Namma Metro: ಮತ್ತೆ ಮತ್ತೆ ಸುದ್ದಿಯಾಗುತ್ತಿದೆ ಮೆಟ್ರೋ, ನೇರಳೆ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ವ್ಯತ್ಯಯ!
ಬೆಂಗಳೂರು, ಮಾರ್ಚ್ 27: ಇತ್ತೀಚೆಗಷ್ಟೇ ತಾಂತ್ರಿಕ ದೋಷ ಕಾಣಿಸಿಕೊಂಡು ನೇರಳೆ ಮಾರ್ಗದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮೆಟ್ರೋ ಸ್ಥಗಿತಗೊಂಡಿತ್ತು. ಅದರ ಬೆನ್ನಲ್ಲೇ ಮತ್ತೆ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸುಮಾರು ಒಂದು ಗಂಟೆ ಸಮಯ ಸ್ಥಗಿತವಾಗಿತ್ತು ಎಂಬ ಮಾಹಿತಿಯನ್ನು ಬಿಎಂಆರ್‌ಸಿಎಲ್ ಹಂಚಿಕೊಂಡಿದೆ ಲಭ್ಯವಾಗಿದೆ.
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸಿಗ್ನಲ್ ವೈಫಲ್ಯದಿಂದಾಗಿ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವೆ ಸಂಚಾರ ವ್ಯತ್ಯಯ ಆಗಿತ್ತು. ಮಾರ್ಚ್ 27ರ ಬುಧವಾರ ಬೆಳಗ್ಗೆ 6.40 ರಿಂದ 7.40ರ ವರೆಗೂ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಮಾಹಿತಿ ಇದೆ.

ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವಿನ ಸಿಗ್ನಲ್ ವೈಫಲ್ಯದಿಂದಾಗಿ ನೇರಳೆ ಮಾರ್ಗದಲ್ಲಿ ಕೆಲವು ವಿಳಂಬವಾಗಲಿದೆ. ಈ ಪ್ರದೇಶದಲ್ಲಿ ರೈಲುಗಳು ನಿರ್ಬಂಧಿತ ವೇಗದಲ್ಲಿ ಚಲಿಸುತ್ತಿವೆ. ಸಿಗ್ನಲ್ ವೈಫಲ್ಯವನ್ನು ಸರಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಟ್ವೀಟ್ ಮಾಡಿತ್ತು.
ಇನ್ನು, ಕೆಲ ಗಂಟೆಗಳ ಬಳಿಕ ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಗರುಡಾಚಾರ್ ಪಾಳ್ಯ ನಡುವಿನ ಸಿಗ್ನಲ್ ದೋಷವನ್ನು ಸರಿಪಡಿಸಲಾಗಿದ್ದು, ರೈಲುಗಳು ಸಾಮಾನ್ಯ ವೇಗದಲ್ಲಿ ಚಲಿಸುತ್ತಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದೆ.
The signalling fault between Baiyappanahalli and Garudacharpalya on the purple line has been rectified and trains are running at their normal speed. For kind information.
— ನಮ್ಮ ಮೆಟ್ರೋ (@OfficialBMRCL) March 27, 2024
ಇನ್ನು, ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದ ಬಗ್ಗೆ ವರದಿಯಾಗಿತ್ತು. ಗುತ್ತಿಗೆದಾರರು ಹಾಗೂ ಮೆಟ್ರೋ ಅಧಿಕಾರಿಗಳ ಮಧ್ಯೆದ ತಿಕ್ಕಾಟಕ್ಕೆ ಜನರು ತೊಂದರೆ ಅನುಭವಿಸುವಂತಾಗಿತ್ತು. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇದ್ದ ವಾಹನಗಳ ಪಾರ್ಕಿಂಗ್ ಸ್ಥಳಕ್ಕೆ ಬೀಗ ಬಿದ್ದಿದ್ದ ಕಾರಣ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದರು.












Click it and Unblock the Notifications