ಎನ್‌ಸಿಬಿ ಅಧಿಕಾರಿಗಳ ಕಾರ್ಯಾಚರಣೆ: ಅಂತಾರಾಷ್ಟ್ರೀಯ ಡ್ರಗ್ ರಾಕೆಟ್ ಪತ್ತೆ
ಬೆಂಗಳೂರು, ಏಪ್ರಿಲ್ 16: ಕ್ರಿಕೆಟ್ ಮ್ಯಾಚ್ ಕಿಟ್‌ನಲ್ಲಿ ಮಾದಕ ವಸ್ತು ಇಟ್ಟು ಹೊರ ದೇಶಕ್ಕೆ ಕಳಿಸಲು ಯತ್ನಿಸಿದ ಡ್ರಗ್ ಮಾರಾಟ ಜಾಲವನ್ನು ಬೆಂಗಳೂರು ವಲಯದ ಎನ್‌ಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಆಂಫೆಟಮೈನ್ ಎಂಬ ಡ್ರಗ್ ಪತ್ತೆಯಾಗಿದ್ದು, 20 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನಿಂದ ಕೊರಿಯರ್ ಮೂಲಕ ಕತಾರ್ ಪಾರ್ಸಲ್ ರವಾನಿಸಲಾಗುತ್ತಿತ್ತು. ಈ ಕುರಿತು ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧಾರದ ಮೇಲೆ ಎನ್‌ಐಸಿ ಅಧಿಕಾರಿಗಳು ದಾಳಿ ನಡೆಸಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಾಸರಗೋಡು ಮೂಲದ ನತಾಶ್ ಎಂಬಾತನನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಈತ ಪಾರ್ಸೆಲ್ ಮೂಲಕ ಕತಾರ್ ನಲ್ಲಿರುವ ಕುಹಿಯಾಲ್ ಎಂಬಾತನಿಗೆ ಪಾರ್ಸಲ್ ಮಾಡಿದ್ದ. ಕ್ರಿಕೆಟ್ ಕಿಟ್‌ನ ಗ್ಲೌಸ್‌ನಲ್ಲಿ ಡ್ರಗ್ ಅಡಗಿಸಿಟ್ಟು ಪಾರ್ಸಲ್ ಕಳುಹಿಸಲಾಗುತ್ತಿತ್ತು. ಕತಾರ್‌ನಲ್ಲಿರುವ ಕುಹಿಯಾಲ್‌ಗಾಗಿ ಎನ್‌ಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ವೈದ್ಯಕೀಯ ರಂಗದಲ್ಲಿ ಬಳಸುವ ಈ ಆಂಪೆಟಮೈನ್ ಡ್ರಗ್‌ನ್ನು ಮಾದಕ ವ್ಯಸನಿಗಳು ಮಾದಕ ವಸ್ತುವನ್ನಾಗಿ ಬಳಕೆ ಮಾಡುತ್ತಿರುವುದು ಬೆಚ್ಚಿ ಬೀಳಿಸಿದೆ.
Recommended Video













Click it and Unblock the Notifications