Namma metro: ಶೀಘ್ರದಲ್ಲೇ ಮೆಟ್ರೋ ನಿಲ್ದಾಣಕ್ಕೆ ಹೋಗಲು 2 ಕಿಲೋ ಮೀಟರ್ ಒಳಗೆ ಸಾರಿಗೆ ವ್ಯವಸ್ಥೆ

ಮೆಟ್ರೋ ನಿಲ್ದಾಣ ನಿಮ್ಮ ಏರಿಯಾದಲ್ಲೇ ಇದ್ದರು ನಡೆಯಲು ದೂರ, ಬಸ್‌ಗೆ ಹೋಗಿ ಮೆಟ್ರೋ ಹತ್ತಲು ಹತ್ತಿರ ಎನ್ನುವವರು ಇನ್ನು ಆರು ನಿಮಿಷದಲ್ಲೇ ಮೆಟ್ರೋ ನಿಲ್ದಾಣಕ್ಕೆ ತಲುಪಬಹುದು ಹೇಗೆ ಅಂತಿರಾ ಮುಂದೆ ಓದಿ.

ಬೆಂಗಳೂರು, ಫೆಬ್ರವರಿ. 02: ನಮ್ಮ ಮೆಟ್ರೋ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇದರಲ್ಲಿ ಫೀಡರ್ ಸಾರಿಗೆ ವ್ಯವಸ್ಥೆ ಕೂಡ ಒಂದು.

ಹೌದು, ಮೆಟ್ರೋ ಈಗಾಗಲೇ ಸಿಲಿಕಾನ್ ಸಿಟಿಯ ನರನಾಡಿ ಎನ್ನುವಂತಾಗಿದೆ. ಹೆಚ್ಚಿನ ಜನರು ಸಂಚಾರಕ್ಕೆ ಮೆಟ್ರೋ ಸೇವೆಯನ್ನು ಬಳಸುತ್ತಿದ್ದು, ಜನರಿಗೆ ಮತ್ತಷ್ಟು ಉಪಯೋಗವಾಗಲಿ ಎಂಬ ಕಾರಣಕ್ಕೆ ಬಿಎಂಆರ್‌ಸಿಎಲ್ , ನಗರ ಭೂಸಾರಿಗೆ ನಿರ್ದೇಶನಾಲಯದ ಜೊತೆಗೆ ಮಾತುಕತೆ ನಡೆಸಿ ಈ ಯೋಜನೆಯನ್ನು ಜಾರಿಗೊಳಿಸಲು ಚಿಂತಿಸಿದೆ.

ಈ ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ) ಯೋಜನೆಯಲ್ಲಿ ಮೆಟ್ರೋ ನಿಲ್ದಾಣದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬಸ್ ಸೇವೆ ನೀಡಲಾಗುತ್ತದೆ. ಇದರಿಂದಾಗಿ ಮೆಟ್ರೋ ನಿಲ್ದಾಣಕ್ಕೆ ಆರು ನಿಮಿಷಗಳಲ್ಲಿ ತಲುಪಬಹುದಾಗಿದೆ. ಈ ಯೋಜನೆಯನ್ನು ಆರು ಮೆಟ್ರೋ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ.

Namma Metro To Be Introduce Feeder Transport System For Metro Train Users

ಹಸಿರು ಮಾರ್ಗದ ರೇಷ್ಮೆ ಕೇಂದ್ರ ಮೆಟ್ರೋ ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಆರು ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗಿದೆ. ಈ ನಿಲ್ದಾಣಗಳಲ್ಲಿ ಜನರ ಪ್ರತಿಕ್ರಿಯೆಯನ್ನು ಗಮನಿಸಿ ಉಳಿದ ಮೆಟ್ರೋ ನಿಲ್ದಾಣಗಳಿಗೆ ಸೇವೆಯನ್ನು ವಿಸ್ತರಿಸಲಾಗುತ್ತದೆ.

ಮೆಟ್ರೋ ರೈಲು ನೀತಿ- 2017ರ ಪ್ರಕಾರ ರಾಜ್ಯ ಸರ್ಕಾರ ಸಂಚಾರ ಆಧಾರಿತ ಅಭಿವೃದ್ಧಿ (ಟಿಒಡಿ) ನೀತಿ, ಸಮಗ್ರ ಸಾರಿಗೆ ಯೋಜನೆ ಹೊಂದುವುದು ಕಡ್ಡಾಯವಾಗಿದೆ. ಟಿಒಡಿ ನೀತಿಗೆ 2022ರ ನವೆಂಬರ್ 17 ರಂದು ಸರ್ಕಾರ ಅನುಮೋದನೆ ನೀಡಿದೆ.

Namma Metro To Be Introduce Feeder Transport System For Metro Train Users

ಪ್ರಸ್ತುತ ಮೆಟ್ರೋ ಫಿಡರ್ ಬಸ್‌ಗಳು ಬಿಎಂಟಿಸಿ ಬಸ್‌ ನಿಲ್ದಾಣಗಳಿಂದ ಮೆಟ್ರೋ ನಿಲ್ದಾಣಗಳವರೆಗೆ ಸಾರಿಗೆ ಸೇವೆ ನೀಡುತ್ತಿವೆ. ಈ ಸೇವೆಗಾಗಿ ಬಿಎಂಟಿಸಿ 95 ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಿದೆ. ಆದರೆ, ಇದರಲ್ಲಿ ಎಲ್ಲ ಬಸ್‌ಗಳು ಸಾರ್ವಜನಿಕರ ಸೇವೆಗೆ ಬಳಕೆಯಾಗಿಲ್ಲ. ಆದಷ್ಟು ಶೀಘ್ರವೇ ಎಲ್ಲ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿವೆ.

ಜಾರಿಯಲ್ಲಿರುವ ಮೆಟ್ರೋ ಫೀಡರ್ ಬಸ್‌ ಸೇವೆ ಸಣ್ಣ ರಸ್ತೆಗಳಲ್ಲಿ ಅಥವಾ ಬಡಾವಣೆಗಳ ಒಳಗೆ ಸಂಚರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅಲ್ಲಿಗೂ ಸೇವೆಯನ್ನು ವಿಸ್ತರಿಸುವ ಸಲುವಾಗಿ ಬಿಎಂಆರ್‌ಸಿಎಲ್ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+