Namma Metro: ರಾಷ್ಟ್ರೀಯ ಮೊಬಿಲಿಟಿ ಕಾರ್ಡ್‌ ಜಾರಿಯಿಂದ ಸಾರಿಗೆ ಸುಧಾರಣೆ: BMRCL

ಬೆಂಗಳೂರು, ಡಿಸೆಂಬರ್ 01: ಬಹುಆಯ್ಕೆಯ ಸಾರಿಗೆ ಸೇವೆ (ಆಯ್ಕೆ) ಕೊರತೆಯಿಂದ ಭಾರತದಲ್ಲಿನ ಪ್ರಯಾಣಿಕರಿಗೆ ಕೆಲವು ತೊಂದರೆ ಆಗಿದ್ದವು. ಅದರ ಪರಿಹಾರ್ಥವಾಗಿ ಮಾರ್ಚ್‌ನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 'ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌' ಪರಿಚಯಿಸಿತು. ಇದರಿಂದ ಸಾರಿಗೆ ಸೇವೆ ಮತ್ತಷ್ಟು ಸರಾಗವಾಗಿದ್ದು, ಈ ಕಾರ್ಡ್‌ಗಳನ್ನು ನಗರಗಳ ಮೆಟ್ರೋಗಳಲ್ಲಿ ಬಳಕೆ ಆಗಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದರು.

ಗುರುವಾರ ಬೆಂಗಳೂರು ಟೆಕ್ ಶೃಂಗಸಭೆ 2023 ರಲ್ಲಿ ಮಾತನಾಡಿದ BMRCL ಎಂಡಿ ಅವರು, ಮೆಟ್ರೋ, ರೈಲು, ಕ್ಯಾಬ್ ಮತ್ತು ಬಸ್‌ಗಳಂತಹ ವಿವಿಧ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಮಾನ್ಯ ಸ್ಮಾರ್ಟ್ ಕಾರ್ಡ್ ಅನ್ನು ಪರಿಚಯಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಆರು ನಗರ ನಿಗಮಗಳಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು ಎಂದು ಡಿಎಚ್ ವರದಿ ಮಾಡಿದೆ.

National Common Mobility Card For Different Modes of Public Transport Soon: BMRCL

ಈ ಕಾರ್ಡ್ ನಗರಗಳು ಮತ್ತು ಮೆಟ್ರೋ ನೆಟ್‌ವರ್ಕ್‌ಗಳಲ್ಲಿಯೂ ಸಹ ಕಾರ್ಯ ನಿರ್ವಹಿಸಲಿವೆ. ಇದರಿಂದ ಪ್ರಯಾಣಿಕರಿಗೆ ಮಲ್ಟಿ ಮಾಡಲ್ (ಬಹುಆಯ್ಕೆ) ಸಾರಿಗೆ ವ್ಯವಸ್ಥೆ ಸಿಕ್ಕಂತಾಗುತ್ತದೆ. ಸಾರಿಗೆ ಸೇವಾ ಸಂಸ್ಥೆಗಳ ಮಧ್ಯದ ಸ್ಪರ್ಧೆ ಸಹ ಸುಧಾರಿಸುತ್ತದೆ.

ಸಾರ್ವಜನಿಕ ಬಸ್ ಸಾರಿಗೆ ಮತ್ತು ಮೆಟ್ರೋ ಸಾರಿಗೆಯನ್ನು ಹೇಗೆ ಪ್ರತಿಸ್ಪರ್ಧಿಯಾಗಿ ಸಂಯೋಜಿಸಬೇಕು ಎಂಬುದು ದೊಡ್ಡ ಸವಾಲಾಗಿದೆ ಎಂದು ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಮಲ್ಟಿಪರ್ಪಸ್ ಕಾರ್ಡ್ ಬಳಕೆ ಅನುಕೂಲ

ಪ್ರೀ-ಪೇಯ್ಡ್ ಟ್ರಾನ್ಸಿಟ್-ಕಮ್ ಮಲ್ಟಿಪರ್ಪಸ್ ಕಾರ್ಡ್ ಆಗಿರುವ ರುಪೇ ಎನ್‌ಸಿಎಂಸಿಯನ್ನು ಈ ವರ್ಷದ ಆರಂಭದಲ್ಲಿ ಆರಂಭಿಸಲಾಯಿತು. ಇದು ಪ್ರಸ್ತುತ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಗಳಿಗೆ ಕಾರ್ಯ ನಿರ್ವಹಿಸುತ್ತಿದೆ. ಇಂಧನ ಪಾವತಿಗಳು, ಶಾಪಿಂಗ್, ಊಟ, ಪಾರ್ಕಿಂಗ್, ಟೋಲ್ ಪಾವತಿಗಳು ಮತ್ತು ಕಡಿಮೆ ಮೌಲ್ಯದ ಆಫ್‌ಲೈನ್ ಸಂಪರ್ಕ ರಹಿತ ಪಾವತಿಗಳಿಗಾಗಿ ಕಾರ್ಡ್ ಅನ್ನು ಬಳಸಬಹುದಾಗಿದೆ ಎಂದರು.

National Common Mobility Card For Different Modes of Public Transport Soon: BMRCL

ಉಬರ್-ಎಲೆಕ್ಟ್ರಿಕ್ ಬಸ್ ಸೇವೆ

ಇದೇ ಕಾರ್ಯಕ್ರಮದಲ್ಲಿ 'ಉಬರ್ ಇಂಡಿಯಾ' (Uber Inida) ನಿರ್ದೇಶಕ ಸಂಜಯ್ ಚಡ್ಡಾ ಮಾತನಾಡಿ, ಉಬರ್ ಕಂಪನಿಯ ಎಲೆಕ್ಟ್ರಿಕ್ ಬಸ್ ಗಳು ದೆಹಲಿ ಮತ್ತು ಮುಂಬೈನಲ್ಲಿ ಪ್ರಸ್ತುತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶೀಘ್ರದಲ್ಲೇ ಬೆಂಗಳೂರಿಗೂ ಬರಲಿವೆ. ಈ ಮೂಲಕ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ತಿಳಿಸಿದರು.

ಉಬರ್ ತನ್ನ ಜಾಗತಿಕ ಎಲೆಕ್ಟ್ರಿಕ್ ವಾಹನ ಸೇವೆ ಉಬರ್ ಗ್ರೀನ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿತು. ಮೊದಲ ವಾಹನಗಳನ್ನು ಬಿಟಿ ಸಚಿವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಾಲನೆ ನೀಡಿದರು.

ಗಾಳಿ ಗುಣಮಟ್ಟ ರಕ್ಷಣೆ ನಮ್ಮ ಕರ್ತವ್ಯ

ಬೆಂಗಳೂರಿನಲ್ಲಿ ವಾಯು ಗುಣಮಟ್ಟವನ್ನು ನಿಯಂತ್ರಣವು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಪರಿಸರ ಸಂರಕ್ಷಣೆಯಲ್ಲಿ ನಾವು ಬದ್ಧತೆ ಪ್ರದರ್ಶಿಸಬೇಕಿದೆ. ದೀರ್ಘಾವಧಿ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಮತ್ತು ಸುಸ್ಥಿರತೆಯ ಸಂಸ್ಕೃತಿ ಬೆಳೆಸುವ ಸ್ಪಷ್ಟವಾದ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.

ಸದ್ಯ ಉಬರ್ ಗ್ರೀನ್ ಬೆಂಗಳೂರಿನ ಕೆಲವೆಡೆ ಲಭ್ಯವಿದೆ. ಬಹುತೇಕ ಮಧ್ಯ ಬೆಂಗಳೂರು ಸೇರಿದಂತೆ, ಕಂಪನಿಯು ಶೀಘ್ರದಲ್ಲೇ ಹೆಚ್ಚಿನ ಜಿಯೋಲೊಕೇಶನ್‌ಗಳಿಗೆ ಸೇವೆಯನ್ನು ಹೆಚ್ಚಿಸಲಿದೆ ಎಂದು ಚಡ್ಡಾ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+