Get Updates
Get notified of breaking news, exclusive insights, and must-see stories!

RV Road- Bommasandra Line: ನಮ್ಮ ಮೆಟ್ರೋ ಹೊಸ ಮಾರ್ಗಕ್ಕೆ ರೈಲ್ವೆ ಬೋರ್ಡ್ ಒಪ್ಪಿಗೆ, ಕಾರ್ಯಾಚರಣೆ ಅಪ್ಡೇಟ್

ಬೆಂಗಳೂರು, ಮೇ 27: ಬೆಂಗಳೂರು ನಗರದ ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗದ (Namma Metro) ಕಾರ್ಯಾಚರಣೆಗೆ ಮತ್ತೆ ವಿಳಂಬ ನಿರೀಕ್ಷೆ ಇದೆ. ಮೇ ಅಂತ್ಯ ಇಲ್ಲವೇ ಜೂನ್ ಅಂತ್ಯ ಎಂದು ಹೇಳಲಾಗುತ್ತಿ. ಇದೀಗ ಮೆಟ್ರೋ ಹಳದಿ ಮಾರ್ಗದಲ್ಲಿ ಡ್ರೈವರ್ ಲೆಸ್ ರೈಲು ತಪಾಸಣೆಗೆ ಪೂರ್ಣಗೊಂಡಿದ್ದು, ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ. ಜೋನ್ ಮೊದಲ ವಾರ ಸಿಎಂಆರ್‌ಎಸ್ ತಂಡದ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಹೌದು, ಅನೇಕ ವಿಳಂಬಗಳ ಬಳಿಕ ಮೆಟ್ರೋ ಹಳದಿ ಮಾರ್ಗವನ್ನು 'ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಲೋಕಾರ್ಪಣೆ ಮಾಡಲು ತಯಾರಿ ನಡೆಸಿದೆ. ಮೂರನೇ ರೈಲಿನ ತಪಾಸಣೆ ಪೂರ್ಣಗೊಂಡಿದೆ. ಮೆಟ್ರೋ ರೋಲಿಂಗ್ ಸ್ಟಾಕ್‌ಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಅಂತಿಮ ಹಂತದ ಪರಿಶೀಲನೆಯನ್ನು ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಮಾಡಲಿದ್ದಾರೆ. ಹೀಗಿದ್ದರೂ ಬಹುನಿರೀಕ್ಷೆಯ ಹಳದಿ ಮಾರ್ಗ ಜೂನ್ ನಲ್ಲಿ ತೆರೆಯುವುದು ಡೌಟು ಎನ್ನಲಾಗುತ್ತಿದೆ.

Namma Metro Yellow Line Update Railway Board Approves Metro Operation Expect in July

ಹಸಿರು ಮಾರ್ಗದ ಆರ್‌ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ಇರುವ ಒಟ್ಟು 19.15 ಕಿಲೋ ಮೀಟರ್ ಕಾರಿಡಾರ್ ದಕ್ಷಿಣ ಭಾಗಗಳಿಗೆ ಪ್ರಮುಖ ಸಂಪರ್ಕ ಒದಗಿಸಲಿದೆ. ಐಟಿ ಕಾರಿಡಾರ್‌ಗೂ ಸಂಪರ್ಕ ಕಲ್ಪಿಸಲಿದೆ. ಮೂರನೇ ಸೆಟ್ ರೈಲು ಇನ್ನೊಂದು ವಾರದಲ್ಲಿ ಸೇವೆ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗ ನಿರ್ಮಾಣ, ಮೆಟ್ರೋ ನಿಲ್ದಾಣ, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಆದರೆ ಚಾಲಕರಹಿತ ರೈಲು ಸೆಟ್‌ಗಳನ್ನು ಒಪ್ಪಂದಂತೆ ಚೀನಾ ಕಂಪನಿ ತಲುಪಿಸುವುದು ವಿಳಂಬವಾಗುತ್ತಿದೆ. ಈಗಷ್ಟೇ ಮೂರನೇ ರೈಲನ್ನು ಸ್ವೀಕರಿಸಲಾಗಿದೆ. ಇನ್ನೂ 33 ರೈಲು ಸೆಟ್‌ಗಳು ಬೆಂಗಳೂರಿಗೆ ಬರಬೇಕಿದೆ. 36 ರೈಲು ಸೆಟ್ ಪೈಕಿ ಕೇವಲ ಮೂರು ಸೆಟ್ ರೈಲುಗಳು ಬೆಂಗಳೂರಿಗೆ ಬಂದಿವೆ. ಈ ಮಾರ್ಗದಲ್ಲಿ ಓಡಿಸಲು ಕನಿಷ್ಠ ಎಂಟು ಸೆಟ್ ರೈಲುಗಳಾದರೂ ಬೇಕು. ಸದ್ಯ ಮೂರಿದ್ದು, ಅವುಗಳಿಂದಲೇ ಜೂನ್ ಅಂತ್ಯಕ್ಕೆ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Namma Metro Yellow Line Update Railway Board Approves Metro Operation Expect in July

ಜುಲೈಗೆ ಮೆಟ್ರೋ ಸಂಚಾರ ಶುರು ನಿರೀಕ್ಷೆ

ಇರುವ ಮೂರು ರೈಲುಗಳಿಂದ ಹಳದಿ ಮಾರ್ಗದಲ್ಲಿ ಸಂಚಾರ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಅಂತಿಮ ಒಪ್ಪಿಗೆ, ಪರಿಶೀಲನೆ ಆಗಲು ಸಮಯ ಹಿಡಿಯಬಹುದು. ಮತ್ತೆ ಗುಡುವು ಪಡೆದುಕೊಂಡು ಜುಲೈ ತಿಂಗಳಲ್ಲಿ ಸಾರ್ವಜನಿಕರಿಗೆ ಮಾರ್ಗ ತೆರೆಯುವ ಸಾಧ್ಯತೆ ಇದೆ. ಸದ್ಯ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ತಪಾಸಣೆ ಬರುವ ವೇಳಾಪಟ್ಟಿಯನ್ನೇ ಇನ್ನು ಪ್ರಕಟಿಸಿಲ್ಲ. ಅವರು ಬರುವ ದಿನಾಂಕ ಪ್ರಟಕವಾಗುವುದನ್ನು ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ. ಸಿಗ್ನಲಿಂಗ್ ಪ್ರಮಾಣೀಕರಣ ಶೀಘ್ರದಲ್ಲೇ ರವಾನೆಯಾಗಲಿದೆ. ಮೇ ಅಂತ್ಯ ಇಲ್ಲವೇ ಜೂನ್ ಮೊದಲ ವಾರ ಶಾಸನಬದ್ಧ ಪರಿಶೀಲನೆ ನಡೆಯಲಿದೆ. ಅಂದು ಬಿಎಂಆರ್‌ಸಿಎಲ್ ಮಾರ್ಗ ಲೋಕಾರ್ಪಣೆಯ ಅಧಿಕೃತ ದಿನಾಂಕ ಪ್ರಕಟಿಸುವ ನಿರೀಕ್ಷೆ ಜನರಲ್ಲಿದೆ.

CMRS ತಪಾಸಣೆಯಲ್ಲಿ ಏನೆಲ್ಲಾ ಇರಲಿದೆ?

ಅಂತಿಮ ಸಿಎಂಆರ್‌ಎಸ್ ತಪಾಸಣೆಯಲ್ಲಿ ಆಯುಕ್ತರು ಕಡ್ಡಾಯವಾಗಿ ಮೆಟ್ರೋ ಹಳಿಗಳು, ನಿಲ್ದಾಣಗಳು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಪ್ರವೇಶ ಮತ್ತು ನಿರ್ಗಮನ ಬಿಂದುಗಳು ಹಾಗೂ ರೈಲು ಸೆಟ್‌ಗಳ ಪರಿಶೀಲಿಸುವುದು ಕಡ್ಡಾಯವಾಗಿದೆ. ಈಗಾಗಲೇ ಅವರು ಬೆಂಗೂರಿಗೆ ಬಂದ ಮೂರನೇ ರೈಲನ್ನು ಪರಿಶೀಲಿಸಿ ತೆರಳಿದ್ದಾರೆ. ಇದು ಇದೀಗ ಅಂತಿಮ ಪರಿಶೀಲನೆ ಆಗಿದ್ದು, ಮೆಟ್ರೋ ಆರಂಭಕ್ಕೆ ನೀರ್ಣಾಯಕ ಅಂತಲೂ ಹೇಳಲಾಗುತ್ತಿದೆ. ಈ ಪರೀಕ್ಷೆಗಳು ನಡೆಯಲು ಎರಡು ವಾರ ಸಮಯ ಹಿಡಿಯಬಹುದು. ಅದಾಗುತ್ತಿದ್ದಂತೆ ಕಾರ್ಯಾಚರಣೆಗೆ ಅಧಿಕೃತ ಹಸಿರು ನಿಶಾನೆ ದೊರಕಬಹುದು.

ತಿಂಗಳಿಗೊಂದು ರೈಲು ಬರಬೇಕು

BMRCL 2019 ರಲ್ಲಿ ಚೀನಾದ CRRC ಕಂಪನ ಜೊತೆಗೆ ₹1,578 ಕೋಟಿ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ, ಬೆಂಗಳೂರು ಮೆಟ್ರೋಗೆ 06 ಬೋಗಿಗಳ ಒಂದು ಸೆಟ್ ರೈಲಿನಂತೆ ಒಟ್ಟು 36 (216 ಬೋಗಿ) ಸೆಟ್ ರೈಲು ಒದಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗುತ್ತು. ಇದಕ್ಕಾಗಿ ಭಾರತದಲ್ಲಿ ಉತ್ಪಾದನೆ ಮೂಲಸೌಕರ್ಯ ಸ್ಥಾಪಿಸಬೇಕಿತ್ತು. ಅದರ ಸ್ಥಾಪನೆ ವಿಳಂಬವಾಯಿತು. ಉತ್ಪಾದನೆ ಹಾಗೂ ಪೂರೈಕೆ ವಿಳಂಬವಾಗುತ್ತಲೇ ಬಂತು. ಅಲ್ಲಿಂದ ಈವರೆಗೆ ಕೇವಲ ಮೂರು ರೈಲುಗಳ ಹಳದಿ ಮಾರ್ಗಕ್ಕೆ ಪೂರೈಕೆ ಆಗಿವೆ. ಇನ್ನಷ್ಟು ಬರಬೇಕಿದೆ. ಈ ಹಿಂದೆ ಟಿಟಾಗರ್‌ನಿಂದ ರೈಲು ಪೂರೈಸುವಾಗ ಕಂಪನಿಯು ಪ್ರತಿ ತಿಂಗಳಿಗೆ ಒಂದು ರೈಲು ಪೂರೈಕೆ ಕುರಿತು ವಿಶ್ವಾಸ ವ್ಯಕ್ತಪಡಿಸಿತ್ತು. ಅದಿನ್ನು ಕಾರ್ಯರೂಪಕ್ಕೆ ಬಂದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+