Namma Metro: ಜನವರಿ ಅಂತ್ಯಕ್ಕೆ ನಮ್ಮ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತ

ಬೆಂಗಳೂರು, ಜನವರಿ 02: ನಮ್ಮ ಮೆಟ್ರೋ ಯೋಜನೆಯ ಬಹು ನಿರೀಕ್ಷಿತ ಮಾರ್ಗ ಆರ್‌. ವಿ. ರಸ್ತೆ-ಬೊಮ್ಮಸಂದ್ರವನ್ನು ಸಂಪರ್ಕಿಸುತ್ತದೆ. ಹಳದಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ 2024ರ ಡಿಸೆಂಬರ್‌ಗೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಗಡುವು ಮುಗಿದು ಹೋಗಿದೆ. ಅತ್ಯಧಿಕ ವಾಹನ ದಟ್ಟಣೆಯಿಂದ ಕೂಡಿರುವ ಈ ಮಾರ್ಗದಲ್ಲಿ ಜನವರಿ ಅಂತ್ಯಕ್ಕೆ ರೈಲುಗಳ ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಈ ಗಡುವು ಮತ್ತೆ ಮುಂದಕ್ಕೆ ಹೋಗುವುದಿಲ್ಲ ಎಂಬ ವಿಶ್ವಾಸದಲ್ಲಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಇದ್ದಾರೆ.

ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಲಕ್ಷಕ್ಕೂ ಅಧಿಕ ಜನರಿಗೆ ಅನುಕೂಲವಾಗುವ ಮಾರ್ಗ ಆರ್‌. ವಿ. ರಸ್ತೆ-ಬೊಮ್ಮಸಂದ್ರ ಎಂದು ಅಂದಾಜಿಸಲಾಗಿದೆ. 18.82 ಕಿ. ಮೀ. ಮಾರ್ಗದಲ್ಲಿ 18 ನಿಲ್ದಾಣಗಳಿವೆ. ಮಾರ್ಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆಯೇ ಸಂಚಾರ ಆರಂಭಿಸಲು ತೊಡಕಾಗಿದೆ ಎಂದು ವರದಿಗಳು ಹೇಳುತ್ತಿವೆ.

Namma Metro Yellow Line On Track No Further Delay

ಜನವರಿ ಅಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದೇ ಗಡುವು ಇರಲಿದೆಯೇ? ಇಲ್ಲವೇ ಮತ್ತೊಮ್ಮೆ ಗಡುವು ವಿಸ್ತರಣೆಯಾಗಲಿದೆಯೇ? ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ಪ್ರಶ್ನೆಗೂ ಕಾರಣವಾಗಿರುವುದು ರೈಲುಗಳ ಕೊರತೆ.

ಬೆಂಗಳೂರಿಗೆ ಬರಲಿದೆ ರೈಲು: ಜನವರಿ 10ರ ವೇಳೆಗೆ ಹಳದಿ ಮಾರ್ಗದಲ್ಲಿ ಸಂಚಾರ ನಡೆಸುವ ರೈಲಿನ ಮಾದರಿ ಪೀಣ್ಯದ ಡಿಪೋಗೆ ಆಗಮಿಸಲಿದೆ. ಡಿಜಿಟಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಡಿಪೋದಲ್ಲಿ ಈ ರೈಲನ್ನು ಜೋಡಣೆ ಮಾಡಲಾಗುತ್ತದೆ. ಮುಖ್ಯ ಮಾರ್ಗದಕ್ಕೆ ರೈಲು ನಿಯೋಜನೆ ಮಾಡುವ ಮುನ್ನ ಹಲವು ಪರೀಕ್ಷೆಗಳು ನಡೆಯಬೇಕಿದೆ. ಮೊದಲು ರಾತ್ರಿ ವೇಳೆ ಪ್ರಾಯೋಗಿಕ ಸಂಚಾರ ನಡೆಯಲಿದೆ.

ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರವನ್ನು ವೀಕ್ಷಣೆ ಮಾಡಿ ಒಪ್ಪಿಗೆ ನೀಡಬೇಕಿದೆ. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ ಬಳಿಕ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಪ್ರಕ್ರಿಯೆಗಳು ಜನವರಿ ಅಂತ್ಯಕ್ಕೆ ನಿಜವಾಗಿಯೂ ಪೂರ್ಣವಾಗಲಿದೆಯೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಸದ್ಯ ಬೆಂಗಳೂರು ನಗರದಲ್ಲಿ ನೇರಳೆ ಮಾರ್ಗ (43.49 ಕಿ. ಮೀ.), ಹಸಿರು ಮಾರ್ಗ (33.5 ಕಿ. ಮೀ.) ನಮ್ಮ ಮೆಟ್ರೋ ಸಂಪರ್ಕವಿದೆ. ಒಟ್ಟು 57 ರೈಲುಗಳು ನೇರಳೆ ಮಾರ್ಗದಲ್ಲಿ 33, ಹಸಿರು ಮಾರ್ಗದಲ್ಲಿ 24 ರೈಲುಗಳು ಓಡುತ್ತಿವೆ. 52 ರೈಲುಗಳನ್ನು ಪ್ರತಿದಿನದ ಸಂಚಾರಕ್ಕೆ 5 ರೈಲುಗಳನ್ನು ನಿರ್ವಹಣೆಗಾಗಿ ಮೀಸಲಿರಿಸಲಾಗಿದೆ. 2021ರಲ್ಲಿಯೇ ಹೆಚ್ಚುವರಿ ರೈಲುಗಳು ಆಗಮಿಸಲಿವೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಆಗಮಿಸಿಲ್ಲ.

2019ರಲ್ಲಿಯೇ ಬಿಎಂಆರ್‌ಸಿಎಲ್ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್‌ ಕಾರ್ಪೊರೇಷನ್‌ (ಸಿಆರ್‌ಆರ್‌ಸಿ) ಜೊತೆ 36 ರೈಲು ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ 21 ನೇರಳೆ ಮತ್ತು ಹಸಿರು ಮಾರ್ಗ, 15 ಹಳದಿ ಮಾರ್ಗಕ್ಕೆ ಎಂದು ಯೋಜನೆ ರೂಪಿಸಲಾಗಿದೆ. ಸಿಆರ್‌ಆರ್‌ಸಿ ಭಾರತದಲ್ಲಿ ಕೋಲ್ಕತ್ತಾದಲ್ಲಿರುವ ಟಿಆರ್‌ಎಸ್‌ಎಸ್‌ಎಲ್‌ ಮೂಲಕ ರೈಲುಗಳನ್ನು ಪೂರೈಕೆ ಮಾಡಲಿದೆ.

ಆಗಸ್ಟ್ 2023ರಲ್ಲಿಯೇ ಬರಬೇಕಿದ್ದ ಈ ಬೋಗಿಗಳು ತಡವಾಗಿದ್ದು, ಈಗ ಜನವರಿಗೆ ಬೆಂಗಳೂರಿಗೆ ಬರಲಿವೆ. ಟಿಆರ್‌ಎಸ್‌ಎಸ್‌ಎಲ್‌ ಜನವರಿ 15ರಂದು ಹೆಬ್ಬಗೋಡಿ ಡಿಪೋಗೆ ತನ್ನ 2ನೇ ಬ್ಯಾಚ್‌ ರೈಲುಗಳನ್ನು ನೀಡಲಿದೆ. ಈಗಾಗಲೇ ಈ ಡಿಪೋಗೆ ಚೀನಾದಿಂದ ಮೊದಲ ರೈಲು ಆಗಮಿಸಿದೆ. ಸದ್ಯ ಎರಡು ರೈಲು ಸೇರಿಸಿ ಹಳದಿ ಮಾರ್ಗದಲ್ಲಿ 10 ಅಥವ 13 ನಿಮಿಷಕ್ಕೊಂದು ರೈಲು ಓಡಿಸುವ ಯೋಜನೆಯಲ್ಲಿ ಬಿಎಂಆರ್‌ಸಿಎಲ್ ಇದೆ.

ಹಳದಿ ಮಾರ್ಗದಲ್ಲಿ ಸಿಗ್ನಲಿಂಗ್, ಸಿವಿಲ್ ಕಾಮಗಾರಿಗಳು ಮುಕ್ತಾಯವಾಗಿದೆ. ಈ ಮಾರ್ಗದಲ್ಲಿ ರೈಲು ಓಡಿಸಲು ಇರುವ ಪ್ರಮುಖ ತೊಂದರೆ ಸದ್ಯಕ್ಕೆ ರೈಲುಗಳ ಕೊರತೆ. 2025ರ ಆಗಸ್ಟ್ ವೇಳೆಗೆ ಟಿಆರ್‌ಎಸ್‌ಎಸ್‌ಎಲ್‌ 15 ಆರು ಬೋಗಿಯ ರೈಲುಗಳನ್ನು ನೀಡುವ ನಿರೀಕ್ಷೆ ಇದ್ದು, ಬಳಿಕ ಹಳದಿ ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಾರ್ಗದಲ್ಲಿ ಚಾಲಕ ರಹಿತ ನಮ್ಮ ಮಟ್ರೋ ರೈಲುಗಳನ್ನು ಓಡಿಸಲು ಸಹ ಬಿಎಂಆರ್‌ಸಿಎಲ್ ಮುಂದಾಗಿದೆ. ಆದರೆ ಅದಕ್ಕೆ ಇನ್ನೂ ಸಹ ಒಪ್ಪಿಗೆ ಸಿಕ್ಕಿಲ್ಲ. ಮೊದಲು ರೈಲು ಬೋಗಿಗಳು ಬಂದು ಅವುಗಳ ಜೋಡಣೆ ಬಳಿಕ ಮುಂದಿನ ಕಾರ್ಯತಂತ್ರದ ಕುರಿತು ಬಿಎಂಆರ್‌ಸಿಎಲ್ ತೀರ್ಮಾನ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+