ಟ್ವಿಟ್ಟರ್ ನಲ್ಲಿ ಮೋದಿ ಪದಗ್ರಹಣ ಸಂಭ್ರಮ

ಬೆಂಗಳೂರು, ಮೇ.26: ನರೇಂದ್ರ ಮೋದಿ ಅವರು ದೇಶ ಪ್ರಧಾನಿಯಾಗಿ ಸೋಮವಾರ ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಲೇ ಇದೆ.

ಮೋದಿ ಅವರ ಕ್ಯಾಬಿನೆಟ್ ನಲ್ಲಿ ಯಾರು ಸ್ಥಾನ ಸಿಗಲಿದೆ, ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಯಾರು ಯಾರು ಬರಲಿದ್ದಾರೆ? ಎಂಬ ಕುತೂಹಲದ ಟ್ವೀಟ್ ಗಳ ಜತೆಗೆ ದೆಹಲಿಯಲ್ಲಿ ಸೋಮವಾರ ಬೆಳಗ್ಗಿನಿಂದ ನಡೆಯುತ್ತಿರುವ ಚಟುವಟಿಕೆಗಳ ಸಂಪೂರ್ಣ ಚಿತ್ರಣ ಸಿಗುತ್ತಿದೆ. ಹಲವಾರು ಮಾಧ್ಯಮಗಳು ಟ್ವೀಟ್ ಮೂಲಕ ಮೋದಿ ಅವರ ಕಾರ್ಯಕ್ರಮವನ್ನು ವರದಿ ಮಾಡುತ್ತಿವೆ. [ಲೈವ್ ಅಪ್ಡೇಟ್ ಇಲ್ಲಿ ಓದಿ]

ಸಾರ್ವಜನಿಕರೂ ಕೂಡಾ ಮೋದಿ ಪ್ರಧಾನಿಯಾಗುವ ಶುಭ ಸಂದರ್ಭಕ್ಕೆ ಶುಭ ಹಾರೈಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಟ್ವೀಟ್ ಖಾತೆಯಿಂದ ಕಾಲಕಾಲಕ್ಕೆ ಅಪ್ಡೇಟ್ ನೀಡುತ್ತಿದ್ದಾರೆ. ಟ್ವೀಟ್ ಲೋಕದಲ್ಲಿ ಮೋದಿ ಗ್ರಹಣವಾಗಿದ್ದು, ಅದರ ಅಸಮಗ್ರ ಚಿತ್ರ ನಿಮ್ಮ ಮುಂದಿದೆ.

63 ವರ್ಷದ ಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗೋಧೂಳಿ ಮುಹೂರ್ತದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಸಮಾರಂಭಕ್ಕೂ ದೆಹಲಿಯಲ್ಲಿ ನಡೆದಿರುವ ಚಟುವಟಿಕೆಗಳ ಲೈವ್ ಅಪ್ದೇಟ್ ಇಲ್ಲಿದೆ.

ದೇಶದ ಹಲವೆಡೆ ದಿನವಿಡಿ ಸಂಭ್ರಮಾಚರಣೆ

ದೇಶದ ಹಲವೆಡೆ ದಿನವಿಡಿ ಸಂಭ್ರಮಾಚರಣೆ

ದೇಶದ ಹಲವೆಡೆ ದಿನವಿಡಿ ಸಂಭ್ರಮಾಚರಣೆ ಮನೆ ಮಾಡಿದ್ದು, ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದೆ. ಮೋದಿ ಅಭಿಮಾನಿಗಳು ಸಿಹಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಸಂಭ್ರಮದ ನಡುವೆ ಸೂತಕದ ಛಾಯೆ

ಸಂಭ್ರಮದ ನಡುವೆ ಸೂತಕದ ಛಾಯೆ ಎದುರಾಗಿದ್ದನ್ನು ಗಮನಿಸಿದ ಮೋದಿ ಅವರು ಟ್ವೀಟ್ ಮಾಡಿ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಸಾಂತ್ವನ ಹೇಳಿದ್ದಾರೆ.

ರಾಜ್ ಘಾಟ್ ನಲ್ಲಿ ನರೇಂದ್ರ ಮೋದಿ

ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿಗೆ ನರೇಂದ್ರ ಮೋದಿ ನಮಿಸಿದರು.

ವಾಜಪೇಯಿ ಅವರ ಮನೆಗೆ ಮೋದಿ

ರಾಜಘಾಟ್ ಭೇಟಿ ನಂತರ ಮಾಜಿ ಪ್ರಧಾನಿ, ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಮನೆಗೆ ನಿಯೋಜಿತ ಪ್ರಧಾನಿ ಮೋದಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.

ವಾರಣಾಸಿಯಲ್ಲಿ ವಿಶೇಷ ಪ್ರಾರ್ಥನೆ

ವಾರಣಾಸಿಯಲ್ಲಿ ಮೋದಿ ಅವರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಮಾರಿಷಸ್ ನ ಪ್ರಧಾನಿ ದೆಹಲಿಗೆ ಆಗಮನ

ಮಾರಿಷಸ್ ನ ಪ್ರಧಾನಿ ನವಿನ್ ಚಂದ್ರ ರಾಮಗೂಲಂ ಅವರು ದೆಹಲಿಗೆ ಆಗಮನ

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ ಆಗಮನ

ಮೋದಿ ಪದಗ್ರಹಣ ಸಮಾರಂಭಕ್ಕಾಗಿ ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ಆಗಮನ

ನಟ ಅನುಪಮ್ ಖೇರ್ ಟ್ವೀಟ್

ಅನುಪಮ್ ಖೇರ್ ಟ್ವೀಟ್ ಮಾಡಿ ಇದು ದೇಶದ ವಿಜಯ ನಾನು ಮೋದಿ ಪದಗ್ರಹಣ ಸಮಾರಂಭಕ್ಕೆ ಹೋಗುತ್ತಿದ್ದೇನೆ ಎಂದಿದ್ದಾರೆ.

Array

ಭಾರತದ ಪಾಲಿಗೆ ಇಂದು ಸುವರ್ಣ ದಿನ

ಭಾರತದ ಪಾಲಿಗೆ ಇಂದು ಸುವರ್ಣ ದಿನ, ಮೋದಿ ಪದಗ್ರಹಣ ಸಮಾರಂಭ ಐತಿಹಾಸಿಕ.

Array

3000 ವಿವಿಐಪಿಗಳಿಂದ ತುಂಬಿರುವ ದೆಹಲಿ

3000 ವಿವಿಐಪಿಗಳಿಂದ ತುಂಬಿರುವ ದೆಹಲಿ, ಭೂತನ್ ಪಿಎಂ ಲಿಯೊಚೆನ್ ತ್ಸಾರಿಂಗ್ ಆಗಮಿಸಿದ ವಿದೇಶಿ ಅತಿಥಿಗಳಲ್ಲಿ ಮೊದಲಿಗರು.

Array

ಬಾಂಗ್ಲಾದೇಶದ ಪ್ರತಿನಿಧಿ ಆಗಮನ

ಬಾಂಗ್ಲಾದೇಶದ ಪ್ರತಿನಿಧಿಯಾಗಿ ಸ್ಪೀಕರ್ ಡಾ.ಶಿರಿನ್ ಶರ್ಮಿನ್ ಚೌಧರಿ ಆಗಮನ

Array

ಡಿನ್ನರ್ ಗೆ ಸೋನಿಯಾ, ರಾಹುಲ್

ಮೋದಿ ಆಯೋಜನೆಯ ಡಿನ್ನರ್ ಗೆ ಸೋನಿಯಾ, ರಾಹುಲ್, ಮನಮೋಹನ್ ಸಿಂಗ್ ಅವರಿಗೆ ಆಹ್ವಾನ

ಶರದ್ ಪವಾರ್ ಆಗಮನದ ಬಗ್ಗೆ ಟ್ವೀಟ್

ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಮೋದಿ ಪದಗ್ರಹಣ ಸಮಾರಂಭಕ್ಕೆ ಆಗಮನದ ಬಗ್ಗೆ ಟ್ವೀಟ್

ಸಂಭಾವ್ಯ ಸಚಿವರ ಜತೆ ಚಹಾಕೂಟ

ಸಂಭಾವ್ಯ ಸಚಿವರ ಜತೆ ಮೋದಿ ಅವರು ಚಹಾಕೂಟ ನಡೆಸಿದರು ಎಂದು ಚಿರಾಗ್ ಪಾಸ್ವಾನ್ ಅವರ ಹೇಳಿಕೆ

ಪಾಕ್ ಪ್ರಧಾನಿ ನವಾಜ್ ಷರೀಫ್ ಆಗಮನ

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ದೆಹಲಿಗೆ ಆಗಮಿಸಿದ ಕ್ಷಣ

ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ

ನೇಪಾಳ ಪ್ರಧಾನಿ ಸುಶೀಲ್ ಕೊಯಿರಾಲ ಅವರು ಮೋದಿ ಪದಗ್ರಹಣ ಸಮಾರಂಭಕ್ಕೆ ಆಗಮನ

ಅಫ್ಘಾನ್ ಅಧ್ಯಕ್ಷ ಕರ್ಜಾಯಿ ಆಗಮನ

ಮೋದಿ ಪದಗ್ರಹಣ ಸಮಾರಂಭಕ್ಕೆ ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ ಆಗಮನ

ವಾರಣಾಸಿ ಘಾಟ್ ಗಳಲ್ಲಿ ಪೂಜೆ

ವಾರಣಾಸಿ ದಶಾಶ್ವಮೇಧ ಘಾಟ್ ಗಳಲ್ಲಿ ಗಂಗಾ ಪೂಜೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+