ಬೆಂಗಳೂರು ಮೆಟ್ರೋ: ನಾಡಿನ ಕಲೆ, ಸಂಸ್ಕೃತಿ ಬಿಂಬಿಸುತ್ತಿರುವ ಮೆಟ್ರೋ ಪಿಲ್ಲರ್‌ಗಳು
ಬೆಂಗಳೂರು, ಡಿಸೆಂಬರ್ 30: ಬೆಂಗಳೂರಿನಾದ್ಯಂತ ಸುಗಮ, ಸಂಚಾರ ದಟ್ಟಣೆ ಕಿರಿ ಕಿರಿ ಇಲ್ಲದೇ ಸಾರಿಗೆ ಸೇವೆ ನೀಡುತ್ತಿರುವ ನಮ್ಮ ಮೆಟ್ರೋ ರೈಲಿನ ಹೊಸ ಮಾರ್ಗಗಳು ಕಂಗೊಳಿಸುವಂತೆ ಮಾಡಲಾಗಿದೆ. ಮೆಟ್ರೋ ಪಿಲ್ಲರ್‌ಗಳಿಗೆ ಸಂಖ್ಯೆ ಮಾತ್ರವಲ್ಲದೇ, ಸಮಾಜ ಕೊಡುಗೆ ನೀಡಿದವರನ್ನು ವಿವಿಧ ಬಣ್ಣಗಳಿಂದ ಚಿತ್ರಿಸಿ ಕಂಗೊಳಿಸುವಂತೆ ಮಾಡಲಾಗುತ್ತಿದೆ. ಇದರಿಂದ ಮೆಟ್ರೋ ಮಾರ್ಗದ ಅಂದ ಮತ್ತಷ್ಟು ಹೆಚ್ಚಾಗಲಿದೆ.
ಹೌದು, ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ (ಆರ್‌ವಿ.ರಸ್ತೆ-ಹೊಸೂರು) ಕಲಾವಿದರ ಕುಂಚದಿಂದ ನಿತ್ಯ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ನೀಡುವವರನ್ನು ಚಿತ್ರಿಸಿದ್ದಾರೆ. ಬಯೋಕಾನ್ ಸಂಸ್ಥೆ ವತಿಯಿಂದ ಮೆಟ್ರೋ ಪಿಲ್ಲರ್‌ಗಳು ವರ್ಣರಂಜಿತವಾಗಿವೆ. ನೋಡಲು ಸೊಗಸಾಗಿ ಕಾಣುತ್ತಿವೆ.

'ಸಮಾಜದ ಆಧಾರ ಸ್ತಂಭಗಳು, ದೈನಂದಿನ ವೀರರು ಎನ್ನಲಾಗುವ ಪೌರಕಾರ್ಮಿಕರು, ಪ್ಲಂಬರ್‌ಗಳು, ಟೈಲರ್‌ಗಳು, ಎಂಜಿನಿಯರ್‌ಗಳು, ವೈದ್ಯರು, ಮಾತ್ರವಲ್ಲದೇ, ಯಕ್ಷಗಾನ ಕಲಾವಿದರು, ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ಇನ್ನಿತರರನ್ನು ನಮ್ಮ ಮೆಟ್ರೋ ಪಿಲ್ಲರ್ ಗೋಡೆಗಳ ಮೇಲೆ ಚಿತ್ರಿಸಲಾಗಿದೆ.
ಮೆಟ್ರೋ ಹಳದಿ ಮಾರ್ಗವಾಗಿ ಹೆಬ್ಬಗೋಡಿ ಮತ್ತು ಹುಸ್ಕೂರು ಗೇಟ್ ಮೆಟ್ರೋ ನಿಲ್ದಾಣಗಳ ನಡುವೆ ಕುಂಚದಲ್ಲಿ ಕಲಾಕೃತಿಗಳು ಕಂಗೊಳಿಸುತ್ತಿವೆ. ವಾಹನ ಸವಾರರನ್ನು, ಪ್ರಯಾಣಿಕರು ಈ ವರ್ಣಾಕೃತಿಗಳು ಆಕರ್ಷಿಸುತ್ತಿವೆ. ಮೆಟ್ರೋ, ಹೊಸೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಿಶಿಷ್ಟವಾದ ಸಾರ್ವಜನಿಕ ಕಲಾ ಯೋಜನೆಯ ಭಾಗವೆಂಬಂತೆ ಭಾಸವಾಗುತ್ತಿದೆ. ಅಷ್ಟರ ಮಟ್ಟಿಗೆ ಸೊಗಸಾಗಿ ಮೆಟ್ರೋ ಪಿಲ್ಲರ್ ಗೋಡೆ ಮೇಲೆ ಚಿತ್ರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಹಿತಿ ನೀಡಿದೆ.

ಈ ಹಿಂದೆಯು ನಗರದ ವಿವಿಧ ಕಡೆಗಳಲ್ಲಿ ನೇರಳೆ ಮಾರ್ಗದ ಮೆಟ್ರೋ ಪಿಲ್ಲರ್, ಹಸಿರು ಮಾರ್ಗಗಳ ಮೆಟ್ರೋ ಪಿಲ್ಲರ್‌ಗಳ ಗೋಡೆ ಮೇಲೆ ವಿವಿಧ ಕಲಾಕೃತಿಗಳನ್ನು ಬಿಡಿಸಲಾಗಿತ್ತು. ಕೆಲವೆಡೆ ಪಿಲ್ಲರ್‌ಗಳನ್ನು ಹಾಗೇಯೆ ಬಿಡದೇ ಒಂದೇ ರೀತಿ ಬಣ್ಣ ಬಳಿಯಲಾಗಿತ್ತು. ಇದು ಸಹ ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ.
ಇನ್ನೂ ಇತ್ತೀಚೆಗೆ ಬೆಂಗಳೂರು ಸರ್ಕಾರಿ ಹಾಗೂ ಮೆಟ್ರೋ ದಂತೆ ಇನ್ನಿತರ ಖಾಸಗಿ ಕಟ್ಟಡಗಳ ಗೋಡೆಗಳು ಸುಂದರವಾಗಿ ಕಾಣುವಂತೆ ಮಾಡಲು ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್ ಸಹಯೋಗದಲ್ಲಿ 'ಗೋಡೆ ಬೆಂಗಳೂರು'ಉಪಕ್ರಮವನ್ನು ಈಗಾಗಲೇ ಘೋಷಿಸಲಾಗಿದೆ. ಈ ಉಪಕ್ರಮದಡಿ ಹತ್ತು ಮಂದಿಯ ಕಲಾವಿದರ ತಂಡ ನಬಗರದ ಪ್ರಮುಖ ಮೆಟ್ರೋ ನಿಲ್ದಾಣದ ಗೋಡೆಗಳು, ಸರ್ಕಾರಿ, ಖಾಸಗಿ ಕಚೇರಿ/ಕಟ್ಟಡಗಳ ಗೋಡೆಗಳನ್ನುಕಂಗೊಳಿಸುವಂತೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು.












Click it and Unblock the Notifications