ಕೃಷ್ಣರಾವ್ ಉದ್ಯಾನದಲ್ಲಿ ಬಣ್ಣಾ ನನ್ನ ಒಲವಿನ ಬಣ್ಣಾ

ಬೆಂಗಳೂರು, ಜ.20: ಇದು 2015ನೇ ವರ್ಷದ ಮೊದಲ ತಿಂಗಳು. ಗಣರಾಜ್ಯೋತ್ಸವ ಹತ್ತಿರ ಬರುತ್ತಿದೆ. ಇದನ್ನು ದೇಶವಿಡೀ ಹಬ್ಬವನ್ನಾಗಿ ಆಚರಿಸಿಕೊಳ್ತಿದೆ. ನಿಮಗೂ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ನಿಮ್ಮ ಕಲ್ಪನೆಗಳನ್ನು ನೀವೇ ಚಿತ್ರಿಸಬಹುದು.

ನೆರೊಲೆಕ್ ಕಲರ್ ಥೊನ್, ಬ್ರೀಥ್ ಎಂಟರ್ ಟೇನ್ ಮೆಂಟ್ ಆಶ್ರಯದಲ್ಲಿ ನಡೆಯುವ ಈ ಚಿತ್ರಕಲಾ ಹಬ್ಬದಲ್ಲಿ ನೀವೂ ಭಾಗಿಯಾಗಬಹುದು. 3 ರಿಂದ 90 ವರ್ಷದೊಳಗಿನ ಸುಮಾರು 20,000 ಜನರು ಇಲ್ಲಿ ತಮ್ಮ ಕಲ್ಪನೆಗಳಿಗೆ ಬಣ್ಣಗಳನ್ನು ತುಂಬಲಿದ್ದಾರೆ. ಜನವರಿ 26ರಂದು ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಈ ವಿಭಿನ್ನ ಪೈಂಟಿಂಗ್ ಹಬ್ಬ ನಡೆಯಲಿದೆ.

Nerolac Colorothon

ಈ ಕಲರ್ ಥೋನ್ ಕಾನ್ಸೆಪ್ಟ್ ಹರಿಕಾರ ಮತ್ತು ಬ್ರೀಥ್ ಎಂಟರ್ ಟೇನ್ ಮೆಂಟ್ ನ ಕಿಶೋರ್ ಜೋಸೆಫ್ ಮಾತನಾಡಿ, "ಕಲರ್ ಥೊನ್ ನಲ್ಲಿ ನಮ್ಮ ಮನಸ್ಸು ಮತ್ತು ದಿನನಿತ್ಯದ ಚಟುವಟಿಕೆಗಳು ಬಣ್ಣಗಳ ಮೂಲಕ ಮೂಡಿಬರಲಿದೆ. ಒಂದೇ ವೇದಿಕೆಯಲ್ಲಿ ಎಲ್ಲಾ ವಯೋಮಾನದವರ ಯೋಚನೆಗಳು ಮತ್ತು ಲಹರಿಗಳು ಹೊರಬೀಳಲಿದೆ. ಕಲೆಗೆ ಎಲ್ಲರನ್ನೂ ಒಂದುಗೂಡಿಸುವ ತಾಕತ್ತಿದೆ. ಗಣರಾಜ್ಯೋತ್ಸವದ ದಿನ ಈ ರೀತಿಯಲ್ಲಿ ಎಲ್ಲರೂ ಒಂದಾಗಲಿದ್ದಾರೆ '' ಎಂದು ಹೇಳಿದರು.

ಕಲರ್ ಥೋನ್ ನಲ್ಲಿ ಒಂದು ಮಗು ತನ್ನ ಕಲ್ಪನೆಗಳಿಗೆ ಬಣ್ಣ ಬಳಿದಾಗ ಅದ್ರಲ್ಲಿ ಹುಟ್ಟುವ ಚಿತ್ರಗಳು ಮನಸ್ಸಿಗೆ ಹೇಗೆ ಮುದ ನೀಡುತ್ತವೆ ಅನ್ನೋದನ್ನ ವಾಸ್ತವದಲ್ಲೇ ತಿಳಿದುಕೊಳ್ಳುವ ಅವಕಾಶ ಇಲ್ಲಿ ಸಿಗಲಿದೆ. 3 ವಯಸ್ಸಿನ ಮಗುವಿನಿಂದ ಹಿಡಿದು 90ರ ಹರೆಯದವರವರೆಗೆ ಎಲ್ಲರಿಗೂ ತಮ್ಮ ಕಲ್ಪನೆಗಳಿಗೆ ಬಣ್ಣ ನೀಡುವ ಅವಕಾಶ ಇಲ್ಲಿ ಸಿಗಲಿದೆ.

Nerolac Colorothon2

ಬ್ರೀಥ್ ಎಂಟರ್ ಟೇನ್ ಮೆಂಟ್ ನ ಅಹ್ಮದ್ ಶರೀಫ್ ಹೇಳುವಂತೆ ಈ ಬಾರಿಯು ಕಲರ್ ಥೋನ್ ಹೊಸ ದಾಖಲೆ ಮಾಡಲಿದೆ. ಒಂದೇ ಫ್ಲಾಟ್ ಫಾರ್ಮನಲ್ಲಿ ಅತೀ ಹೆಚ್ಚು ಜನ ಪೈಂಟಿಂಗ್ ಮಾಡಿದ ಹೆಗ್ಗಳಿಕೆಯನ್ನು ನೆರೊಲಾಕ್ ಕಲರ್ ಥೋನ್ ಮಾಡಲಿದೆ. ಅಷ್ಟೇ ಅಲ್ಲ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಯ ಪುಟಗಳಲ್ಲಿ ಇದು ದಾಖಲಾಗಲಿದೆ.

ಕಲರ್ ಥೋನ್ 2015: ಕಲರ್ ಥೋನ್ 2015ರಲ್ಲಿ 3 ರಿಂದ 90 ವರ್ಷ ವಯೋಮಿತಿಯ ಪೈಂಟರ್‍ ಗಳು ಭಾಗವಹಿಸಲಿದ್ದಾರೆ. ಒಂದೇ ಜಾಗದಲ್ಲಿ ಅತೀ ಹೆಚ್ಚು ಪೈಂಟಿಂಗ್ ಕಲಾವಿದರು ಚಿತ್ರಬಿಡಿಸಿದ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಗೆ ಈ ಕಲರ್ ಥೋನ್ ಸೇರ್ಪಡೆಯಾಗಲಿದೆ. ಕಲರ್ ಥೋನ್ ಪೈಂಟಿಂಗ್ ಳನ್ನು 5 ಕೆಟಗರಿಗಳನ್ನಾಗಿ ವಿಂಗಡಿಸಲಾಗಿದೆ.

9 ವರ್ಷದೊಳಗಿನವರಿಗೆ, 10 ರಿಂದ 12 ವರ್ಷ ಒಳಗಿನವರಿಗೆ, 13ರಿಂದ 20 ವರ್ಷ ಒಳಗಿನವರಿಗೆ, 21ರಿಂದ 30 ವರ್ಷ ಒಳಗಿನವರಿಗೆ, 31 ವರ್ಷದಿಂದ ಮೇಲ್ಪಟ್ಟು.

Nerolac Colorothon3

ಕಲರ್ ಥೋನ್ 2015ರಲ್ಲಿ ಇನ್ನೂ ವಿಶೇಷತೆಗಳಿವೆ: ಪ್ರತೀ ವಿಭಾಗದಿಂದ 3 ಪೈಂಟಿಂಗ್ ಗಳನ್ನು ಅತ್ಯುತ್ತಮ ಚಿತ್ರಗಳೆಂದು ಆಯ್ಕೆ ಮಾಡಲಾಗುವುದು. 15 ಚಿತ್ರಗಳನ್ನು ಉತ್ತಮ ಚಿತ್ರ ಎಂದು ಸೆಲೆಕ್ಟ್ ಮಾಡಲಾಗುವುದು. ಇದರ ಜೊತೆಗೆ ಈ ಪೈಂಟಿಂಗ್ ಗಳನ್ನು ಹರಾಜು ಹಾಕಿ ಬಂದ ದುಡ್ಡನ್ನು ಸ್ನೇಹದೀಪ್ ಟ್ರಸ್ಟ್ ಗೆ ನೀಡಲಾಗುವುದು.

ಕಲರ್ ಥೋನ್ 2015ರಲ್ಲಿ ಪೈಂಟಿಂಗ್ ಹೊರತಾಗಿ ಕೆಲವು ವಿಭಿನ್ನ ಕಾರ್ಯಕ್ರಮಗಳಿವೆ. ಕಲರ್ ಥೋನ್2015 ಜನವರಿ 26ರಂದು ನಡೆಯಲಿದೆ. ಸುಮಾರು 10ರಿಂದ 12000 ಜನರು ಆಗಮಿಸುವ ನಿರೀಕ್ಷೆ, ಲಿಮ್ಕಾ ಮತ್ತು ಗಿನ್ನೆಸ್ ದಾಖಲೆಗಳಲ್ಲಿ ದಾಖಲಾಗುವ ಸಾಧ್ಯತೆ, ಬೆಳಗ್ಗೆ 8 ಗಂಟೆಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ನಲ್ಲಿ ಆರಂಭವಾಗಲಿದೆ.

Nerolac Colorothon4

ಬೆಳಗ್ಗೆ 8 ರಿಂದ 4ರ ತನಕ ಪೈಂಟಿಂಗ್ ನಡೆಯಲಿದೆ. ಕಲರ್ ಥೋನ್ 2015ನಲ್ಲಿ ಪಾಲ್ಗೊಳ್ಳಲು ಯಾವುದೇ ರಿಜಿಸ್ಟ್ರೇಷನ್ ಫೀಸ್ ಇಲ್ಲ. ಪೈಂಟಿಂಗ್ ಗೆ ಬೇಕಾದ ಎಲ್ಲಾ ವಸ್ತುಗಳನ್ನು ಭಾಗವಹಿಸುವವರೇ ತರಬೇಕಿದೆ. ಆಯೋಜಕರು ಪೇಪರ್ ಗಳನ್ನು ಮಾತ್ರ ಒದಗಿಸಕೊಡಲಿದ್ದಾರೆ.

ಕಲರ್ ಥೋನ್ 2015 ವೆಬ್ ಸೈಟ್ ನಲ್ಲಿ ನೇರ ಪ್ರಸಾರವಾಗಲಿದೆ. ರಿಜಿಸ್ಟ್ರೇಷನ್ ಗಾಗಿ ಇಲ್ಲಿ ಸಂಪರ್ಕಿಸಿ: www.colorothon.com ಅಥವಾ 94835 37475 ಸಂಪರ್ಕಿಸಿ. (ಒನ್ಇಂಡಿಯಾ ಕನ್ನಡ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+