ಬೆಂಗಳೂರು- ವಾರಣಾಸಿ ನಡುವೆ ಹೊಸ ನೇರ ವಿಮಾನಯಾನ ಆರಂಭ: ಯಾವ ಸಂಸ್ಥೆ? ಮಾಹಿತಿ ತಿಳಿಯಿರಿ

ಮಹಾಶಿವರಾತ್ರಿಯಂದು ವಾರಣಾಸಿ-ಬೆಂಗಳೂರು ನಡುವೆ ನೇರ ವಿಮಾನಯಾನ ಆರಂಭವಾಗಿದೆ. ಇದು ಯಾವ ಸಂಸ್ಥೆಯಿಂದ ಎಂಬುದರ ಮಾಹಿತಿ ಪಡೆಯಿರಿ.

ಬೆಂಗಳೂರು, ಫೆಬ್ರವರಿ 20: ಬೆಂಗಳೂರು ಮತ್ತು ವಾರಣಾಸಿ ನಡುವೆ ವಿಮಾನ ಸಂಪರ್ಕವನ್ನು ಹೆಚ್ಚಿಸುವ ಮೂಲಕ 'ಆಕಾಶ್‌ ಏರ್' ಸಂಸ್ಥೆಯು ಮಹಾಶಿವರಾತ್ರಿಯಂದು ವಾರಣಾಸಿ-ಬೆಂಗಳೂರು ನಡುವೆ ನೇರ ವಿಮಾನಯಾನವನ್ನು ಆರಂಭಿಸಿದೆ.

ಫೆಬ್ರವರಿ 18 ರ ಶನಿವಾರದಂದು ಮೊದಲ ವಿಮಾನವು ವಾರಣಾಸಿಯಿಂದ ಬೆಂಗಳೂರಿಗೆ ಹಾರಿದೆ. ಇದು ಬೆಂಗಳೂರು ಮತ್ತು ವಾರಣಾಸಿ ನಡುವೆ ನೇರ ವಿಮಾನ ಸೇವೆಗಳನ್ನು ನಿರ್ವಹಿಸುತ್ತಿರುವ ಮೂರನೇ ವಿಮಾನಯಾನ ಸಂಸ್ಥೆಯಾಗಿದೆ.

ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್‌ನಲ್ಲಿ ಹೊಸ ವಿಮಾನಕ್ಕೆ ಚಾಲನೆ ನೀಡಲಾಯಿತು. ಆಕಾಶ್‌ ಏರ್‌ ಸಂಸ್ಥೆಯ ಹಂಗಾಮಿ ನಿರ್ದೇಶಕ ಅಜಯ್ ಕುಮಾರ್ ಪಾಠಕ್, ಆಕಾಶ ಏರ್‌ನ ಉಪಾಧ್ಯಕ್ಷ ಹಜೇಂದರ್ ಸಿಂಗ್ ಭಾಸಿನ್ ಮತ್ತು ಸಿಐಎಸ್‌ಎಫ್ ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಸಮಾರಂಭ ನಡೆಯಿತು.

New direct flight starts between Bengaluru and Varanasi, Know the information

ಇದಲ್ಲದೆ, ವಿಮಾನದ ಮೊದಲ ಪ್ರಯಾಣಿಕನಿಗೆ ಬೋರ್ಡಿಂಗ್ ಪಾಸ್ ನೀಡುವುದಕ್ಕೂ ಮುನ್ನ ಕೇಕ್ ಕತ್ತರಿಸಲು ಆಹ್ವಾನಿಸಲಾಯಿತು. ಆಕಾಶ ಏರ್‌ಗಿಂತ ಮೊದಲು, ಇಂಡಿಗೋ ಮತ್ತು ಗೋ ಫಸ್ಟ್ ಸೇರಿದಂತೆ ಇನ್ನೂ ಎರಡು ವಿಮಾನಯಾನ ಸಂಸ್ಥೆಗಳು ಪ್ರತಿದಿನ ವಾರಣಾಸಿಯಿಂದ ಬೆಂಗಳೂರಿಗೆ ನೇರ ವಿಮಾನಗಳನ್ನು ಹಾರಿಸುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ವಾರಣಾಸಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ದಿನಕ್ಕೆ ಸುಮಾರು 800 ವಿಮಾನ ಸಂಚಾರವಿದೆ. ಜನವರಿ 25 ರಿಂದ ಆಕಾಶ್‌ ಏರ್ ಬೆಂಗಳೂರಿನಿಂದ ಹೈದರಾಬಾದ್‌ಗೆ ಹಾರಾಟ ನಡೆಸುತ್ತಿದೆ.

ಮುಂದಿನ ದಿನಗಳಲ್ಲಿ ವಾರಣಾಸಿಯಿಂದ ಇತರ ಸ್ಥಳಗಳಿಗೆ ಆಕಾಶ್‌ ಏರ್‌ ವಿಮಾನಯಾನ ಸಂಸ್ಥೆಯು ಹೆಚ್ಚಿನ ವಿಮಾನಗಳನ್ನು ಪರಿಚಯಿಸಲಿದೆ ಎಂದು ಪಾಠಕ್ ಭರವಸೆ ವ್ಯಕ್ತಪಡಿಸಿದರು. ಪ್ರತಿ ದಿನ ಸರಾಸರಿ 46 ವಿಮಾನಗಳು (ಎರಡೂ ದಿಕ್ಕುಗಳಲ್ಲಿ) ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತವೆ.

New direct flight starts between Bengaluru and Varanasi, Know the information

ಬೆಂಗಳೂರಿನ ಜೊತೆಗೆ, ವಾರಣಾಸಿಯಿಂದ ನೇರ ವಿಮಾನಗಳು ನವದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಭುವನೇಶ್ವರ, ಕೋಲ್ಕತ್ತಾ, ಚೆನ್ನೈ ಮತ್ತು ಗಲ್ಫ್‌ನಂತಹ ಸ್ಥಳಗಳಿಗೆ ಕಾರ್ಯನಿರ್ವಹಿಸುತ್ತವೆ.

ಆಕಾಶ ಏರ್ ಸಂಸ್ಥೆಯು ಭಾರತದ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಭಾರತದ ಪ್ರಧಾನ ಕಛೇರಿ ಇದೆ. ಇದನ್ನು ವಿನಯ್ ದುಬೆ ಮತ್ತು ಆದಿತ್ಯ ಘೋಷ್ ಸ್ಥಾಪಿಸಿದರು. ಹೂಡಿಕೆದಾರ, ದಿವಂಗತ ರಾಕೇಶ್ ಜುಂಜುನ್‌ವಾಲಾ ಆಕಾಶ್‌ ಏರ್‌ಲೈನ್‌ನಲ್ಲಿ ಶೇ 46 ಪಾಲನ್ನು ಹೊಂದಿದ್ದಾರೆ.

7 ಜುಲೈ 2022 ರಂದು, ಏರ್‌ಲೈನ್ ತನ್ನ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ಅನ್ನು DGCA ಯಿಂದ ಪಡೆದುಕೊಂಡಿತು. 22 ಜುಲೈ 2022 ರಂದು, ಆಕಾಶ ಏರ್ ತನ್ನ ವೆಬ್‌ಸೈಟ್‌ನಲ್ಲಿ ಫ್ಲೈಟ್ ಬುಕಿಂಗ್ ಅನ್ನು ಪ್ರಾರಂಭಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+