ಮುಂದಿದೆ ಬ್ಯಾಂಕಿಂಗ್ ಕ್ರಾಂತಿಕಾರಿ ಬದಲಾವಣೆ: ಇನ್ಫಿ

ಬ್ಯಾಂಕುಗಳು ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚು ಸೇವೆಗಳನ್ನು ನೀಡಬೇಕೆಂದು ತಹತಹಿಸುತ್ತಿವೆ. ವೈಯಕ್ತಿಕ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಬ್ಯಾಂಕುಗಳು ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಸೇವೆಗಳನ್ನು ಬಳಸಿಕೊಳ್ಳುತ್ತಿದೆ. ಇದು ಜಾಗತಿಕ ವಿದ್ಯಮಾನವೂ ಆಗಿದೆ. ಇದರಿಂದ ಶೇ. 20ರಷ್ಟು ಅನಗತ್ಯ ವೆಚ್ಚಗಳನ್ನು ತಗ್ಗಿಸಬಹುದಾಗಿದೆ ಎಂದು ವಿಶ್ಲೇಷಿಸಲಾಗಿದೆ. ( ಮುಂದಿನದು ಮೊಬೈಲ್ internet ಬಳಕೆದಾರರ ಯುಗ )
2014ನೇ ಸಾಲಿನಲ್ಲಿ ಇನ್ಫೋಸಿಸ್ ಕಂಪನಿಯ ಪ್ರಕಾರ ಬ್ಯಾಂಕಿಂಗ್ ವಿದ್ಯಮಾನಗಳು ಹೆಚ್ಚು ಸರಳೀಕೃತವಾಗಲಿದ್ದು, ಗ್ರಾಹಕರಿಗೆ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಬ್ಯಾಂಕಿಂಗ್ ವಹಿವಾಟನ್ನು ಮತ್ತಷ್ಟು ಸರಳೀಕೃತಗೊಳಿಸಿವುದು ಬ್ಯಾಂಕುಗಳ ಬೀಜಮಂತ್ರವಾಗಲಿದೆ. ಇದನ್ನು ಕಾರ್ಯಗತಗೊಳಿಸಲು ಬ್ಯಾಂಕುಗಳು ತನ್ನ ವಹಿವಾಟು ಮಾದರಿಗಳನ್ನು ನವೀಕರಿಸಿಕೊಂಡು, ಸಾಮಾಜಿಕ ಜಾಲತಾಣ ಮತ್ತು ಮೊಬೈಲ್ ಸೇವೆಗಳಿಗೆ ಜೋತುಬೀಳಲಿವೆ ಎಂದು ಇನ್ಫೋಸಿಸ್ ಪ್ರಾಡಕ್ಟ್ ಮ್ಯಾನೇಜರ್ ರಾಜಶೇಖರ್ ವಿ ಮಯ್ಯ ತಿಳಿಸಿದ್ದಾರೆ.
ಮೊಬೈಲ್/ ಆನ್ ಲೈನ್ ಸೇವೆಯೇ ಆಧಾರ:
ಬ್ಯಾಂಕಿಂಗ್ ಸೇವೆಗೆ ಸಂಬಂಧಪಟ್ಟಂತೆ ಬ್ಯಾಂಕುಗಳು ಇದುವರೆಗೂ 'ನಡೆ-ತೆವಳು-ಓಡು' ಮಾದರಿಯನ್ನು ಪಾಲಿಸಿಕೊಂಡು ಬರುತ್ತಿದ್ದವು. ಆದರೆ ಮುಂದೆ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಸೇವೆಯನ್ನು ಸುಧಾರಿಸಲಿವೆ ಎಂದು ಮಯ್ಯ ಹೇಳಿದ್ದಾರೆ.
'ಇದಕ್ಕೆಲ್ಲ ಮುಖ್ಯವಾಗಿ ಹೇತುವಾಗಿರುವುದು ಲಾಭ ಹೆಚ್ಚಿಸಿಕೊಳ್ಳುವುದು ಮತ್ತು ಅತ್ಯುತ್ತಮ ಸೇವೆಗಳನ್ನು ಕೊಡಮಾಡುವ ಮೂಲಕ ಗ್ರಾಹಕರ ನಿರೀಕ್ಷೆಗಳಿಗೆ ತಕ್ಕಂತೆ ವಹಿವಾಟು ನಡೆಸುವುದಾಗಿದೆ' ಎಂದು ಅವರು ತಿಳಿಸಿದ್ದಾರೆ. ( e-commerce ವಹಿವಾಟು 63000 ಕೋಟಿ ರೂ. ಗೆ )












Click it and Unblock the Notifications