Namma Metro: ಪೂರ್ಣಗೊಳ್ಳುವ ಹಂತದಲ್ಲಿ 39.4 ಕಿಮೀ ನೇರಳೆ ಮಾರ್ಗ- ಎಷ್ಟು ನಿಲ್ದಾಣ? ಅಂಕಿಅಂಶ ತಿಳಿಯಿರಿ
ಬೆಂಗಳೂರು, ಏಪ್ರಿಲ್ 26: ಬೆಂಗಳೂರು ಮೆಟ್ರೋದ ನೇರಳೆ ಮಾರ್ಗವು ಪೂರ್ಣಗೊಳ್ಳುವ ಹಂತದಲ್ಲಿದೆ. ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರಂ ನಿಲ್ದಾಣಗಳ ನಡುವಿನ ನಿರ್ಣಾಯಕ 2.5 ಕಿಮೀ ಸಂಪರ್ಕವನ್ನು ಹೊರತುಪಡಿಸಿ ವೈಟ್‌ಫೀಲ್ಡ್ ಅನ್ನು ನಗರದ ಉಳಿದ ಭಾಗಗಳಿಗೆ ಸಂಪರ್ಕಿಸುವ ಅವಕಾಶ ಕಲ್ಪಿಸಲಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಕಾರ, ಮಿಸ್ಸಿಂಗ್ ಲಿಂಕ್ ಎರಡು ತಿಂಗಳೊಳಗೆ ಸಿದ್ಧವಾಗಲಿದೆ. ಜೂನ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಒಮ್ಮೆ ಈ ಲಿಂಕ್ ಕಾರ್ಯಾರಂಭಗೊಂಡರೆ, ಮೆಟ್ರೋ ಪ್ರಯಾಣಿಕರ ಸಂಖ್ಯೆ 3.5 ಲಕ್ಷ ಹೆಚ್ಚಾಗುವ ನಿರೀಕ್ಷೆಯಿದೆ ಎಂದು 'ಟೈಮ್ಸ್ ನೌ' ವರದಿ ಮಾಡಿದೆ.

ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ ಚವ್ಹಾಣ ಅವರು 'ಟೈಮ್ಸ್ ನೌ' ಜೊತೆ ಮಾತನಾಡಿ, ಬೈಯಪ್ಪನಹಳ್ಳಿ-ಕೆಆರ್ ಪುರಂ ಸಂಪರ್ಕ ಕಾಮಗಾರಿ ವಿಳಂಬಕ್ಕೆ ಕೆಲವು ಮಹತ್ವದ ಕಾರಣಗಳಿವೆ. ಎರಡು ನಿಲ್ದಾಣಗಳ ನಡುವಿನ ಅಭಿವೃದ್ಧಿ ಕಾಮಗಾರಿಗಳು, ರೈಲು ಮಾರ್ಗದ ಕ್ರಾಸಿಂಗ್ ಸಮಸ್ಯೆಗಳು, ಕೆಆರ್ ಪುರಂನ ಬಸ್ ಡಿಪೋ ಸುಧಾರಣೆ ಕಾಮಗಾರಿ, ಮತ್ತು ಇತರ ನಾಗರಿಕ ಏಜೆನ್ಸಿಗಳಿಂದ ದಟ್ಟಣೆಯ ಯೋಜನೆಗಳು. ಇದರ ವಿಳಂಬಕ್ಕೆ ಕಾರವಾಗಿದೆ' ಎಂದು ಅವರು ಹೇಳಿದ್ದಾರೆ.
ಈ ಎರಡೂ ನಿಲ್ದಾಣಗಳ ಲಿಂಕ್ ಅನ್ನು ಪೂರ್ಣಗೊಳಿಸುವ ಹೆಚ್ಚಿನ ಕೆಲಸಗಳು ಪೂರ್ಣಗೊಂಡಿದ್ದರೂ, ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರು (ಸಿಎಂಆರ್ಎಸ್) ಇದನ್ನು ಇನ್ನೂ ಪರೀಕ್ಷಿಸಬೇಕಾಗಿದೆ. ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡ ನಂತರ, ಬೈಯಪ್ಪನಹಳ್ಳಿ-ಕೆಆರ್ ಪುರಂ ಸಂಪರ್ಕವು ಸಾರ್ವಜನಿಕ ಬಳಕೆಗೆ ಸಿದ್ಧವಾಗಲಿದೆ ಎಂದು ವರದಿಯಾಗಿದೆ.
69.66 ಕಿಮೀ ಕಾರ್ಯಾಚರಣೆಯ ಬೆಂಗಳೂರು ಮೆಟ್ರೋ ನೆಟ್‌ವರ್ಕ್ 63 ನಿಲ್ದಾಣಗಳನ್ನು ಹೊಂದಿದೆ. ಇದು ಈಗ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲವನ್ನು ಹೊಂದಿದೆ.
ಪೂರ್ವ-ಪಶ್ಚಿಮ ಕಾರಿಡಾರ್ 39.34 ಕಿಮೀ ಮತ್ತು ಉತ್ತರ-ದಕ್ಷಿಣ ಕಾರಿಡಾರ್ 30.32 ಕಿಮೀ ಎರಡು ಮುಖ್ಯ ಕಾರಿಡಾರ್‌ಗಳಾಗಿವೆ. ಇದು ಸ್ಟ್ಯಾಂಡರ್ಡ್ ಗೇಜ್‌ನಲ್ಲಿ 750V DC ಥರ್ಡ್ ರೈಲ್ ಟ್ರಾಕ್ಷನ್‌ನೊಂದಿಗೆ ಕಾರ್ಯಾರಂಭ ಮಾಡಿದ ಭಾರತದ ಮೊದಲ ಮೆಟ್ರೋ ರೈಲು ಯೋಜನೆಯಾಗಿದೆ.
ವೈಟ್‌ಫೀಲ್ಡ್ ಹಲವಾರು ಟೆಕ್ ಪಾರ್ಕ್‌ಗಳಿಗೆ ಜಾಗಗಳನ್ನು ಒದಗಿಸಿದೆ. ಇನ್ಫೋಸಿಸ್, ವಿಪ್ರೋ ಮತ್ತು ಐಬಿಎಂ ಸೇರಿದಂತೆ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಕಾರ್ಪೊರೇಟ್ ಕಚೇರಿಗಳಿಗೆ ನೆಲೆಯಾಗಿದೆ. ಪೀಕ್ ಅವರ್ ನಲ್ಲಿ ವೈಟ್ ಫೀಲ್ಡ್ ಸುತ್ತಮುತ್ತಲಿನ ರಸ್ತೆಗಳು ಅಸ್ತವ್ಯಸ್ತವಾಗಿರುತ್ತವೆ. ಸಂಪೂರ್ಣ ಪರ್ಪಲ್ ಲೈನ್ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರೊಂದಿಗೆ ಇಲ್ಲಿನ ಟ್ರಾಪಿಕ್ ಪರಿಸ್ಥಿತಿಯು ಬದಲಾಗುವ ನಿರೀಕ್ಷೆಯಿದೆ.












Click it and Unblock the Notifications