Namma Metro: ಒಂದೇ ವರ್ಷದಲ್ಲಿ 2 ಹೊಸ ಮೆಟ್ರೋ ಮಾರ್ಗಗಳು ಲೋಕಾರ್ಪಣೆ: BMRCL

ಬೆಂಗಳೂರು, ಏಪ್ರಿಲ್ 15: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವರ್ಷದಿಂದ ವರ್ಷದಿಂದ ವರ್ಷಕ್ಕೆ ವಿಸ್ತರಣೆ ಆಗುತ್ತಿದೆ. ಮೆಟ್ರೋ ಸಾರಿಗೆಯನ್ನು ಹೆಚ್ಚಿನ ಪ್ರಮಾಣದ ಜನರು ಅವಲಂಬಿಸಿದ್ದಾರೆ. ಹೊಸ ಮಾರ್ಗದ ಯೋಜನೆಗಳು ಆರಂಭವಾಗಲಿವೆ. ಸದ್ಯ ಎಲ್ಲ ಚಿತ್ತ ಮೆಟ್ರೋ ಹಳದಿ ಮಾರ್ಗದ ತೆರೆಯುವಿಕೆ ಮೇಲಿದೆ. ಇದರೊಂದಿಗೆ ಇನ್ನೊಂದು ಹೊಸ ಮಾರ್ಗವು ವಾಣಿಜ್ಯ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂಬ ಗುಡ್ ನ್ಯೂಸ್ ಸಿಕ್ಕಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ವತಿಯಿಂದ ನಗರದಲ್ಲಿ 'ಗುಲಾಬಿ ಮಾರ್ಗ' ಹಾಗೂ 'ನೀಲಿ ಮಾರ್ಗ' (ಎರಡು ಹಂತಗಳಲ್ಲಿ) ನಿರ್ಮಾಣ ಕಾರ್ಯ ನಡೆಯುತ್ತಿದೆ. ಗುಲಾಬಿ ಮಾರ್ಗದಲ್ಲಿ ಸುರಂಗ ಕೊರೆವ ಕೆಲಸ 96% ಮುಗಿದಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗೆ 18 ಕಿಲೋ ಮೀಟರ್‌ವರೆಗೆ 2ಎ ಹಂತದಲ್ಲಿ ನೀಲಿ ಮಾರ್ಗದ ಕಾಮಗಾರಿ ಭರದಿಂದ ಸಾಗಿದೆ.

Namma Metro These 2 New Lines To Be Operation in Next One Year BMRCL updates

ವೈಟ್‌ಫಿಲ್ಡ್ (ನೇರಳೆ ಮಾರ್ಗ), ಎಲೆಕ್ಟ್ರಾನಿಕ್ ಸಿಟಿ (ಹಳದಿ ಮಾರ್ಗ) ಬಿಟ್ಟರೆ, ಮಾರತ್ತಹಳ್ಳಿಯಂತಹ ಐಟಿ ಪ್ರದೇಶ ಸಂರ್ಪಕಿಸುವ ಮೆಟ್ರೋ ಮಾರ್ಗವೆಂದರೆ ಅದು ನೀಲಿ ಮಾರ್ಗ. ಈ ಮಾರ್ಗವು ಮುಂದಿನ ವರ್ಷ 2026 ರ ಜೂನ್ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಜನದಟ್ಟಣೆಯ ಹೊರ ವರ್ತುಲ ರಸ್ತೆಯ (ORR) ಪ್ರಮುಖ ಜನದಟ್ಟಣೆ ಪ್ರದೇಶ ಸಂಪರ್ಕಿಸುವ ನೀಲಿ ಮಾರ್ಗವು ಪ್ರಮುಖ ಐಟಿ ಕಾರಿಡಾರ್ ಗೆ ಸಾರಿಗೆ ಸೇವೆ ಒದಗಿಸಲಿದೆ ಎಂಬುದು ವಿಶೇಷ. ನಿತ್ಯ ಸಾವಿರಾರು ಪ್ರಯಾಣಿಕರಿಗೆ ಆಸರೆಯಾಗಲಿದೆ. ಇದನ್ನು ಬಿಟ್ಟರೆ ಆರಂಭವಾಗಬೇಕಾದ ಹಳದಿ ಮಾರ್ಗವು ಸಹ ಐಟಿ ಕಂಪನಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸಲಿದೆ.

Namma Metro These 2 New Lines To Be Operation in Next One Year BMRCL updates

ಸೆಂಟ್ರಲ್ ಸಿಲ್ಕ ಬೋರ್ಡ್‌ನಿಂದ ಕೆ.ಆರ್ ಪುರಂವರೆಗಿನ ನೀಲಿ ಮಾರ್ಗದ ಮೊದಲ ಹಂತವು 2026 ರ ಮಧ್ಯಭಾಗದಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ. ಆದರೆ ಸಣ್ಣ ಪುಟ್ಟ ವಿಳಂಬವಾಗಬಹುದು. ಇದರ ಹೊರತು ಹೆಚ್ಚಿನ ವಿಳಂಬ ಆಗದು ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. ಕೆ.ಆರ್.ಪುರಂನಿಂದ ದೇವನಹಳ್ಳಿ ಏರ್‌ಪೋರ್ಟ್‌ವರೆಗೆ ಎರಡನೇ ಹಂತದಲ್ಲಿ ನೀಲಿ ಮಾರ್ಗ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗವು ಫೆಬ್ರವರಿ ಬಳಿಕ ಮೇ ತಿಂಗಳಲ್ಲಿ ತೆರೆಯುವ ಗಡುವು ಪಡೆದಿತ್ತು. ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಸಾಗುವ 19.5 ಕಿಲೋ ಮೀಟರ್ ಉದ್ದದ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಹಳಿದ ಮಾರ್ಗವು ಜೂನ್ ಅಂತ್ಯಕ್ಕೆ ತೆರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Take a Poll

ರೈಲುಗಳ ಪೂರೈಕೆಯಲ್ಲಾಗುತ್ತಿರುವ ವಿಳಂಬ ಕಾರಣದಿಂದ ಈ ಮಾರ್ಗವು ತೆರೆಯುವುದು ಮೇಲಿಂದ ಮೇಲೆ ತಡವಾಗುತ್ತಿದೆ. ಇದೇ ಏಪ್ರಿಲ್ ಅಂತ್ಯಕ್ಕೆ ಚೀನಾ ನಿರ್ಮಿತ ಮೆಟ್ರೋ ರೈಲಿನ ಸೆಟ್ ವೊಂದು ಪಶ್ಚಿಮ ಬಂಗಾಳದಲ್ಲಿ ಸಂಪೂರ್ಣವಾಗಿ ತಯಾರಾಗಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಬರಬೇಕಿದೆ. ಈ ಡ್ರೈವರ್‌ಲೆಸ್ ಮೆಟ್ರೋ ಬಂದ ಬಳಿಕ ಮೆಟ್ರೋ ಲೋಕಾರ್ಪಣೆಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಈ ಮೂಲಕ ಒಂದೇ ವರ್ಷದಲ್ಲಿ ಎರಡು ಹೊಸ ಮಾರ್ಗಗಳು ಸಾರ್ವಜನಿಕರಿಗೆ ಮುಕ್ತವಾದಂತಾಗುತ್ತದೆ. 2025ರ ಜೂನ್ ಅಂತ್ಯಕ್ಕೆ ಹಳದಿ ಮಾರ್ಗ, ಮುಂದಿನ 2026 ಜೂನ್ ಹೊತ್ತಿಗೆ ನೀಲಿ ಮಾರ್ಗದ ಮೊದಲ ಹಂತ ಸಾರ್ವಜನಿಕ ಸೇವೆ ಅಣಿಯಾಗಲಿವೆ. 24 ತಿಂಗಳು ಆಸುಪಾಸಿನಲ್ಲಿ ಬೆಂಗಳೂರಿನ ಜನರು ಎರಡು ಮೆಟ್ರೋ ಮಾರ್ಗದಲ್ಲಿ ಓಡಾಡುವ ಅವಕಾಶ ಪಡೆಯಲಿದ್ದಾರೆ ಎನ್ನಬಹುದು.

BMRCL ಗುರಿಯಂತೆ ನೀಲಿ ಮಾರ್ಗವನ್ನು ಮುಂದಿನ ವರ್ಷ ಜೂನ್‌ ಅಥವಾ ಸೆಪ್ಟಂಬರ್‌ಒಳಗಾಗಿ ಪ್ರಾರಂಭಿಸಲು ಶ್ರಮಿಸಲಾಗುತ್ತಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಒಂದಷ್ಟು ರೈಲುಗಳ ಸೆಟ್ ನಮಗೆ ಸಿಗಲಿವೆ. ರೈಲು ಸರಬರಾಜು, ಕಾರ್ಮಿಕರ ಲಭ್ಯತೆ ನೋಡಿಕೊಂಡು ಮಾರ್ಗ ಆರಂಭಿಸಲಾಗುವುದು. ಸದ್ಯ ಕಾಮಗಾರಿಗೆ ವೇಗ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ನೀಲಿ ಮಾರ್ಗವು ಬೆಂಗಳೂರಿನ ದಕ್ಷಿಣ ಮತ್ತು ಪೂರ್ವ ಭಾಗದ ಪ್ರಯಾಣಿಕರ ಸಂಪರ್ಕಕ್ಕೆ ಪ್ರಮುಖ ಕೊಂಡಿಯ ರೀತಿ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನ ಮೆಟ್ರೋ ಜಾಲ ವಿಸ್ತರಣೆ ಭಾಗವಾಗಿ ಹಳದಿ ಮಾರ್ಗ ಮತ್ತು ನೀಲಿ ಮಾರ್ಗವು ಜಾಲವನ್ನು ಅಧಿಕೃತವಾಗಿ ಸೇರ್ಪಡೆಗೊಳ್ಳಲಿವೆ.

ನೀಲಿ ಮಾರ್ಗ ಹಂತ 1ರ ನಿಲ್ದಾಣಗಳು

ನಮ್ಮ ಮೆಟ್ರೋ ನೀಲಿ ಮಾರ್ಗದ ಮೊದಲ ಹಂತದಲ್ಲಿ ಸೆಂಟ್ರಲ್ ಸಿಲ್ಕ್‌ಬೋರ್ಡ್, ವೆಂಕಟಾಪುರ, ಆಗರ ಲೇಕ್, ಇಬ್ಬಲೂರು, ಬೆಳ್ಳಂದೂರು, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ, ಮಾರತ್ತಹಳ್ಳಿ, ಇಸ್ರೋ, ದೊಡ್ಡಾನೆಕ್ಕುಂದಿ, ಡಿಆರ್‌ಡಿಓ ಕಾಂಪ್ಲೆಕ್ಸ್, ಸರಸ್ವತಿ ನಗರ, ಕೆ.ಆರ್.ಪುರಂ.

ನೀಲಿ ಮಾರ್ಗ ಹಂತ 2ರ ನಿಲ್ದಾಣಗಳು

ಮಹದೇವಪುರ, ಕಸ್ತೂರಿನಗರ, ಹೊರಮಾವು, HRBR ಲೇಔಟ್ (ಹಿಂದಿನ ಬಾಬುಸಾಹೇಬ್ ಪಾಳ್ಯ), ಕಲ್ಯಾಣ್ ನಗರ, HBR ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೆಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ (ಹಿಂದಿನ ಕೋಗಿಲು ಕ್ರಾಸ್), ಬಾಗಲೂರು ಕ್ರಾಸ್ (ಹಿಂದಿನ ಬಾಗಲೂರು/ಪಿಆರ್ಆರ್ ಕ್ರಾಸ್), ಬೆಟ್ಟಹಲಸೂರು, ದೊಡ್ಡಜಾಲ (ಹಿಂದಿನ ಟ್ರಂಪೆಟ್ ಜಂಕ್ಷನ್), ವಿಮಾನ ನಿಲ್ದಾಣ ನಗರ (ಏರ್‌ಪೋಟ್‌ ಸಿಟಿ), KIAL ಟರ್ಮಿನಲ್‌ಗಳು (ಬೆಂಗಳೂರು ಏರ್‌ಪೋರ್ಟ್) ನಿಲ್ದಾಣಗಳು.

ನಮ್ಮ ಮೆಟ್ರೋ ಹಳದಿ ಮಾರ್ಗ ವಿಳಂಬವೇಕೆ..?

2024ರ ಫೆಬ್ರವರಿ ತಿಂಗಳಲ್ಲಿಯೇ ಹಳದಿ ಮೆಟ್ರೋ ಮಾರ್ಗ ತೆರೆಯಬೇಕಿತ್ತು. ಆದರೆ ರೈಲು ಪೂರೈಕೆಯಲ್ಲಿನ ವಿಳಂಬದಿಂದ ಕಾರ್ಯಾಚರಣೆ ತಡವಾಗಿದೆ. ಮೊನ್ನೆಯಷ್ಟೇ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇ ತಿಂಗಳಲ್ಲಿ ಮಾರ್ಗ ಉದ್ಘಾಟನೆ ಆಗುವ ವಿಶ್ವಾಸವಿದೆ. ಮಾರ್ಗದ ಎಲ್ಲ ವಿಧದ ಪರೀಕ್ಷೆಗಳು ಮುಗಿಸಿವೆ. ನಮ್ಮ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ಅನುಮೋದನೆ ಸಿಗುತ್ತಿದ್ದಂತೆ ಜನರಿಗೆ ಹಳದಿ ಮೆಟ್ರೋ ಮಾರ್ಗದ ಸೇವೆ ಲಭ್ಯವಾಗಲಿದೆ ಎಂದಿದ್ದಾರೆ.

ಸದ್ಯ ಬೆಂಗಳೂರಿಗೆ ಹಳದಿ ಮಾರ್ಗದ ಎರಡನೇ ಡ್ರೈವರ್‌ಲೆಸ್ ರೈಲು ಬಂದಿದ್ದು, ಪೂರ್ಣ ತಪಾಸಣೆಗೆ ಒಳಪಟ್ಟಿದೆ. ಇದೇ ತಿಂಗಳ ಏಪ್ರಿಲ್ ಅಂತ್ಯಕ್ಕೆ ಮೂರನೇ ರೈಲು ಬರಲಿದ್ದು, ಮೆಟ್ರೋ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ. ರೈಲು ಯಾವ ದಿನದಂದು ಆಗಮಿಸಲಿದೆ ಎಂಬ ಸಿಹಿ ಸುದ್ದಿ ಶೀಘ್ರವೇ ನೀಡಲಿದ್ದಾರೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+