ನಂದಿ ಬೆಟ್ಟದಲ್ಲಿ ಗಿಡ ನೆಟ್ಟ ಯುನೈಟೆಡ್ ವೇ ಬೆಂಗಳೂರು
ಬೆಂಗಳೂರು, ಜೂನ್ 28 : ನಂದಿ ಬೆಟ್ಟದ ಪರಿಸರ ಉಳಿವಿಗೆ ಟೊಂಕ ಕಟ್ಟಿ ನಿಂತಿರುವ ಯುನೈಟೆಡ್ ವೇ ಬೆಂಗಳೂರು ಸಂಸ್ಥೆ ಮಳೆಗಾಲ ಆರಂಭಕ್ಕೆ ಸರಿಯಾಗಿ 25 ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸಿದ್ದು ಮೊದಲ ಹಂತವಾಗಿ 500 ಸಸಿಗಳನ್ನು ನೆಟ್ಟಿದೆ.
ಪರಿಸರ ಜಾಗೃತಿಗೆ "ನಂದಿ ಹಿಲ್ಲಥಾನ್" ಆಯೋಜಿಸಿದ್ದ ಸಂಸ್ಥೆ ಇದೀಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪರಿಸರ ಪ್ರೇಮ ಮೆರೆದಿದೆ. ಕರ್ನಾಟಕ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಜೂನ್ 25 ಶನಿವಾರ 500 ಸಸಿಗಳನ್ನು ಬೆಟ್ಟದ ವಿವಿಧೆಡೆ ನೆಟ್ಟಿದೆ.[ಪರಿಸರ ಜಾಗೃತಿ ಬಗ್ಗೆ ಜಾವಗಲ್ ಶ್ರೀನಾಥ್ ಏನಂತಾರೆ?]

ಮಹಾನಗರ ಬೆಂಗಳೂರಿನಿಂದ ನಂದಿ ಬೆಟ್ಟ 65 ಕಿಮೀ ದೂರದಲ್ಲಿದೆ. ನಗರದ ವ್ಯಾಪ್ತಿ ದಿನೇ ದಿನೇ ಹೆಚ್ಚಾಗುತ್ತಿದೆ. ಆದಕ್ಕೆ ಸರಿಯಾಗಿ ಪರಿಸರ ಕಾಪಾಡುವ ಹೊಣೆಯೂ ಪ್ರತಿಯೊಬ್ಬರ ಮೇಲಿದೆ.[ನಂದಿ ಬೆಟ್ಟದ ತಪ್ಪಲಿನಲ್ಲಿ ಪರಿಸರ ಸಂರಕ್ಷಣೆಗೆ ಓಟ]
ನಂದಿ ಬೆಟ್ಟದ ಪರಿಸರ ಸಂರಕ್ಷಣೆ ಮತ್ತು ಹಸಿರು ಹೆಚ್ಚಳ, ಸ್ಥಳೀಯ ಜನರ ಜೀವನ ಮಟ್ಟ ಸುಧಾರಣೆಯನ್ನು ಗುರಿಯಾಗಿಸಿಕೊಂಡು ಯುನೈಟೆಡ್ ವೇ ಬೆಂಗಳೂರು ಕೆಲಸ ಮಾಡುತ್ತಿದೆ.[ಯಾಕಾಗಿ ನಡೆದಿತ್ತು ನಂದಿ ಹಿಲ್ಲಥಾನ್]
ಎರಡನೇ ಹಂತದಲ್ಲಿ ಭಾಗವಹಿಸಲು ಇಚ್ಛಿಸಿದರೆ
ಕಾರ್ಪೊರೇಟ್ ಸಂಸ್ಥೆಗಳು: ಕೃತಿಕಾ ಪ್ರಕಾಶ್ ಅವರನ್ನು ಸಂಪರ್ಕಿಸಬಹುದು, [email protected]
ಹೆಚ್ಚಿನ ಮಾಹಿತಿಗಾಗಿ : [email protected]ಗೆ ಈಮೇಲ್ ಕಳಿಸಿ ಅಥವಾ 91- 080 - 4090 6345 / 2525 8363 ಸಂಖ್ಯೆಗೆ ಕರೆ ಮಾಡಿ.











Click it and Unblock the Notifications