Namma Metro Phase 3rd: ಯೋಜನೆಗಾಗಿ 1,092 ಮರಗಳಿಗೆ ಕತ್ತರಿ: 2,175 ಮರ ತೆರವಿಗೆ ಪ್ರಸ್ತಾವನೆ
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರು ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಕಾಮಗಾರಿ ಆರಂಭ ವಿಳಂಬ ಕುರಿತು ಚರ್ಚೆಗಳು ನಡೆದಿವೆ. ಈ ಹೊತ್ತಿನಲ್ಲೇ ಯೋಜನೆಯಡಿ ಬರುವ ಎರಡು ಮಹತ್ವದ ಕಾರಿಡಾರ್ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾಗುತ್ತದೆ. ಈ ಬಗ್ಗೆ ಡಿಪಿಆರ್ ನಲ್ಲಿ ಉಲ್ಲೇಖಿಸಲಾಗಿದ್ದು ಇದಕ್ಕೆ BMRCL ಒಪ್ಪಿಗೆ ಸಹ ಪಡೆದಿದೆ.
ಹೌದು, ಬೆಂಗಳೂರು ಮೆಟ್ರೋ 3ನೇ ಹಂತದ ವ್ಯಾಪ್ತಿಯಲ್ಲಿ ಜೆಪಿ ನಗರ 4ನೇ ಹಂತ- ಹೆಬ್ಬಾಳದ ಕೆಂಪಾಪುರದವರೆಗಿನ ಹೊಸ ಮೆಟ್ರೋ ಮಾರ್ಗದ ನಿರ್ಮಾಣಕ್ಕಾಗಿ 1,092 ಮರಗಳನ್ನು ಕತ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕೃತ ಒಪ್ಪಿಗೆ ಪಡೆದುಕೊಂಡಿದೆ. ಒಟ್ಟು 44.65 ಕಿಲೋ ಮೀಟರ್ ಉದ್ದದ ಈ ಯೋಜನೆಯಲ್ಲಿ ಪ್ರಮುಖ ಮಾರ್ಗಗಳು ಬರುತ್ತವೆ. ಜೆಪಿ ನಗರ 4 ನೇ ಹಂತದಿಂದ ಹೆಬ್ಬಾಳ ಕೆಂಪಾಪುರ ಮತ್ತೊಂದು ಹೊಸಹಳ್ಳಿ- ಕಡಬಗೆರೆ (ಕಾರಿಡಾರ್ 2) ಮಾರ್ಗವು ತಲೆ ಎತ್ತಲಿದೆ.

ನಗರದ ಹಸಿರು ಹೊದಿಕೆಗೆ ಕುತ್ತು ಬರುತ್ತಿದಿಯಾ?
ಅಂದಾಜು 11,137 ಮರಗಳನ್ನು ಕತ್ತರಿಸಬೇಕಾಗಬಹುದೆಂದು ಮೊದಲು ಅಂದಾಜಿಸಲಾಗಿತ್ತು. ಬಳಿಕ ಮೆಟ್ರೋ ಅಧಿಕಾರಿಗಳು 1,092 ಕ್ಕೆಇಳಿಸಿದರು. ಮೆಟ್ರೋ ಲೈನ್‌ಗೆ ಅಡ್ಡ ಬರುವ ಮರಗಳನ್ನು ಮಾತ್ರವೇ ಕತ್ತರಿಸಲಾಗುವುದು. ಹಲವು ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಉಪನಗರ ರೈಲು, ಮೆಟ್ರೋ ಮಾರ್ಗ, ಮೇಲ್ಸೇತುವೆ ಯೋಜನೆಗಳಿಂದ, ರಸ್ತೆ ಅಗಲೀಕರಣ ಹೀಗೆ ವಿವಿಧ ಯೋಜನೆಗಳಿಂದಾಗಿ ಸಾವಿರಗಟ್ಟಲೇ ಮರಗಳನ್ನು ಕಡಿಯಲಾಗಿದೆ. ನಗರೀಕರಣವು ಹಸಿರು ಹೊದಿಕೆಗೆ ನಿರಂತರವಾಗಿ ದುಷ್ಪರಿಣಾಮ ಬೀರುತ್ತಿದೆ. ವರ್ಷದಿಂದ ವರ್ಷಕ್ಕೆ ಉದ್ಯಾನ ನಗರಿ ಖ್ಯಾತಿಗೆ ಧಕ್ಕೆ ಉಂಟಾಗುತ್ತಾ? ಎಂಬ ಆತಂಕ ಶುರುವಾಗಿದೆ.
ಜೆಪಿ ನಗರ 4ನೇ ಹಂತದಿಂದ ಮೈಸೂರು ರಸ್ತೆಯವರೆಗಿನ 10.88 ಕಿ.ಮೀ. ಉದ್ದದ ಈ ಮಾರ್ಗ ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಿರ್ಮಾಣಗೊಳ್ಳಲಿದೆ. ಜೆಪಿ ನಗರ 4ನೇ ಹಂತ, 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್, ಹೊಸಕೆರೆಹಳ್ಳಿ, ದ್ವಾರಕನಗರ ಮತ್ತು ಮೈಸೂರು ರಸ್ತೆಯಲ್ಲಿ ನಿಲ್ದಾಣಗಳು ನಿರ್ಮಾಣವಾಗಲಿವೆ.
ನಗರದ ರಿಂಗ್ ರಸ್ತೆ (ORR) ಉದ್ದಕ್ಕೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಿತ್ಯ ಸಾರ್ವಜನಿಕರು ಟ್ರಾಫಿಕ್‌ನಲ್ಲಿ ಕಾಲ ಕಳೆಯುವಂತಾಗಿದೆ. ಈ ಮೂರನೇ ಹಂತದ ಮೆಟ್ರೋ ಯೋಜನೆಯಿಂದ ದಟ್ಟಣೆ ಕಡಿಮೆ ಆಗುವ ವಿಶ್ವಾಸ ಇದೆ. ಅಂದಾಜು ರೂ.15,617 ಕೋಟಿ ವೆಚ್ಚದ ಯೋಜನೆಯಡಿ ಎರಡು ಕಾರಿಡಾರ್‌ಗಳಲ್ಲಿ 37.121 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಸ್ಥಾಪನೆಯಾಗಲಿದೆ.
ಅರಣ್ಯ ವಿಭಾಗದ ಮುಂದೆ ಮತ್ತೊಂದು ಪ್ರಸ್ತಾವನೆ
ಯೋಜನೆಗೆ ಹಾಗೂ ಮರಗಳ ಕತ್ತರಿಸುವ ವಿಚಾರವಾಗಿ BMRCL 2,184 ಮರಗಳ ತೆರವು ಕುರಿತು ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಂದಷ್ಟು ಸಮಾಲೋಚನೆ ಬಳಿಕ ತಜ್ಞರು, ಪರಿಸರವಾದಿಗಳು 686 ಮರಗಳನ್ನು ಉಳಿಸಿಕೊಳ್ಳುವಂತಾಯಿತು. ಸದ್ಯ 1,092 ಮರಗಳಿಗೆ ಕೊಡಲಿ ಹಾಕಲಾಗುತ್ತದೆ. 406 ಮರಗಳು ಬೇರೆಡೆ ಸ್ಥಳಾಂತರಿಸಲು ತಿರ್ಮಾನಿಸಲಾಗಿದೆ. ಮೈಸೂರು ರಸ್ತೆ ಮತ್ತು ಕಂಠೀರವ ಸ್ಟುಡಿಯೋ ಮಧ್ಯದ ಯೋಜನೆಗಾಗಿ 2,175 ಮರ ತೆರವಿಗೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಕೇಳಲಾಗಿದೆ.
-
IPL ಪ್ರೇಕ್ಷಕರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications