ಬೆಂಗಳೂರಿನಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಮರುಚಾಲನೆ

ಬೆಂಗಳೂರು, ಜೂನ್ 12: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ 'ನ್ಯಾಷನಲ್ ಹೆರಾಲ್ಡ್' ಪತ್ರಿಕೆಯ ನೆನಪಿನ ಸಂಚಿಕೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಸರಕಾರ ಎಲ್ಲರ ಧ್ವನಿಯನ್ನೂ ಮೌನವಾಗಿಸುತ್ತಿದೆ," ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಂಡಸೌರ್ ಗಲಭೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪ್ರವೇಶಿಸಿದಂತೆ ತಮ್ಮನ್ನು ತಡೆಯಲಾಯಿತು ಎಂಬುದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, "ನನ್ನನ್ನುಯಾಕೆ ತಡೆಯಲಾಯಿತು. ಯಾವ ಕಾನೂನಿನ ಅಡಿಯಲ್ಲಿ ತಡೆಯಲಾಯಿತು," ಎಂದು ಪ್ರಶ್ನಿಸಿದರು.

National Herald relaunched in Bengaluru by Rahul Gandhi and Hamid Ansari

"ಸತ್ಯಕ್ಕಿರುವ ಶಕ್ತಿಯನ್ನು ಅಧಿಕಾರ ಕಸಿದುಕೊಂಡಿದೆ. ಸತ್ಯದ ಪರವಾಗಿ ಯಾರೇ ನಿಲ್ಲಲು ಹೊರಟರೂ ಅವರನ್ನು ಬದಿಗೆ ಸರಿಸಲಾಗುತ್ತಿದೆ," ಎಂದು ರಾಹುಲ್ ಗಾಂಧಿ ಆರೋಪಿಸಿದರು. "ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸತ್ಯವನ್ನೇ ಹೇಳಲಿದೆ. ಯಾವತ್ತಾದರೂ ಕಾಂಗ್ರೆಸ್ ನ್ನು ಟೀಕಿಸಬೇಕೆಂದು ಅನಿಸಿದರೆ ಕಾಂಗ್ರೆಸನ್ನೂ ಟೀಕಿಸಿ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಒಳ್ಳೆಯದಾಗಲಿ," ಎಂದು ಸಂಪಾದಕೀಯ ತಂಡಕ್ಕೆ ಶುಭ ಹಾರೈಸಿದ್ದರು.

ನಂತರ 'ಕವಲುದಾರಿಯಲ್ಲಿ ಭಾರತ ಸ್ವಾತಂತ್ರ್ಯದ 70 ವರ್ಷಗಳು' ಹೆಸರಿನ ನೆನಪಿನ ಸಂಚಿಕೆಯನ್ನು ರಾಹುಲ್ ಗಾಂಧಿ, ಹಮೀದ್ ಅನ್ಸಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ರಾಜ್ಯ ಸಚಿವರುಗಳು ಉಪಸ್ಥಿತರಿದ್ದರು.

ಏನಿದು ನ್ಯಾಷನಲ್ ಹೆರಾಲ್ಡ್?

ಭಾರತದ ಪ್ರಥಮ ಪ್ರಧಾನಿ ಜವಹರ್ ಲಾಲ್ ನೆಹರೂ 1938ರಲ್ಲಿ ಆರಂಭಿಸಿದ ಪತ್ರಿಕೆಯೇ 'ನ್ಯಾಷನಲ್ ಹೆರಾಲ್ಡ್'.
ಕಾಂಗ್ರೆಸ್ ಮತ್ತು ನೆಹರೂ ಕುಟುಂಬದಿಂದ ಹೊರ ಬರುತ್ತಿದ್ದ ನ್ಯಾಷನಲ್ ಹೆರಾಲ್ಡ್ ಈ ಹಿಂದೆ ನಷ್ಟದ ಕಾರಣಕ್ಕೆ ತನ್ನ ಮುದ್ರಣವನ್ನು ನಿಲ್ಲಿಸಿತ್ತು. ಇದೀಗ 2018ರಲ್ಲಿ ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲೇ ಈ ಸಂಸ್ಥೆಗೆ ಕಾಂಗ್ರೆಸ್ ಪುನರ್ಜನ್ಮ ನೀಡಿದೆ.
ಮೊದಲಿಗೆ ಆನ್ಲೈನ್ ಪತ್ರಿಕೆಯಾಗಿ ಇದು ಕಾರ್ಯರೂಪಕ್ಕೆ ಬರಲಿದೆ. ನಂತರದ ದಿನಗಳಲ್ಲಿ ಮುದ್ರಣ ಪ್ರತಿಯನ್ನೂ ಕಾಂಗ್ರೆಸ್ ಗ್ರಾಹಕರ ಕೈಗಿಡಲಿದೆ.

ಇನ್ನು ಜೂನ್ 20ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಮುದ್ರಣ ಪ್ರತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದಾರೆ. ಸಂಸ್ಥೆಯ ಕೇಂದ್ರ ಕಚೇರಿ ನವದೆಹಲಿಯಲ್ಲೇ ಇರಲಿದೆ, ಆದರೆ ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದರಿಂದ ಇಲ್ಲಿ ಚಾಲನೆ ನೀಡಲಾಗಿದೆ.

ಇನ್ನು ಸಂಸ್ಥೆಯ ವೆಬ್ಸೈಟ್ nationalherald.comಗೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ನೀಲಭ್ ಮಿಶ್ರಾ ಸಂಪಾದಕತ್ವದಲ್ಲಿ ಈ ವೆಬ್ಸೈಟ್ ಕಾರ್ಯಚರಿಸುತ್ತಿದೆ.

ಇದೇ ಸಂಸ್ಥೆಯ ಹೆಸರಿನಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭೂಮಿ ಮತ್ತು ಹಣಕಾಸು ವಂಚನೆ ಎಸಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದು, ಅದರಲ್ಲಿ ಅಮ್ಮ ಮತ್ತು ಮಗ ವಿಚಾರಣೆ ಎದುರಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+