Namma Metro: ಸರಕು ಸಾಗಣೆ ಸೇವೆ ಆರಂಭಿಸಲಿದೆ ನಮ್ಮ ಮೆಟ್ರೋ

ಬೆಂಗಳೂರು, ಮಾರ್ಚ್‌ 20: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎ೦ಆರ್‌ಸಿಎಲ್) ಪ್ರಯಾಣ ದರವನ್ನು ಏರಿಕೆ ಮಾಡಿದೆ. ಈಗ ಆದಾಯ ಸಂಗ್ರಹಕ್ಕೆ ಇತರ ಮಾರ್ಗದತ್ತೆ ಗಮನಹರಿಸಿದೆ. ಟಿಕೆಟ್ ರಹಿತ ಆದಾಯ ಸಂಗ್ರಹ ಮಾಡಬೇಕು ಎಂಬ ಸಲಹೆಯನ್ನು ಪರಿಗಣಿಸಿರುವ ಮೆಟ್ರೋ ದೆಹಲಿ ಮಾದರಿಯಲ್ಲಿ ನಾನ್ ಪೀಕ್ ಅವರ್‌ನಲ್ಲಿ ಹೊಸ ಸೇವೆಯನ್ನು ಪರಿಚಯಿಸಲು ಮುಂದಾಗಿದೆ.

ನಿರ್ವಹಣಾ ವೆಚ್ಚದ ನೆಪ ಹೇಳಿದ್ದ ನಮ್ಮ ಮೆಟ್ರೋ 2017ರ ಬಳಿಕ ಮೊದಲ ಬಾರಿಗೆ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಫೆಬ್ರವರಿ 9ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ದರ ಏರಿಕೆಯ ಬಳಿಕ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಸಹ ಕುಸಿತವಾಗಿದೆ. ಈಗ ಮೆಟ್ರೋ ಪ್ರಯಾಣ ದರ ಹೊರತುಪಡಿಸಿ ಇತರ ಆದಾಯ ಸಂಗ್ರಹದತ್ತ ಗಮನ ಹರಿಸಿದೆ.

Namma Metro To Start Cargo Transport During Non Peak Hours

ಖಾಸಗಿ ಸಂಸ್ಥೆ ಜೊತೆ ಒಪ್ಪಂದ: ನಾನ್ ಪೀಕ್ ಅವರ್‌ನಲ್ಲಿ ಸರಕು ಸಾಗಾಟವನ್ನು ನಮ್ಮ ಮೆಟ್ರೋ ನಡೆಸಲಿದೆ. ಇದಕ್ಕಾಗಿ ಬ್ಲೂ ಡಾರ್ಟ್‌ ಕೋರಿಯರ್ ಸಂಸ್ಥೆ ಜೊತೆಗೆ ಬಿಎಂಆರ್‌ಸಿಎಲ್ ಕೆಲವು ದಿನಗಳ ಹಿಂದೆ ಒಪ್ಪಂದಕ್ಕೆ ಸಹಿ ಹಾಕಿದೆ. ದೆಹಲಿ ಮೆಟ್ರೋ ಈಗಾಗಲೇ ನಾನ್ ಪೀಕ್ ಅವರ್‌ನಲ್ಲಿ ಸರಕು ಸಾಗಣೆ ಮಾಡುವ ಮೂಲಕ ಆದಾಯವನ್ನು ಪಡೆಯುತ್ತಿದೆ. ಇದೇ ಮಾದರಿಯಲ್ಲಿ ಈಗ ನಮ್ಮ ಮೆಟ್ರೋ ಸಾಗುತ್ತಿದೆ.

ಬಿಎಂಆರ್‌ಸಿಎಲ್ ಕೆಲವೇ ದಿನಗಳಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ಜೊತೆ ನಮ್ಮ ಮೆಟ್ರೋದಲ್ಲಿ ಸರಕು ಸಾಗಣೆ ಮಾಡುವ ಕುರಿತು ಚರ್ಚೆಯನ್ನು ನಡೆಸಲಿದೆ. ಬೈಯಪ್ಪನಹಳ್ಳಿ ನಿಲ್ದಾಣವನ್ನು ಪ್ರಮುಖ ಪಾಯಿಂಟ್ ಆಗಿ ಮಾಡಿಕೊಂಡು ಸರಕು ಸಾಗಣೆ ಸೇವೆ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ನಮ್ಮ ಮೆಟ್ರೋ ಸರಕು ಸಾಗಣೆ ಸೇವೆಯಿಂದ ಬಿಎಂಆರ್‌ಸಿಎಲ್ ಮತ್ತು ಖಾಸಗಿ ಕಂಪನಿಗಳಿಗೆ ಲಾಭವಾಗಲಿದೆ. ಕೆಲವೇ ಗಂಟೆಗಳಲ್ಲಿ ಮೆಟ್ರೋದಲ್ಲಿ ನಗರದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆ ಮಾಡಬಹುದಾಗಿದ್ದು, ಕಂಪನಿಗಳ ವೆಚ್ಚವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Namma Metro To Start Cargo Transport During Non Peak Hours

ಮುಂದಿನ ದಿನಗಳಲ್ಲಿ ಖಾಸಗಿ ಸರಕು ಸಾಗಣೆ ಮಾಡುವ ಕಂಪನಿಗಳ ಸಭೆ ಕರೆದು ವಿವರವಾದ ಅಂತಿಮ ಯೋಜನೆಯನ್ನು ರೂಪಿಸಲಾಗುತ್ತದೆ. ದೆಹಲಿಯಲ್ಲಿ ಕೆಲವು ರೈಲುಗಳ ಕೊನೆಯ ಬೋಗಿಯನ್ನು ಸರಕು ಸಾಗಣೆ ಮಾಡಲು ಮೀಸಲಿಡಲಾಗಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಇರುವ ಅವಧಿಯಲ್ಲಿ ಈ ಬೋಗಿಗಳಲ್ಲಿ ಸರಕುಗಳನ್ನು ತುಂಬಿಕೊಂಡು ಸಾಗಣೆ ಮಾಡಲಾಗುತ್ತದೆ.

ಈ ಸೇವೆಯಿಂದ ರಸ್ತೆ ಮೇಲಿನ ವಾಹನ ದಟ್ಟಣೆ ಕಡಿಮೆಯಾಗಲಿದೆ. ಬಿಎಂಆರ್‌ಸಿಎಲ್‌ಗೆ ಟಿಕೆಟ್ ರಹಿತ ಆದಾಯ ಸಂಗ್ರಹವಾಗಲಿದೆ. ಖಾಸಗಿ ಕಂಪನಿಗಳಿಗೆ ಹಣ ಉಳಿತಾಯವಾಗಲಿದೆ. ಆದ್ದರಿಂದ ಈ ಸೇವೆಗೆ ಬೆಂಗಳೂರಿನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.

ಸರಕು ಸಾಗಣೆಯನ್ನು ಮೊದಲು ಬೆಳಗ್ಗೆ 8 ಗಂಟೆ ತನಕ, ಬಳಿಕ 12 ರಿಂದ 4 ಗಂಟೆ ತನಕ ಮತ್ತು ರಾತ್ರಿ 9 ರಿಂದ ನಡೆಸಲು ಯೋಜನೆ ರೂಪಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿಸು ಅವಧಿಯಲ್ಲಿ ಎಲ್ಲಾ ಬೋಗಿಯನ್ನು ಪ್ರಯಾಣಿಕರಿಗೆ ಮೀಸಲಿಡಲಾಗುತ್ತದೆ. ಸರಕು ಸಾಗಣೆ ಅವಧಿಯಲ್ಲಿ ನಮ್ಮ ಮೆಟ್ರೋ ಪ್ರಯಾಣ ದರದಲ್ಲಿ ಶೇ 5ರಷ್ಟು ರಿಯಾಯಿತಿ ನೀಡಲು ಸಹ ಚಿಂತನೆ ನಡೆಸಿದೆ.

ಬಿಎಂಆರ್‌ಸಿಎಲ್ ಪ್ರಯಾಣಿಕರ ಸೇವೆ ನೀಡಲು ರೈಲುಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಈಗ ನಮ್ಮ ಮೆಟ್ರೋ ರೈಲುಗಳಲ್ಲಿ ಸರಕು ಸಾಗಣೆಯ ಚಿಂತನೆಯನ್ನು ನಡೆಸಿದೆ. 76 ಕಿ. ಮೀ. ವ್ಯಾಪ್ತಿಯನ್ನು ಸದ್ಯ ನಮ್ಮ ಮೆಟ್ರೋ ಹೊಂದಿದ್ದು, 57 ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಸರಕು ಸಾಗಣೆ ಹೊರತಾಗಿ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಜಾಹೀರಾತು ನೀಡುವ ಮೂಲಕವೂ ಮೆಟ್ರೋ ಆದಾಯವನ್ನು ಗಳಿಸುತ್ತಿದೆ.

ಆದಾಯ ಸಂಗ್ರಹಕ್ಕಾಗಿ ಬಿಎಂಆರ್‌ಸಿಎಲ್‌ಗೆ ಸೇರಿದ ಒಟ್ಟು 1.66 ಎಕರೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಯನ್ನು ನಡೆಸಲು ಅನುಮತಿ ನೀಡಲು ತೀರ್ಮಾನ ಮಾಡಲಿದೆ. ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಕಛೇರಿ, ಹೋಟೆಲ್ ತೆರೆಯಲು ಸಹ ಅನುಮತಿ ನೀಡುವ ಕುರಿತು ಚರ್ಚೆಗಳು ಸಾಗಿವೆ.

ಬೆಂಗಳೂರು ದೇಶದಲ್ಲಿಯೇ ಅತಿ ಉದ್ದದ ಮೆಟ್ರೋ ಜಾಲ ಹೊಂದಿರುವ 2 ನಗರವಾಗಿದೆ. ನಮ್ಮ ಮೆಟ್ರೋ ಹೆಸರಿನಲ್ಲಿ ನಗರದಲ್ಲಿ ರೈಲುಗಳು ಸದ್ಯ ನೇರಲೆ, ಹಸಿರು ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿವೆ. 77 ಕಿ. ಮೀ. ಉದ್ದದ ಜಾಲವಿದ್ದು, 69 ನಿಲ್ದಾಣಗಳಿವೆ. ಇನ್ನೂ 102 ಕಿ. ಮೀ. ಮಾರ್ಗ ನಿರ್ಮಾಣ ಕಾರ್ಯ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+