Namma Metro: ಸೇವೆ ವ್ಯತ್ಯಯ ಬಗ್ಗೆ ತೇಜಸ್ವಿ ಸೂರ್ಯ ಕೊಟ್ಟ ಸಲಹೆಗಳೇನು?
ಬೆಂಗಳೂರು, ಫೆಬ್ರವರಿ 21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುಆವ ನಮ್ಮ ಮೆಟ್ರೋ (namma metro) ಮಾರ್ಗದಲ್ಲಿ ಆಗಾಗ ಅಡಚಣೆ ಉಂಟಾಗಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುತ್ತದೆ. ಮಂಗಳವಾರವು ನೇರಳೆ ಮಾರ್ಗದಲ್ಲಿ ತೊಂದರೆ ಆಗಿತ್ತು. ಇದೀಗ ಆಡಚಣೆ ತಡೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಪ್ರತಿಕ್ರಿಯಿಸಿ ಸಲಹೆ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಸೇವೆಗಳಲ್ಲಿ ಆಗಾಗ್ಗೆ ಎದುರಾಗುವ ಅಡಚಣೆಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರಿಗೆ ಅನಾನುಕೂಲತೆಯನ್ನು ತಪ್ಪಿಸಲು ಆಳವಾದ ಆತ್ಮಾವಲೋಕನವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಡಿಕೊಳ್ಳಬೇಕು ಎಂದರು.

ಮೆಟ್ರೋ ಕಾರ್ಯಾಚರಣೆ ಮೇಲೆ ಪರಿಣಾಮ
ಮೆಟ್ರೋ ಮಾರ್ಗಗಳ ನಿರ್ವಹಣೆ ವಿಚಾರದಲ್ಲಿ ಬಿಎಂಆರ್‌ಸಿಎಲ್ ಜವಾಬ್ದಾರಿಯುತ ಆಡಳಿತಾತ್ಮಕ ಸುಧಾರಣೆ ನಡೆಸಬೇಕಿದೆ. BMRCL ತಾಂತ್ರಿಕ ದೋಷಗಳು ಉಂಟಾಗಿದೆ ಎಂದು ಹೇಳಿದೆ. ಇದನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಕಾರಣಗಳು ನಿಜವಾದರೂ ಸಹ ಪ್ರತಿ ತಿಂಗಳು ಎಷ್ಟು ಬಾರಿ ಮೆಟ್ರೋ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಳಕೆದಾರರು ವಿಫಲರಾಗಿದ್ದಾರೆ.
ಇದು BMRCL ನಿರ್ವಹಣೆಯಿಂದ ಆಳವಾದ ಆತ್ಮಾವಲೋಕನಕ್ಕೆ ಕರೆ ನೀಡಿದಂತೆ. ಆದ್ದರಿಂದ ಇಡೀ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಮೆಟ್ರೋ ವ್ಯವಸ್ಥೆಯಲ್ಲಿ ಸಾಧ್ಯವಿರುವ ಸುಧಾರಣೆಗಳನ್ನು ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು.

ನಿರ್ವಹಣೆ ಸಮಸ್ಯೆ ಲುಘುವಾಗಿ ಪರಿಗಣಿಸಬಾರದು
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸುಧಾರಣೆ ಕ್ರಮಗಳನ್ನು ಪರಿಗಣಿಸಬೇಕು. ಈ ಕುರಿತು ಹಿಂದೆಯು ಕೆಲವು ಸುಧಾರಣೆಗಳನ್ನು ಮೆಟ್ರೋ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೆಂಗಳೂರಿನ ಜನರು ಮೆಟ್ರೋನ ಅಭೂತಪೂರ್ವ ಸೇವೆಗಳಿಗೆ ಕೃತಜ್ಞರಾಗಿರಬೇಕು. ಆದರೆ ಮೆಟ್ರೋ ನಿರ್ವಹಣೆ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಬಾರದು, ಇನ್ನು ಮುಂದೆ ಹೀಗಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.
ಫೆ.20ರ ಮಂಗಳವಾರ ಬೆಳಗ್ಗೆ ನಮ್ಮ ಮೆಟ್ರೋ ನೇರಳೆ ಮಾರ್ಗವು 'ತಾಂತ್ರಿಕ ಅಡಚಣೆ' ಉಂಟಾಗಿತ್ತು. ಇದರಿಂದ ಸಣ್ಣ ಪ್ರಮಾಣದ ಸಂಚಾರ ತೊಂದರೆ ಆಗಿತ್ತು. ಈ ಅಡಚರಣೆ ಹೆಚ್ಚು ಜನರು ಓಡಾಡುವ ಚಲ್ಲಘಟ್ಟ-ವೈಟ್‌ಫಿಲ್ಡ್ ವರೆಗಿನ ನೇರಳೆ ಮಾರ್ಗದಲ್ಲಿ ಸಂಭವಿಸಿತ್ತು.
ಇದು ತಾಂತ್ರಿಕ ದೋಷದ ಅಡಚಣೆಯು ಭಾಗಶಃ ಅವ್ಯವಸ್ಥೆಗೆ ಕಾರಣವಾಯಿತು. ಪ್ರಯಾಣಿಕರು ರೈಲುಗಳಿಗೆ ಕಾಯುವಂತಾಯಿತು. ಮೆಟ್ರೋ ರೈಲುಗಳು ನಿಧಾನವಾಗಿ ಚಲಿಸಿದವು. ಈ ಬಗ್ಗೆ BMRCL ಮಾಹಿತಿ ನೀಡಿತ್ತು.
ನಂತರ ಬೆಳಗ್ಗೆ 9.20ರ ನಂತರ ಬಿಎಂಆರ್‌ಸಿಎಲ್‌ನ ಎಂಜಿನಿಯರ್‌ಗಳು ತಾಂತ್ರಿಕ ದೋಷ ಸರಿಪಡಿಸಿ ಎಂದಿನಂತೆ ಸೇವೆ ನೀಡಲು ಆರಂಭಿಸಿತು.
-
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
IPL 2026: ಆರ್ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಐಪಿಎಲ್ ಟಿಕೆಟ್ ಇದ್ದರೆ 'ನಮ್ಮ ಮೆಟ್ರೋ' ಪ್ರಯಾಣ ಉಚಿತ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ










Click it and Unblock the Notifications