Get Updates
Get notified of breaking news, exclusive insights, and must-see stories!

ORR Skywalk: ಐಟಿ ನೌಕರರು, ಮೆಟ್ರೋ ಪ್ರಯಾಣಿಕರಿಗಾಗಿ ಬರೋಬ್ಬರಿ 8 ಕಿಮೀ ಸ್ಕೈವಾಕ್, ಎಲ್ಲಿ?

ಬೆಂಗಳೂರು: ನಗರದ ಪ್ರಮುಖ ಐಟಿ ಪಾರ್ಕ್‌ ಉದ್ಯೋಗಿಗಳಿಗೆ, ವಸತಿ ಸಮುಚ್ಚಯ ನಿವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಟ್ರೋ ನಿಲ್ದಾಣದಿಂದ ನಿಲ್ದಾಣಕ್ಕೆ ಹಾಗೂ ಐಟಿ ಕಂಪನಿಗಳಿಗೆ ಸಂಪರ್ಕ ಕಲ್ಪಿಸುವ ಬೃಹತ್ ಓಆರ್‌ಆರ್‌ (ORR) ಸ್ಕೈವಾಕ್ ಯೋಜನೆಗೆ ಪ್ರಸ್ತಾಪಿಸಲಾಗಿದೆ. ಇದು ಬರೋಬ್ಬರಿ 08 ಕಿಮೀ ಓವರ್‌ಹೆಡ್ ಸ್ಕೈವಾಕ್ ಆಗಿದ್ದು, ಪಾದಾಚಾರಿಗಳಿಗೆ ಸುಗಮ, ಸುರಕ್ಷಿತ ಹಾಗೂ ಒತ್ತಡ ಮುಕ್ತ ಪ್ರಯಾಣ ಒದಗಿಸುತ್ತದೆ. ನಮ್ಮ ಮೆಟ್ರೋ (Namma Metro Blue Line) ನೀಲಿ ಮಾರ್ಗದುದ್ದಕ್ಕೂ ಅನುಷ್ಠಾನಗೊಳ್ಳಲಿರುವ ಈ ಸ್ಕೈವಾಕ್ ವಿನ್ಯಾಸ, ಅಗಲ, ಏನೆಲ್ಲ ಪ್ರಯೋಜನ ನೀಡಲಿದೆ ಎಂಬುದರ ಪೂರ್ಣ ವಿವರ ಹೀಗಿದೆ.

ಪ್ರಸ್ತಾವಿತ ಈ ಔಟರ್ ರಿಂಗ್ ರೋಡ್ (ORR) ಸ್ಕೈವಾಕ್ ಮೆಟ್ರೋ ನಿಲ್ದಾಣಗಳಿಂದ ನೇರವಾಗಿ ಐಟಿ ಪಾರ್ಕ್‌ಗಳು ಮತ್ತು ವಸತಿ ಸಂಕೀರ್ಣಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ವಾಹನಗಳ ಆತಂಕವಿಲ್ಲದೇ ಪಾದಚಾರಿಗಳ ಸಂಚಾರಕ್ಕೆ ಪೂರಕವಾಗುವಂತೆ ನಿರ್ಮಿಸಲು ಪ್ಲಾನ್ ಮಾಡಲಾಗಿದೆ. ಓಆರ್‌ಆರ್‌ ಮೆಟ್ರೋ ನೀಲಿ ಮಾರ್ಗದಲ್ಲಿ ಒಂದು ಕಿಲೋ ಮೀಟರ್ ಅಂತರದಲ್ಲಿ ತಲಾ ಒಂದೊಂದು ನಿಲ್ದಾಣಗಳಿವೆ. ಮಾರ್ಗದ ಅಕ್ಕಪಕ್ಕ ಐಟಿ ಕಂಪನಿಗಳು, ಅಪಾರ್ಟ್‌ಗಳು ಇವೆ. ಇತರ ಕೆಲಸ ಕಾರ್ಯಗಳಿಗೆ ಬರುವ ಪ್ರಯಾಣಿಕರು ಮೆಟ್ರೋ ನಿಲ್ದಾಣದಿಂದ ಸ್ಕೈವಾಕ್ ಬಳಸಿ ಅಪಾರ್ಟ್‌ಮೆಂಟ್, ಮತ್ತೊಂದು ನಿಲ್ದಾಣಕ್ಕೆ, ಐಟಿ ಕಂಪನಿಗಳಿಗೆ ತೆರಳಬಹುದಾಗಿದೆ. ಸಾವಿರಾರು ಜನರಿಗೆ ಉಪಯೋಗವಾಗಲಿದೆ ಎಂದು 'ಬೆಂಗಳೂರು ಮಿರರ್' ವರದಿ ಮಾಡಿದೆ.

New 8-km Bengaluru ORR Skywalk to Connect Metro Stations Directly to IT Hubs

ಇಂಟರ್-ಸ್ಟೇಷನ್ ವಾಕ್‌ವೇ

ಇದನ್ನು ಇಂಟರ್-ಸ್ಟೇಷನ್ ವಾಕ್‌ವೇ ಅಂತಲೂ ಕರೆಯಲಾಗುತ್ತದೆ. ಮೆಟ್ರೋ ಹಳಿಗಳ ಕೆಳಗೆ ಭವಿಷ್ಯದ ದೃಷ್ಟಿಯಿಂದ ಹೆಚ್ಚುವರಿ ಪಿಲ್ಲರ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದೆ. ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಣ ಒದಗಿಸುವುದಿಲ್ಲ. ಕಂಪನಿಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯ ಮೂಲಕ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಆರ್ಥಿಕ ಸಹಕಾರದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಮಹದೇವಪುರ ಕಾರ್ಯಪಡೆ (MTF) ತಿಳಿಸಿದೆ. ಯೋಜನೆಗೆ ಹಣ ನೀಡುವಂತೆ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಅವರು ಜಿಬಿಎಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

2.5 ಮೀಟರ್ ಅಗಲದ ಸ್ಕೈವಾಕ್ ವಿನ್ಯಾಸ ಹೀಗಿದೆ

ಮೆಟ್ರೋ ಇಳಿಯುವ ಪ್ರಯಾಣಿಕರು ನಿಲ್ದಾಣಗಳಿಂದ ಹತ್ತಿರದ ಐಟಿ ಪಾರ್ಕ್, ವಸತಿ ಸಂಕೀರ್ಣ ಅಥವಾ ಇತರ ಉದ್ದೇಶ ಸ್ಥಳಗಳಿಗೆ 2.5 ಮೀಟರ್ ಅಗಲದ ಈ ಸ್ಕೈವಾಕ್ ಬಳಸಿಯೇ ತೆರಳಬಹುದು. ಓಆರ್‌ಆರ್‌ ರಸ್ತೆಗೆ ಇಳಿಯುವುದು ತಪ್ಪಲಿದೆ. ಪಾದಾಚಾರಿಗಳಿಗೆ ವಾಹನಗಳ ಸಂಚಾರ, ದಟ್ಟಣೆ, ರಸ್ತೆ ಕ್ರಾಸಿಂಗ್ ದಾಟುವ ಪ್ರಮೇಯವೇ ಆಗುವುದಿಲ್ಲ. ಸುರಕ್ಷಿತ ಪಾದಾಚಾರಿ ಸ್ಕೈವಾಕ್ ಇದಾಗಲಿದೆ.

ಈಗಾಗಲೇ ರೂಪಿಸಲಾಗಿರುವ ಓರ್‌ಆರ್‌ ಓವರ್‌ಹೆಡ್ ಸ್ಕೈವಾಕ್ ವಿನ್ಯಾಸದ ಪ್ರಕಾರ, ನೀಲಿ ಮಾರ್ಗದ ಮೆಟ್ರೋ ವಯಾಡಕ್ಟ್‌ಗೆ ಸಮಾನಾಂತರವಾಗಿ ಸ್ಕೈವಾಕ್ ನಿರ್ಮಾಣಗೊಳ್ಳಲಿದೆ. ಮೆಟ್ರೋ ಸಂಚಾರಕ್ಕೆ ಅಡ್ಡಿಯಾಗದಂತೆ ನಿರ್ಮಾಣಗೊಳ್ಳಲಿದೆ. ಪಾದಾಚಾರಿಗಳ ರಕ್ಷಣೆಗೆ ರೇಲಿಂಗ್‌ಗಳು, ತಡೆಗೋಡೆ, ಮೇಲ್ಚಾವಣೆ ಹೊಂದಿರಲಿದೆ. ನಿಲ್ದಾಣದಿಂದ ನಿಲ್ದಾಣಕ್ಕೆ ಪಾದಾಚಾರಿಗಳ ಸಂಚಾರಕ್ಕೆ ಮಾತ್ರವೇ ಸಿಮೀತವಾಗದಂತೆ, ಮೆಟ್ರೋ ನಿಲ್ದಾಣದಿಂದ ನೇರವಾಗಿ ಕಂಪನಿಗಳ ಆವರಣ, ಕಾಂಪೌಂಡ್ ಗೇಟ್ ಒಳಗೆ ನೀವು ಇಳಿಯುವಂತೆ ವಿನ್ಯಾಸ ರೂಪಿಸಲಾಗಿದೆ.

ಈ ಮೆಟ್ರೋ ನಿಲ್ದಾಣಗಳ ಸಮಾನಾಂತರವಾಗಿ ಸ್ಕೈವಾಕ್

ಈ ಯೋಜನೆ ಸಾಕಾರವಾದಲ್ಲಿ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಆಟೋ, ಫೀಡರ್ ಬಸ್ ಅವಲಂಬಿಸಿದ ಹತ್ತಿರ ಸ್ಥಳಗಳಿಗೆ ವಾಕ್‌ ವೇ ಮೂಲಕವೇ ತೆರಳಲು ಅನುಕೂಲವಾಗಲಿದೆ ಎಂದು ಎಂಟಿಎಫ್‌ನ ಜಯಕುಮಾರ್ ಅವರು ಹೇಳಿದರು. ಇಬ್ಬಲೂರು ಮೆಟ್ರೋ ನಿಲ್ದಾಣದಿಂದ ಮಹದೇವಪುರದ ಸರಸ್ವತಿ ನಗರ ಮೆಟ್ರೋ ನಿಲ್ದಾಣದವರೆಗಿನ ಎಲ್ಲಾ ನಿಲ್ದಾಣಗಳನ್ನು ಈ ಸ್ಕೈವಾಕ್ ಸಂಪರ್ಕಿಸುತ್ತದೆ. ಮಾರತ್ತಹಳ್ಳಿ ಅಂಡರ್‌ಪಾಸ್ ಮತ್ತು ದೊಡ್ಡನೆಕುಂಡಿ ರೈಲು ಮಾರ್ಗದಲ್ಲಿ ಸ್ಕೈವಾಕ್ ಯೋಜನೆ ಅಡಚಣೆ ಎದುರಿಸುವ ನಿರೀಕ್ಷೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+