ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ಸ್ ಬಂಧಿಸಿದ ಎನ್ಸಿಬಿ ಅಧಿಕಾರಿ
ಬೆಂಗಳೂರು ನ. 12: ಬೆಂಗಳೂರು ವಲಯದ ಎನ್ ಸಿ ಬಿ ಅಧಿಕಾರಿಗಳು ಮೂವರು ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಮಾದಕ ವಸ್ತು ವಶ ಪಡಿಸಿಕೊಂಡಿದ್ದಾರೆ.
ರಂಜೀತ್, ಶರಂಗ್ ಮತ್ತು ಅನೀಶ್ ಬಂಧಿತರು. ಮೂಲತಃ ಕೇರಳದವರಾದ ಮೂವರು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಡ್ರಗ್ಸ್ ಸಾಗಿಸುತ್ತಿದ್ದರು. ಬೆಂಗಳೂರು ಮೂಲಕ ಕೇರಳ ಪ್ರವೇಶಿಸಿ ಮಾಲ್ಡೀವ್ಸ್ , ಶ್ರೀಲಂಕಾ ಮತ್ತಿತರ ಕಡೆ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿಗೆ ರಂಜಿತ್ ಎಂಬುವರಿಗೆ ಸೇರಿದ ಕಾರಿನ ಸೀಟಿನ ತಳಭಾಗದಲ್ಲಿ ಅವಿಚಿಟ್ಟು ಸಾಗಾಟ ಮಾಡುತ್ತಿದ್ದರು ಎಂದು ಎನ್ ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ದುಬಾರಿ ಮೌಲ್ಯಕ್ಕೆ ಹಶೀಶ್ ಆಯಿಲ್ ಮಾರಾಟ ಮಾಡುವ ಜಾಲದಲ್ಲಿ ತೊಡಗಿದ್ದು, ಜಾಲದ ಬೆನ್ನಟ್ಟಿ ಎನ್ ಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.











Click it and Unblock the Notifications