌ ಹಾಕಿದವರು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಬಿಬಿಎಂಪಿ ಜೊತೆ ನಿಲ್ಲುತ್ತೇವೆ' ಎಂದು ತಿಳಿಸಿದ್ದಾರೆ.

New Rule for Putting Up Hoardings in Bengaluru: Pay Rs.50000 fine on Unauthorised Banners

'ನಾವು ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಇನ್ನೆರಡು ಮೂರು ದಿನಗಳಲ್ಲಿ ರಾಜಕೀಯ ಮುಖಂಡರು ಅಥವಾ ಇತರೆ ವ್ಯಕ್ತಿಗಳು ಹಾಕಿರುವ ಹೋರ್ಡಿಂಗ್‌ಗಳು ಸೇರಿದಂತೆ ಎಲ್ಲಾ ರೀತಿಯ ಹೋರ್ಡಿಂಗ್‌ಗಳನ್ನು ತೆಗೆದುಹಾಕಲಾಗುವುದು. ಆದೇಶವನ್ನು ಉಲ್ಲಂಘಿಸಿದವರಿಗೆ ಆಗಸ್ಟ್ 15 ರಿಂದ ಪ್ರತಿ ಪ್ರಕರಣಕ್ಕೆ 50,000 ರೂಪಾಯಿ ದಂಡವನ್ನು ಬಿಬಿಎಂಪಿ ವಿಧಿಸುತ್ತದೆ' ಎಂದು ಶಿವಕುಮಾರ್ ಹೇಳಿದ್ದಾರೆ.

ಬಿಬಿಎಂಪಿ 2018 ರಲ್ಲಿ ಎಲ್ಲಾ ರೀತಿಯ ಹೋರ್ಡಿಂಗ್‌ಗಳನ್ನು ನಿಷೇಧಿಸಲಾಗಿತ್ತು. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿಯಮವನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ.

ಇತ್ತೀಚೆಗಷ್ಟೇ ನಡೆದ ವಿಚಾರಣೆ ವೇಳೆ ಆರೋಪಿಗಳ ಬಗ್ಗೆ ಮೃದು ಧೋರಣೆ ತೋರಿದ ಅಧಿಕಾರಿಗಳನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕಾನೂನುಬಾಹಿರವಾಗಿ ಹೋರ್ಡಿಂಗ್‌ಗಳನ್ನು ಹಾಕಿದವರಿಗೆ ದಂಡ ವಿಧಿಸದಿರುವ ಬಗ್ಗೆ ನ್ಯಾಯಾಲಯ ಆಘಾತ ವ್ಯಕ್ತಪಡಿಸಿದೆ.

New Rule for Putting Up Hoardings in Bengaluru: Pay Rs.50000 fine on Unauthorised Banners

ಬೆಂಗಳೂರು ನಗರದಲ್ಲಿ 59,413 ಅಕ್ರಮ ಹೋರ್ಡಿಂಗ್‌ಗಳು ಇವೆ ಎಂದು ವರದಿಯಾಗಿದೆ. ಅಕ್ರಮ ಬ್ಯಾನರ್‌ ಕುರಿತು 134 ದೂರುಗಳನ್ನು ಸ್ವೀಕರಿಸಿದ್ದರೂ ಸಹ 40 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಜನ್ಮದಿನದ ಶುಭಾಶಯಗಳು, ಸಂತಾಪಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಜಾಹೀರಾತು ನೀಡುವ ಹೋರ್ಡಿಂಗ್‌ಗಳನ್ನು ಸಹ ನಿಷೇಧಿಸಲಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರವು ಕಾನೂನುಬದ್ಧವಾಗಿ ಹೋರ್ಡಿಂಗ್‌ಗಳ ಪ್ರದರ್ಶನಕ್ಕೆ ಅವಕಾಶ ನೀಡುವ ನೀತಿಯನ್ನು ರೂಪಿಸುತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

'ಕಾನೂನುಬದ್ಧವಾಗಿ ಹೋರ್ಡಿಂಗ್‌ಗಳನ್ನು ಪ್ರದರ್ಶಿಸಲು ನಗರದಲ್ಲಿ ಕೆಲವು ಸ್ಥಳಗಳನ್ನು ನಿಗದಿಪಡಿಸುವ ನೀತಿಯನ್ನು ನಾವು ರೂಪಿಸುತ್ತೇವೆ. ಇದು ಅನಿವಾರ್ಯವಾಗಿದೆ. ಈ ಹೋರ್ಡಿಂಗ್‌ಗಳ ವಿಸ್ತೀರ್ಣ ಮತ್ತು ಗಾತ್ರವನ್ನು ಸಹ ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೆ ಬಿಬಿಎಂಪಿಯು ಬಂಟಿಂಗ್ಸ್ ಅಥವಾ ಫ್ಲೆಕ್ಸ್‌ಗಳನ್ನು ಹಾಕುವವರ ವಿರುದ್ಧ ಎಫ್‌ಐಆರ್ ದಾಖಲಿಸುತ್ತದೆ' ಎಂದು ಅವರು ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+