ಸಂಪನ್ಮೂಲ ಸಂಗ್ರಹ, ಸೋರಿಕೆ ತಡೆ, ಕಸದ ಸಮಸ್ಯೆಗೆ ಕೊನೆ:ಮೇಯರ್ ಪಣ
ಬೆಂಗಳೂರು, ಸೆಪ್ಟೆಂಬರ್ 28: ನಗರದ ಸಂಪೂರ್ಣ ಅಭಿವೃದ್ಧಿಗೆ ಹೆಚ್ಚು ಗಮನ ನೀಡುತ್ತೇನೆ, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಭರವಸೆ ನೀಡಿದ್ದಾರೆ.
ಮೇಯರ್ ಆದ ಬಳಿಕ ಪ್ರಥಮ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮೇಯರ್ ಆಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಅಷ್ಟೇ ಅಲ್ಲದೆ ಪರಿಸರದ ಬಗ್ಗೆ ಹೆಚ್ಚು ಆಧ್ಯತೆ ನೀಡಲಾಗುತ್ತದೆ, ಅಕ್ಟೋಬರ್ ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು ಅಧಿಕಾರಿಗಳ ಜತೆ ಹೋಗಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ನಮಗೆ ಎಲ್ಲರ ಸಹಕಾರ ಮುಖ್ಯ, ನಾವು ಇತರರಿಗೆ ಮಾದರಿಯಾಗಬೇಕು, ಕಸದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು, ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಾದ ಸವಾಲು ನಮ್ಮ ಮುಂದಿದೆ ಇನ್ನುಮುಂದೆ ಹೈಕೋರ್ಟ್ ನಿಂದ ಯಾವುದೇ ಸೂಚನೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.











Click it and Unblock the Notifications