Bengaluru Mysore Expressway: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ & ಸರ್ವಿಸ್ ರಸ್ತೆಯಲ್ಲಿ ಹೊಸ ಸಮಸ್ಯೆ!
Bengaluru Mysore Expressway: ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ (ಹೆದ್ದಾರಿ)ಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲ್ಲೇ ಇವೇ. ಈ ಭಾಗದಲ್ಲಿ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದಾಗಿನಿಂದಲೂ ಒಂದಿಲ್ಲೊಂದು ಸಮಸ್ಯೆಗಳು ಇವೆ. ಈ ಹೆದ್ದಾರಿ ನಿರ್ಮಾಣವಾದ ಮೇಲೆ ಮೊದಲನೆಯದಾಗಿ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗುತ್ತಿದ್ದವು. ಅಲ್ಲದೇ ನಡುವೆ ದರೋಡೆ ಮತ್ತು ಕಳ್ಳತನದ ಪ್ರಕರಣಗಳು ಸಹ ವರದಿಯಾಗಿದ್ದವು. ಇದೀಗ ಮತ್ತೆ ಈ ಭಾಗದಲ್ಲಿ ಅದೇ ಹಳೆಯ ಸಮಸ್ಯೆ ಪುನರಾವರ್ತನೆ ಆಗುತ್ತಿದೆ. ಇದರಿಂದ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ವಾಹನ ಚಲಾಯಿಸುವುದಕ್ಕೆ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಟೋಲ್‌ಗಳ ಬಳಿ ಭಾರೀ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ನಿರ್ಮಾಣವಾಗುತ್ತಿತ್ತು. ಬೆಂಗಳೂರು ಹಾಗೂ ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾಗುವುದಕ್ಕೂ ಮುಂಚೆ. ಈ ಭಾಗದಲ್ಲಿ ಹೆದ್ದಾರಿ ನಿರ್ಮಾಣದಿಂದಾಗಿ ಸಾವಿರಾರು ವಾಹನ ಸವಾರರಿಗೆ ಅನುಕೂಲ ಆಗಲಿದೆ. ಅಲ್ಲದೇ ಬೆಂಗಳೂರು - ಮೈಸೂರಿನ ನಡುವೆ ಸಂಚಾರ ಸುಧಾರಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಹೆದ್ದಾರಿ ನಿರ್ಮಾಣವಾಗಿ ಮೂರು ವರ್ಷಕ್ಕೂ ಹೆಚ್ಚು ಅವಧಿಯಾದರೂ ಇಲ್ಲಿನ ಸಮಸ್ಯೆಗಳು ಪರಿಹಾರವಾಗಿಲ್ಲ.

ಮೈಸೂರು - ಬೆಂಗಳೂರು ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಇದೀಗ ಕಂಡ ಹೊಸದಾದ ಸ್ವಿಮ್ಮಿಂಗ್ ಪೂಲ್. ಈ ಹೈ ಕ್ಲಾಸ್ ರಸ್ತೆಯಲ್ಲಿ ಆಧುನಿಕ ಕಾಲದ ಫ್ಲೈಓವರ್ ಜಲಪಾತಗಳು ಮತ್ತು ಈ ರೀತಿಯ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಪೂಲ್‌ಗಳನ್ನು ಮಳೆಯಾದ ದಿನದಂದು ಕಾಣಬಹುದು. ಇದರ ಜೊತೆಗೆ ಕಿ.ಮಿಗೆ ಒಂದಂತೆ ಹೈಕ್ಲಾಸ್ ರಸ್ತೆ ಹುಬ್ಬುಗಳನ್ನು ಹಾರಿಸುತ್ತಾ ಹೋದರೇ ಮಲೆನಾಡಿನಲ್ಲಿ ಬೆಟ್ಟಗಳನ್ನು ದಾಟಿ ಹೋದಂತ ಅನುಭವ ಆಗುತ್ತದೆ. ಇದನ್ನ ನೋಡಿದಾಗ ರಸ್ತೆ ನಿರ್ಮಾಣದಲ್ಲಿ ಬಾರತ ವಿಶ್ವಗುರು ಆಗಿದೆ ಎಂದು ಅನಿಸುತ್ತದೆ ಮಿತ್ರೋ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಭಾಗದ ವಾಹನ ಸವಾರರೊಬ್ಬರು ಹಂಚಿಕೊಂಡಿದ್ದಾರೆ. ಈ ಬರಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನು ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರವು ಯಾವುದೇ ಹೆಚ್ಚಿನ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಇದರ ನಡುವೆಯೇ ಕೇಂದ್ರ ಸರ್ಕಾರವು ಬೆಂಗಳೂರು ಮತ್ತು ಮೈಸೂರು ಎಕ್ಸ್‌ಪ್ರೆಸ್ ವೇ ಭಾಗದಲ್ಲಿ ಹೊಸ ಎಂಟ್ರಿ ಹಾಗೂ ಎಕ್ಸಿಟ್ಗೆ 712 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.












Click it and Unblock the Notifications