• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ಸಂಚಾರದ ಅವಧಿ ವಿಸ್ತರಣೆ

|
Google Oneindia Kannada News

ಬೆಂಗಳೂರು, ನವೆಂಬರ್ 16; ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ನವೆಂಬರ್ 18ರಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಮಂಗಳವಾರ ಬಿಎಂಆರ್‌ಸಿಎಲ್ ಈ ಕುರಿತು ಆದೇಶ ಹೊರಡಿಸಿದೆ. ಕರ್ನಾಟಕ ಸರ್ಕಾರ ನವೆಂಬರ್ 6ರಂದು ರಾತ್ರಿ ಕರ್ಫ್ಯೂವನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಆದ್ದರಿಂದ ಮೆಟ್ರೋ ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದೆ.

ನಮ್ಮ ಮೆಟ್ರೋ 3ನೇ ಹಂತದ ತಯಾರಿ ಶುರುನಮ್ಮ ಮೆಟ್ರೋ 3ನೇ ಹಂತದ ತಯಾರಿ ಶುರು

ನಮ್ಮ ಮೆಟ್ರೋ ರೈಲುಗಳ ಕಾರ್ಯಾಚರಣೆ ಅವಧಿ ನವೆಂಬರ್ 18ರ ಗುರುವಾರದಿಂದ ಬದಲಾಗಲಿದೆ. ಮೆಟ್ರೋ ರೈಲುಗಳ ಸಂಚಾರದ ಅವಧಿಯನ್ನು ಹೆಚ್ಚಿಸಬೇಕು ಎಂದು ಜನರು ಒತ್ತಾಯಿಸಿದ್ದರು.

ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?ನಮ್ಮ ಮೆಟ್ರೋ ಸೇವೆ ಶುರುವಾಗಿ 10 ವರ್ಷ: ರೈಲಿನಲ್ಲಿ ಪ್ರಯಾಣಿಸಿದವರೆಷ್ಟು?

ವೇಳಾಪಟ್ಟಿ

* ವಾರದ ದಿನಗಳಲ್ಲಿ (ಸೋಮವಾರದಿಂದ ಶನಿವಾರ) ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಅಂದರೆ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿಯಿಂದ ಮೊದಲ ರೈಲು ಬೆಳಗ್ಗೆ 6 ಗಂಟೆಗೆ ಆರಂಭವಾಗಲಿದೆ.

'ಊರ್ಜಾ' ಬಳಿಕ ಮೆಟ್ರೋ ಸುರಂಗ ಕೊರೆದು ಹೊರಬಂದ 'ವಿಂದ್ಯಾ' 'ಊರ್ಜಾ' ಬಳಿಕ ಮೆಟ್ರೋ ಸುರಂಗ ಕೊರೆದು ಹೊರಬಂದ 'ವಿಂದ್ಯಾ'

* ಭಾನುವಾರದ ದಿನ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಮೊದಲ ರೈಲು ಬೆಳಗ್ಗೆ 7 ಗಂಟೆಗೆ ಹೊರಡಲಿದೆ.

* ಎಲ್ಲಾ ದಿನಗಳಲ್ಲಿ ಕೊನೆಯ ರೈಲು ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ರಾತ್ರಿ 23:00 (11 ಗಂಟೆಗೆ) ಹೊರಡಲಿದೆ.

* ಎಲ್ಲಾ ದಿನಗಳಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ಮೆಟ್ರೋ ರೈಲು ರಾತ್ರಿ 11.30ಕ್ಕೆ ಹೊರಡಲಿದೆ.

ಪ್ರಸ್ತುತ ನಮ್ಮ ಮೆಟ್ರೋ ರೈಲುಗಳು ಮುಂಜಾನೆ 6 ರಿಂದ ರಾತ್ರಿ 10ರ ತನಕ ಸಂಚಾರ ನಡೆಸುತ್ತಿವೆ. ಕೋವಿಡ್ ಪರಿಸ್ಥಿತಿಗೂ ಮೊದಲು 11 ಗಂಟೆಗೆ ತನಕ ಮೆಟ್ರೋ ಸಂಚಾರವಿತ್ತು. ಆದರೆ ಕರ್ನಾಟಕ ಸರ್ಕಾರ ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ರಾತ್ರಿ ಕರ್ಫ್ಯೂವನ್ನು ಜಾರಿಗೊಳಿಸಿದ ಬಳಿಕ ಸಮಯ ಕಡಿತಗೊಳಿಸಲಾಗಿತ್ತು.

ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ತನಕ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು ನವೆಂಬರ್ 6ರಂದು ವಾಪಸ್ ಪಡೆದು ಆದೇಶ ಹೊರಡಿಸಿತ್ತು. ಆದ್ದರಿಂದ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

   Bangalore Weather Forecast - ಇನ್ನೂ ಮೂರು ದಿನ ಮಳೆ | Oneindia Kannada
   English summary
   BMRCL announced that Namma Metro train operational timings extended from November 18, 2021. First train departure will be at 6 am and Last train departure from terminal stations at 11pm.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X