Actor Darshan: 3 ಕೋಟಿ ಲ್ಯಾಂಬೋರ್ಗಿನಿ ಉರ್ಸ್ "ಸರದಾರ"ನ "ಪೋರ್ಕಿ" ಮಾತುಗಳು ಎಲ್ಲೋದ್ವು?-ನೆಟ್ಟಿಗರ ಪ್ರಶ್ನೆ
ನಟ ದರ್ಶನ್ ಮೊದಲಿನಿಂದಲೂ ಒಂದಲ್ಲ ಒಂದು ಹೇಳಿಕೆಗಳ ಮೂಲಕ ವಿವಾದದಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ವೇದಿಕೆಗಳ ಮೇಲೆಯೇ ತಾವು ಮಾಡಿರುವ ಆಸ್ತಿ, ಕಾರುಗಳ ಬಗ್ಗೆ ಬೀಗುತ್ತಿದ್ದರು. ಅಷ್ಟೇ ಅಲ್ಲದೆ, ಬೇರೆಯವರಿಗೆ ಹೋಲಿಕೆ ಮಾಡಿಕೊಂಡು ದುರಹಂಕಾರದ ರೀತಿಯಲ್ಲಿ ನಾನು ಕೂಡ ಅವರಿಗೇನು ಕಡಿಮೆಯಿಲ್ಲ ಎಂಬಂತೆ ಮಾತನಾಡುತ್ತಿದ್ದರು. ಅದೇ ರೀತಿ 3 ಕೋಟಿಯ ಕಾರಿನ ಬಗ್ಗೆಯೂ ಸಹ ಮಾತನಾಡಿದ್ದು, ಈ ಹೇಳಿಕೆ ಎಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು.
ಕೆಲವು ವರ್ಷಗಳ ಉಮಾಪತಿ ಶ್ರೀನಿವಾಸಗೌಡ ಮತ್ತು ಇವರ ನಡುವೆ ಗಲಾಟೆ ನಡೆದ ಸಂದರ್ಭದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ದರ್ಶನ್ 3 ಕೋಟಿ ಕಾರಿನ ಬಗ್ಗೆ ಮಾತನಾಡಿದ್ದರು. ಪುನೀತ್ ರಾಜ್‌ಕುಮಾರ್ ಬಳಿಯಿರುವ ಉರ್ಸ್ ಕಾರು ನನ್ನ ಬಳಿಯೂ ಇದೆ ಎಂದು ಹೇಳುವ ಮೂಲಕ ದೊಡ್ಮನೆಯನ್ನು ಮಧ್ಯ ತಂದಿದ್ದರು. ಅಲ್ಲದೆ, ಬಳಿಕ ಈ ಕಾರು ಪುನೀತ್ ರಾಜ್‌ಕುಮಾರ್ ಬಿಟ್ಟರೆ, ಕನ್ನಡ ಸಿನಿಮಾ ರಂಗದ ಯಾವನೊಬ್ಬನ ಬಳಿಯೂ ಇಲ್ಲ ಎಂದು ಏಕವಚನದಲ್ಲಿ ಬಯ್ಯುವ ಮೂಲಕ ಹಲವರ ಆಕ್ರೋಶಕ್ಕೆ ಕಾರಣರಾಗಿದ್ದರು.

ಇದೀಗ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಅವರನ್ನು ಇಂದು (ಜೂನ್ 15) ವಿಚಾರಣೆಗೆ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ದರ್ಶನ್ ಬಂದಿದ್ದು, ಉರ್ಸ್ ಕಾರಲ್ಲಿ ಅಲ್ಲ, ಪೊಲೀಸ್ ವ್ಯಾನ್‌ನಲ್ಲಿ ಎಂದು ಹೇಳುವ ರೀಲ್ಸ್ ವಿಡಿಯೋಗಳು ಇದೀಗ ಸಾಮಾಜಿಕ ಜಾಲಾತಣಗಳಲ್ಲಿ ಹರಿದಾಡುತ್ತಿವೆ.
ಈ ವಿಡಿಯೋ ಈಗಲೂ ಕೂಡ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಪುನೀತ್ ರಾಜ್‌ಕುಮಾರ್ ಅವರನ್ನು ಹೋಲಿಕೆ ಮಾಡಿಕೊಳ್ಳಲು ನಿಮಗೆ ಯಾವ ಯೋಗ್ಯತೆಯೂ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಯಾಕೆಂದರೆ, ನಟ ದರ್ಶನ್ ಒಳಗಿನ ಕರಾಳ ಮುಖದ ಅನಾವರಣ ಆಗುತ್ತಲಿದ್ದು, ಇದೀಗ ಹುಚ್ಚು ಅಭಿಮಾನಿಗಳು ಅರ್ಥಾತ್ ಅಂಧಾಭಿಮಾನಿಗಳು ಬಿಟ್ಟರೆ ಇನ್ನುಳಿದ ಬಹುತೇಕರು ದರ್ಶನ್ ಕರಾಳತನದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಅಹಂಕಾರ, ಕೋಪ ಇರಬೇಕೇ ಹೊರತು, ದುರಂಹಕಾರವಲ್ಲ. ಅವರ ನಡವಳಿಕೆಗಳ ಬಗ್ಗೆ ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಿರುತ್ತದೆ ಹೊರತು ಅಂಧಾಭಿಮಾನಿಗಳಿಗಲ್ಲ. ಆತ ಎಷ್ಟೇ ಆಸ್ತಿ, ಅಂತಸ್ತು ಮಾಡಿರಬಹುದು, ಆದರೆ ಮನುಷ್ಯತ್ವ ಇಲ್ಲ ಅಂದಮೇಲೆ ಇವೆಲ್ಲ ಇದ್ದು ಇಲ್ಲದಂತೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ವರನ್ನು ಹತ್ತಿರದಿಂದ ನೋಡಿರುವವರು ಹೇಳುವುದು ಒಂದೇ ಮಾತು, ಅದು ದರ್ಶನ್ ಕುಡಿದರೆ, ಮನುಷ್ಯನಾಗಿರುವುದಿಲ್ಲ. ಬಾಯಿಗೆ ಬಂದಂತೆ ಬಯ್ಯುತ್ತಾರೆ. ಅವರ ಮಾತುಗಳು ಅವರಿಗೇ ತಿಳಿಯುತ್ತವೆಯೋ ಇಲ್ಲವೋ, ಹಾಗೆ ಕೆಟ್ಟ ಪದಗಳಿಂದ ನಿಂದಿಸುತ್ತಾರೆ ಎಂದು ಹೇಳುತ್ತಾರೆ.
ಒಬ್ಬ ದೊಡ್ಡ ಸೆಲೆಬ್ರೆಟಿ ಆದ ತಕ್ಷಣ ಏನು ಕೊಂಬು ಬರುತ್ತಾ?. ಸೆಲೆಬ್ರೆಟಿ ಬೆಳೆದುಬಂದ ಹಾದಿ ಹೇಗಿತ್ತು? ಹೇಗೆ ಬೆಳೆದು ಬಂದಿದ್ದೆವು. ಅಭಿಮಾನಿಗಳನ್ನು ಯಾವ ರೀತಿ ಕಾಣುವ ಸಾಮಾನ್ಯ ಪರಿಜ್ಞಾನವನ್ನು ಹೊಂದಿರಬೇಕಾಗುತ್ತದೆ. ಆದರೆ ದರ್ಶನ್ ಮಾತ್ರ ಇವೆಲ್ಲದಕ್ಕೂ ಸ್ವಲ್ಪ ವಿರುದ್ಧವೇ. ಏನಾದರೂ ಪ್ರಶ್ನೆ ಕೇಳುವಂತಿಲ್ಲ. ನಾನು, ನನ್ನ ಹಣ, ನನ್ನ ಆಸ್ತಿ ಎಂದು ದುರಹಂಕಾರದಿಂದ ಬೀಗುತ್ತಾರೆ. ಇದು ಅಸಹ್ಯದ ನಡೆಯಾಗಿದೆ ಎಂದು ಆಕ್ರೋಶ ವ್ತಕ್ತಪಡಿಸಿದ್ದಾರೆ.
ಇನ್ನು ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಕ್ಕೆ ಈತನ ಪುಡಂಗು ಗ್ಯಾಂಗ್ ಅಭಿಮಾನಿ ರೇಣುಕಾಸ್ವಾಮಿ ಎಂಬಾತನನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಮುಖ್ಯವಾಗಿ ಒಬ್ಬ ಸೆಲೆಬ್ರೆಟಿ ಅಂಮೇಲೆ ಅವರಿಗೆ ತಾಳ್ಮೆ ಇರಬೇಕಾಗುತ್ತದೆ. ಘಟನೆ ಹೇಗಾಯ್ತು? ಇದನ್ನು ಹೇಗೆ ಪರಿಹರಿಸಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಇರಬೇಕಾಗುತ್ತದೆ. ಆದರೆ ದರ್ಶನ್ ಮತ್ತು ಗ್ಯಾಂಗ್ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿ, ಬೆಂಗಳೂರಿನ ಗೊಡೋನ್‌ಗೆ ಕರೆತಂದು ಹಲ್ಲೆ ನಡೆಸಿ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಇಲ್ಲೇ ಗೊತ್ತಾಗುತ್ತದೆ ದರ್ಶನ್ ಎಂಥಹ ನಿಜಜೀವನದ ಖಳನಾಯಕ ಅಂತಾ. ಅವರು ಹಿರೋ ಅಲ್ಲ ಎಂದು ಬಹುತೇಕ ಮಂದಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಆದರೂ ನಟ ದರ್ಶನ್ ಒಬ್ಬ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದರೂ, ಕೊನೆಗೆ ಇಂತಹ ನೀಚಕೆಲಸ ಮಾಡಿರುವುದು ಸರಿಯಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.
ಆಗ ನನ್ನ ಬಳಿ ಅಷ್ಟು ಕೋಟಿ ಕಾರುಗಳಿವೆ ಎಂದು ಮತ್ತೊಬ್ಬರಿಗೆ ಹೋಲಿಕೆ ಮಾಡಿಕೊಂಡು ದುರಹಂಕಾರದಿಂದ ಹೇಳುತ್ತಿದ್ದ ದರ್ಶನ್ ಇದೀಗ ದರ್ಶನ್ ಪೊಲೀಸ್ ಜೀಪ್‌ನಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೋರ್ಟ್‌ನಲ್ಲಿ ಕೈಕಟ್ಟಿ ಸುಮ್ಮನೆ ಮೌನವಾಗಿ ನಿಂತುಕೊಳ್ಳುವಂತೆ ಆಗಿದೆ. ಆಗ ಮಾತನಾಡುತ್ತಿದ್ದ ಮದದ ಮಾತುಗಳು ಈಗ ಎಲ್ಲೋದ್ವು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications