Get Updates
Get notified of breaking news, exclusive insights, and must-see stories!

Namma Metro Pink line: ಸುರಂಗ ಕಾಮಗಾರಿ ಮಹತ್ವದ ಅಪ್ಡೇಟ್, ಸಾಧನೆಗೆ ಒಂದೇ ವಾರ ಬಾಕಿ

ಬೆಂಗಳೂರು, ಫೆಬ್ರವರಿ 01: ಬೆಂಗಳೂರು ನಮ್ಮ ಮೆಟ್ರೋ (Bengaluru namma metro) ಗುಲಾಬಿ ಮಾರ್ಗದಲ್ಲಿ (Metro pink line) ಇನ್ನೊಂದು ವಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲು BMRCL ಸಜ್ಜಾಗಿದೆ.

ಹೌದು, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 'ಭದ್ರಾ' ಹೆಸರಿನ ಟನಲ್ ಬೋರಿಂಗ್ ಮೆಷಿನ್ (TBM) ಸದ್ಯ ಪ್ರಸ್ತುತ ವೆಂಕಟೇಶಪುರದಿಂದ ಕೆಜಿ ಹಳ್ಳಿಯವರೆಗೆ ಉತ್ತರಕ್ಕೆ 1,186 ಮೀಟರ್ ಉದ್ದದ ಸುರಂಗ ಕೊರೆಯುವ ಮಾರ್ಗದಲ್ಲಿ ಸಕ್ರಿಯವಾಗಿದೆ ಎಂದು 'ಡಿಎಸ್' ವರದಿ ಮಾಡಿದೆ.

Namma Metro Pink line: TBM Bhadra Will Complete Tunnel Work then Come Out in Next Week

ಈ ಭದ್ರಾ ಟಿಬಿಎಂ ಇನ್ನೊಂದು ವಾರ ಅಂದ್ಎ ಫೆಬ್ರವರಿ 7 ರಂದು ಸುರಂಗ ಕೊರೆಯುವಿಕೆ ಪೂರ್ಣ ಮಾಡಿ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ. ಪಿಂಕ್ ಲೈನ್‌ನಲ್ಲಿ ವೆಂಕಟೇಶಪುರದಿಂದ 1,184.4 ಮೀಟರ್ ಕೊರೆದು ಡಿಸೆಂಬರ್‌ನಲ್ಲಿ ಕೆ.ಜಿ.ಹಳ್ಳಿಯಿಂದ ಹೊರಹೊಮ್ಮಿದ ಟಿಬಿಎಂ ತುಂಗಾ ಮೂಲಕ ಫೆಬ್ರವರಿ 1 ರಂದು ಕೆ.ಜಿ.ಹಳ್ಳಿ ಮತ್ತು ನಾಗವಾರ ನಡುವೆ ಮುಂದಿನ ಸುರಂಗ ಮಾರ್ಗವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

24ರಲ್ಲಿ 22 ಸುರಂಗ ಕಾರ್ಯ ಪೂರ್ಣ

21.26-ಕಿಮೀ ಮೆಟ್ರೋ ಪಿಂಕ್ ಲೈನ್‌ನಲ್ಲಿ ಉದ್ದೇಶಿಸಲಾದ 24 ಸುರಂಗ ಕಾರ್ಯಗಳಲ್ಲಿ ಭದ್ರಾ ಟಿಬಿಎಂ ಪ್ರಗತಿಯು 22 ನೇ ಸುರಂಗ ಕೊರೆದು ಮುಂದಿನ ವಾರ ಹೊರ ಬರಲಿದೆ. ಇದು ಕಾಳೇನ ಅಗ್ರಹಾರವನ್ನು ಎಂಜಿ ರಸ್ತೆ ಮತ್ತು ಟ್ಯಾನರಿ ರಸ್ತೆಯ ಮೂಲಕ ನಾಗವಾರಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಸುರಂಗ ಮಾರ್ಗವಾಗಿದೆ.

ಇದೇ ಟಿಬಿಎಂ 'ಭದ್ರಾ' ಈ ಮಾರ್ಗದಲ್ಲಿ 24 ನೇ ಮತ್ತು ಅಂತಿಮ ಸುರಂಗವನ್ನು ಮರುಪ್ರಾರಂಭಿಸಿದ ನಂತರ ಅದು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ನಿರೀಕ್ಷೆಗಳು ಇವೆ. BMRCL ಪಿಂಕ್ ಲೈನ್‌ನಲ್ಲಿ 20.99 ಕಿಮೀ ಕ್ರಮಿಸಲು ಒಂಬತ್ತು ಸುರಂಗ ಕೊರೆಯುವ ಯಂತ್ರಗಳನ್ನು ನಿಯೋಜಿಸಿದೆ. ಅದರಲ್ಲಿ ಊರ್ಜ, ವರದ, ಅವ್ನಿ, ಲವಿ, ವಿಂಧ್ಯಾ, ವಾಮಿಕಾ ಮತ್ತು ರುದ್ರ ಇವು ತಮ್ಮ ಕಾರ್ಯ ಪೂರ್ಣಗೊಳಿಸಿ ಹೊರ ಬಂದಿವೆ.

Namma Metro Pink line: TBM Bhadra Will Complete Tunnel Work then Come Out in Next Week

ವರ್ಷಾಂತ್ಯ ಸುರಂಗ ಕೆಲಸ ಪೂರ್ಣ ನಿರೀಕ್ಷೆ

ಬೆಂಗಳೂರು ಮೆಟ್ರೋ ನೀಲಿ ಮಾರ್ಗವು ಪೂರ್ಣಗೊಂಡು ಇಲ್ಲಿ ವಾಣಿಜ್ಯ ಕಾರ್ಯಾಚರಣೆ ನಡೆಸಲು ಮುಂದಿನ ವರ್ಷ ಮಾರ್ಚ್ 2025ರ ಗುಡುವು ನೀಡಲಾಗಿದೆ. ಸದ್ಯ ಈ ಮಾರ್ಗದಲ್ಲಿ ಎರಡು ಸುರಂಗ ಕಾರ್ಯಾಚರಣೆಗಳು ನಡೆಯಬೇಕಿದ್ದು, ಇವು ಆರಂಭವಾಗಿ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇವೆ.

ಪ್ರಸಕ್ತ ಜನವರಿ 30 ರ ಹೊತ್ತಿಗೆ, ಭದ್ರಾ 1,184.4 ಮೀಟರ್‌ಗಳಲ್ಲಿ 1,120 ಮೀಟರ್‌ಗಳನ್ನು ಕಲ್ಲು, ಮಣ್ಣು ಮತ್ತು ಎರಡರ ಮಿಶ್ರಣದ ಮೂಲಕ ಸುರಂಗವನ್ನು ನಿರ್ಮಿಸಿದೆ, ಸುರಂಗ ನಿರ್ಮಾಣಕ್ಕೆ ಅಗತ್ಯವಾದ 840 ಉಂಗುರಗಳಲ್ಲಿ 800 ಅನ್ನು ನಿರ್ಮಿಸಿದೆ.

ಪಿಂಕ್ ಲೈನ್ ಮಾರ್ಗದ ಹೆಚ್ಚುವರಿ ಮಾಹಿತಿ

ಈ ಭದ್ರಾ ಟಿಬಿಎಂ ರಿಂಗ್ 1.4 ಮೀಟರ್ ಅಗಲ ವಿದ್ದು, ಬಲವಾದ ಕಾಂಕ್ರೀಟ್ ಬೇಸ್ ಅನ್ನು ರೂಪಿಸುತ್ತದೆ, ಅದರ ಮೇಲೆ ಮೆಟ್ರೋ ರೈಲು ಹಳಿಗಳನ್ನು ಹಾಕುವ ಪ್ರಕ್ರಿಯೆ ಇನ್ನೇನು ನಡೆಯಬೇಕಿದೆ. ನಾಗವಾರದಿಂದ ಕಾಳೆನ ಅಗ್ರಹಾರದ ವರೆಗೆ ಇರುವ ಈ ಗುಲಾಬಿ ಮಾರ್ಗದಲ್ಲಿ 12 ಭೂಗತ ಮತ್ತು 06 ಎತ್ತರದ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಸದ್ಯ ಗುತ್ತಿಗೆ ಪಡೆದ ಕಂಪನಿಯು ಕಂಟೋನ್ಮೆಂಟ್ ಮತ್ತು ವೆಂಕಟೇಶಪುರ ನಿಲ್ದಾಣಗಳ ನಡುವೆ ಟ್ರ್ಯಾಕ್ ಹಾಕುವ ಕಾರ್ಯದಲ್ಲಿ ನಿರತವಾಗಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.

ಒಟ್ಟಾರೆ ಈ ಗುಲಾಬಿ ಮಾರ್ಗದಲ್ಲಿ ಕಾಮಗಾರಿಗಳು ಭರದಿಂದ ಸಾಗಿವೆ. ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ನಿಗದಿತ ಗಡುವಿನಲ್ಲಿನಲ್ಲಿ ಎಲ್ಲ ಕೆಲಸ ಮುಗಿಯುವ ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+