Namma Metro Update: ಇಂದಿನಿಂದ ಪ್ರತಿ 3 ನಿಮಿಷಕ್ಕೊಂದು ಹೆಚ್ಚುವರಿ ರೈಲು ಸಂಚಾರ ಶುರು, ಎಲ್ಲೆಲ್ಲಿ? ತಿಳಿಯಿರಿ
ಬೆಂಗಳೂರು, ಫೆಬ್ರವರಿ 26: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ದಟ್ಟಣೆಯಲ್ಲಿ ಸಿಲುಕಿಕೊಳ್ಳುವುದು, ಹೆಚ್ಚು ಹೊತ್ತು ಮೆಟ್ರೋ ರೈಲಿಗಾಗಿ ಕಾಯುವ ಸ್ಥಿತಿಗೆ ಇಂದಿನಿಂದ ಮುಕ್ತಿ ದೊರೆಯಲಿದೆ. ಇಂದಿನಿಂದ ನಮ್ಮ ಮೆಟ್ರೋ 3 ನಿಮಿಗಳಿಗೊಂದು ಹೆಚ್ಚುವರಿ ಮೆಟ್ರೋ ರೈಲಗಳನ್ನು ಓಡಿಸಲಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL), ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Namma Metro Purple Line)ಪೀಕ್ ಹವರ್‌ನಲ್ಲಿ ಬೆಳಗ್ಗೆ ಮತ್ತು ಸಂಜೆ ಹೊತ್ತು ಹೆಚ್ಚುವರಿ ರೈಲು ಓಡಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶುಕ್ರವಾರವಷ್ಟೇ ತಿಳಿಸಿತ್ತು.

ಎರಡು ಹಾಲಿ ಮಾರ್ಗಗಳ ಪೈಕಿ ನೇರಳೆ (Namma Metro Purple Line) ಮಾರ್ಗದಲ್ಲಿ ಈ ಹೆಚ್ಚವರಿ ರೈಲುಗಳು ಹೆಚ್ಚು ಜನರು ಓಡಾಡುವ (ಪೀಕ್ ಹವರ್‌ನಲ್ಲಿ) ವೇಳೆ ಪ್ರತಿ ಮೂರು ನಿಮಿಷಕ್ಕೆ ಒಂದರಂತೆ ರೈಲುಗಳು ಆವರ್ತನೆ ಆಗಲಿವೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ರೈಲು ಸಂಚಾರದ ಸಮಯದ ಮಾಹಿತಿ
ನೇರಳೆ ಮಾರ್ಗ ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದಿಂದ ಗುರಡಾಚಾರಪಾಳ್ಯ ನಿಲ್ದಾಣದವರೆಗೆ ಬೆಳಗ್ಗೆ 8.45 ಗಂಟೆಯಿಂದ 10.20 (95 ನಿಮಿಷ) ಪ್ರತಿ ಮೂರು ನಿಮಿಷಕ್ಕೆ ಒಂದು ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಈ ಮೂಲಕ ಮಾರ್ಗ ಬದಲಾವಣೆಯ ಜಂಕ್ಷನ್ ಆಗಿರುವ ಮೆಜೆಸ್ಟಿಕ್ ನಿಲ್ದಾಣಕ್ಕೆ ಬರುವ ಸಹಸ್ರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಇದೇ ನೇರಳೆ ಮಾರ್ಗದ ನಿಲ್ದಾಣಗಳಾದ ಟ್ರಿನಿಟಿ, ಎಂಜಿ ರಸ್ತೆ, ಇಂದಿರಾನಗರ, ಬೆನ್ನಿಗಾನಹಳ್ಳಿ, ಕೃಷ್ಣರಾಜ ಪುರ (ಕೆಆರ್ ಪುರ) ಹಾಗೂ ಗರುಡಾಚಾರಪಾಳ್ಯ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ಪ್ರಯಾಣಿಕರ ಅಗತ್ಯತೆ ನೋಡಿಕೊಂಡು ಹೆಚ್ಚುವರಿ ಮೆಟ್ರೋ ರೈಲು ಓಡಿಸಲು ನಿರ್ಧರಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಆರ್‌ಸಿಎಲ್ ಈ ಹೆಚ್ಚುವರಿ ರೈಲು ಕಾರ್ಯಾಚರಣೆ ನಿರ್ಧಾರದಿಂದ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಹೋಗುವ ಸಾರ್ವಜನಿಕರು, ಐಟಿ ಉದ್ಯೋಗಿಗಳಿಗೆ ವರದಾನವಾಗಲಿದೆ. ಸಮಯವು ಉಳಿತಾಯವಾಗಲಿದೆ.












Click it and Unblock the Notifications