ಮೋದಿ ನಿರ್ಧಾರ ಗುರೂಜೀ ಸ್ವಾಗತಿಸಿದ್ದು ಯಾಕೆ ?

ಬೆಂಗಳೂರು, ನವೆಂಬರ್ 9 : ಎಲ್ಲರೂ ಸಮಾಧಾನವಾಗಿರಿ ಭ್ರಷ್ಟಾಚಾರದ ವಿರುದ್ಧ ಹೋರಾಡುವಾಗ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ಆರ್ಟ್ ಆಫ್ ಲಿವಿಂಗ್ ನ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜೀ ತಿಳಿಸಿದ್ದಾರೆ.

ಬುಧವಾರ ಅವರು ಮೋದಿ ಸರ್ಕಾರದಿಂದ ಹೊಸದಾಗಿ 500, 1000 ರು ನೋಟುಗಳನ್ನು ಬದಲಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

new currency declared invalid- Sri Sri says stay calm

ಇನ್ನು ಈ ವಿಷಯವಾಗಿ ಪ್ರತಿಕ್ರಿಯಿಸಿ, ಚಲಾವಣೆಯಲ್ಲಿರುವ ಹಣದ ಮೌಲವನ್ನು ವರ್ಧಿಸುವುದು ದೇಶಕ್ಕೆ ಒಳ್ಳೆಯದು, ಇದರಿಂದ ಕಪ್ಪುಹಣ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಬಹುದು ಎಂದಿದ್ದಾರೆ.[ಐನೂರಕ್ಕೆ ಚಿಲ್ಲರೆಯಿಲ್ಲ, ತಿರಸ್ಕರಿಸಿದರೆ ಬಂಕ್ ಲೈಸನ್ಸ್ ಇಲ್ಲ]

ಐನೂರು ರು ನೋಟಿನ ಬದಲಾವಣೆ ಮತ್ತು ಸಾವಿರ ರು ನೋಟನ್ನು ಬ್ಯಾನ್ ಮಾಡಿರುವುದನ್ನು ಹಲವು ಉದ್ಯಮಿಗಳು, ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಶ್ರೀ ಸಾಮಾನ್ಯರ ಶ್ಲಾಘನೆಗೆ ಕಾರಣವಾಗಿದೆ. ಇನ್ನೂ ಕೆಲವರು ಗೊಂದಲದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.[ಬೆಂಗಳೂರಿನಲ್ಲಿ ಐನೂರು ಸಾವಿರದ ಪರದಾಟದ ದನಿಗಳು]

ಸಾಮಾನ್ಯ ವರ್ಗ ಸಾವಧಾನದಿಂದ ಇದ್ದು ಭ್ರಷ್ಟಾಚಾರ ವಿರುದ್ಧ ಹೋರಾಡಬೇಕಿದೆ. ಸರ್ಕಾರದ ಈ ನಿರ್ಧಾರದಿಂದ ಯಾರು ಅಕ್ರಮವಾಗಿ ಹಣವನ್ನು ಸಂಪಾದಿಸಿದ್ದಾರೋ ಅವರಿಗೆ ಮಾತ್ರ ತೊಂದರೆಯಾಗಲಿದೆ.

ಸಮಾನ್ಯ ಮನುಷ್ಯರಿಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗಾಗಿ ಎಲ್ಲರೂ ಈ ವರ್ಷದಲ್ಲಿ ಭ್ರಷ್ಟತೆ ವಿರುದ್ಧ ಹೋರಾಡೋಣ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+