Narendra Modi Road Show: ಮೋಡದ ನಡುವೆಯೂ ಹೂಮಳೆಗೈದು ನರೇಂದ್ರ ಮೋದಿ ಸ್ವಾಗತಿಸಿದ ಬೆಂಗಳೂರು ಜನ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಮೇ 10ರಂದು ನಡೆಯುವ ಮತದಾನಕ್ಕೂ ಮುನ್ನ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ.

ಶನಿವಾರ, ಏಪ್ರಿಲ್ 29ರಂದು ಬೆಂಗಳೂರಿನ ನೈಸ್ ರೋಡ್ ಜಂಕ್ಷನ್‌ನಿಂದ ಸುಮ್ಮನಹಳ್ಳಿವರೆಗೆ ಸುಮಾರು 5 ಕಿಮೀ ದೂರದವರೆಗೆ ರೋಡ್ ಶೋ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಸಾಗಿದರು.

Narendra Modi Road Show: Bengaluru People Welcomed PM Narendra Modi With Showers Of Flowers

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಕಣ್ತಂಬಿಕೊಳ್ಳಲು ಜನಸಾಗರವೇ ಹರಿದುಬಂದಿದ್ದು, ಬ್ಯಾಡರಹಳ್ಳಿ, ಸುಂಕದಕಟ್ಟೆ ರಸ್ತೆಯ ಇಕ್ಕೆಲಗಳಲ್ಲೂ ಕಾರ್ಯಕರ್ತರು, ಮಕ್ಕಳು, ವೃದ್ಧರು, ಯುವಕ, ಯುವತಿಯರು, ಗ್ರಹಿಣಿಯರು ಜಮಾಯಿಸಿದ್ದಾರೆ.

ನರೇಂದ್ರ ಮೋದಿ ಸಾಗುತ್ತಿರುವ ವಾಹನದ ಮೇಲೆ ಬಿಜೆಪಿ ಕಾರ್ಯಕರ್ತರು ಹೂವಿನ ಮಳೆಗರೆದರು. ಮೋದಿಯವರಿಗೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮತ್ತು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸಾಥ್ ನೀಡುತ್ತಿದ್ದಾರೆ.

ಇಂದು (ಶನಿವಾರ) ಬೀದರ್, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಸಂಜೆ ವೇಳೆಗೆ ರಾಜಧಾನಿ ಬೆಂಗಳೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

 Narendra Modi Road Show: Bengaluru People Welcomed PM Narendra Modi With Showers Of Flowers

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಇದೀಗ ರೋಡ್ ಶೋ ಮೂಲಕ ಮತಯಾಚನೆ ಮಾಡಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತರಿಗೆ ಇದು ಇನ್ನಷ್ಟು ಹುಮ್ಮಸ್ಸು ತುಂಬಲು ನೆರವಾಗಲಿದೆ.

ಕತ್ತಲಾದರೂ ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಲು ಬೆಂಗಳೂರಿನ ಜನರು ಕಾತರದಿಂದ ನಿಂತು ಕಾದರು ಮತ್ತು ರಸ್ತೆಯುದ್ದಕ್ಕೂ ಬಿಜೆಪಿ ಬಾವುಟ ಹಿಡಿದು ಮೋದಿ.. ಮೋದಿ ಜೈಕಾರ ಮೊಳಗಿಸಿದರು.

ರೋಡ್ ಶೋ ಸಾಗುವ ರಸ್ತೆಯುದ್ದಕ್ಕೂ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪ್ರತಿ ಐದು ಮೀಟರ್‌ಗೆ ಒಬ್ಬ ಪೊಲೀಸರು ನಿಂತಿದ್ದಾರೆ. ರೋಡ್ ಶೋ ಸಾಗಿದಂತೆ ಜನರೂ ಮುಂದೆ ಸಾಗುತ್ತಿದ್ದು, ಇಡೀ ಮಾಗಡಿ ರಸ್ತೆ ಜನಸಾಗದಿಂದ ತುಂಬಿದೆ.

ನರೇಂದ್ರ ಮೋದಿ ರೋಡ್ ಶೋ ಅಂತ್ಯ
ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ಸುಮನಹಳ್ಳಿ ಜಂಕ್ಷನ್​ಗೆ ತಲುಪಿತು. ಬಳಿಕ ಪ್ರಧಾನಿ ಮೋದಿ ಜನರತ್ತ ಕೈ ಬೀಸಿದರು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳು, ಮೋದಿಗೆ ಜೈಕಾರ ಹಾಕಿದರು.

ಬೆಂಗಳೂರಿನಲ್ಲಿ ರೋಡ್ ಶೋ ಅಂತ್ಯವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸುಮನಹಳ್ಳಿಯಿಂದ ನಿರ್ಗಮಿಸಿದ್ದು, ನೇರವಾಗಿ ರಾಜಭವನದತ್ತ ಕಾರಿನಲ್ಲಿ ತೆರಳಿದರು.

ಭಾನುವಾರದಂದು ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದ್ದು, ಶನಿವಾರವೇ ಮೈಸೂರಿನ ವಿದ್ಯಾಪೀಠ ವೃತ್ತದಿಂದ ತಾಲೀಮು ಮಾಡಲಾಗಿದೆ. ರೋಡ್ ಶೋ‌ ಮಾರ್ಗದಲ್ಲಿ ಪ್ರಧಾನಿ ಮೋದಿ‌ ಕಾರು ಸಾಗಿದ್ದು, ಸುತ್ತಲೂ ಹಗ್ಗ ಹಿಡಿದು ಮೈಸೂರಿನ ವಿಶೇಷ ಕಮಾಂಡೋ ಪಡೆ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+