Namma Metro: ಮೆಟ್ರೋ 3ನೇ ಹಂತದ ಯೋಜನೆ ಮಹತ್ವದ ಮಾಹಿತಿ
ಬೆಂಗಳೂರು, ನವೆಂಬರ್ 01: ಬೆಂಗಳೂರು ನಮ್ಮ ಮೆಟ್ರೋ (Namma Metro) ಮೂರನೇ ಹಂತದ ಯೋಜನೆ ಹೊರ ವರ್ತುಲ ರಸ್ತೆ-ಪಶ್ಚಿಮ (ORR) ಮತ್ತು ಮಾಗಡಿ ರಸ್ತೆ ಟೋಲ್‌ಗೇಟ್ ವರೆಗಿನ ಯೋಜನೆಯ ಸಮಗ್ರ ಯೋಜನಾ ವರದಿಯನ್ನು (DPR) ಅನುಮೋದನೆ ಮಾಡುವಲ್ಲಿ ಕೇಂದ್ರ ಸರ್ಕಾರದಿಂದ ವಿಳಂಬವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಗಳು ತಿಳಿಸಿವೆ.
ಈ ಯೋಜನಾ ವರದಿಯಲ್ಲಿನ ಎರಡು ವಿವಾದಾತ್ಮಕ ಅಂಶಗಳು ಅನುಮೋದನೆ ವಿಳಂಬಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಮಾಗಡಿ ರಸ್ತೆಯ ವಿಸ್ತರಣೆಗಾಗಿ ಗೊತ್ತುಪಡಿಸಿದ ಮೆಟ್ರೋ ಕೋಚ್‌ಗಳ ಉದ್ದ ಮತ್ತು ರೋಲಿಂಗ್ ಸ್ಟಾಕ್‌ನ ಆಕ್ಸಲ್ ಲೋಡ್ ಇವೆರಡು ಅಂಶಗಳು ಇದೀಗ ಯೋಜನೆಯ ಮೇಲೆ ಪರಿಣಾಮ ಬೀರಿವೆ.

ಈ ಸಂಬಂಧ ಅಧಿಕಾರಿಗಳು ಡಿಪಿಆರ್ ಅನ್ನು ಪರಿಷ್ಕರಿಸಲಾಗಿದೆ ಮತ್ತೊಮ್ಮೆ ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ (MoHUA) ಸಲ್ಲಿಸಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಹೊಸಹಳ್ಳಿ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ಮತ್ತು ಮಾಗಡಿ ರಸ್ತೆಯ ಕಡಬಗೆರೆ ನಡುವಿನ 12.5-ಕಿಮೀ.ನ ಈ ಮಾರ್ಗಕ್ಕೆ ಆರು ಬೋಗಿಗಳ ರೈಲುಗಳನ್ನು ನಿಯೋಜಿಸಲು ಪ್ರಸ್ತಾಪಿಸಿತ್ತು ಎಂದು ಡಿಎಚ್ ವರದಿ ಮಾಡಿದೆ.
ಮೂರು ಕೋಚ್ ಬಳಕೆಗೆ ಶಿಫಾರಸು
ಇನ್ನೂ ಎಲಿವೇಟೆಡ್ ಟ್ರ್ಯಾಕ್‌ನ ಉದ್ದವನ್ನು ಕಡಿಮೆ ಅಳತೆಯಲ್ಲಿ ಪ್ರಸ್ತಾಪಿಸಲಾಗಿದೆ. ಬದಲಿಗೆ ಮೂರು-ಕೋಚ್ ರೈಲುಗಳನ್ನು ಬಳಸಿಕೊಳ್ಳಲು ಕೇಂದ್ರವು ಶಿಫಾರಸು ಮಾಡಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ವರದಿಯಲ್ಲಿ ಕೆಲವು ಬದಲಾವಣೆ ಮಾಡಿ ನವೀಕರಿಸಿದ್ದಾರೆ.
ನವೀಕೃತ ವರದಿಯಲ್ಲಿ ಮೂರು ಬೋಗಿಗಳ ರೈಲುಗಳ ನಿಯೋಜನೆಗೆ ಕೋರಲಾಗಿದೆ. ಆದರೆ ಮಾಗಡಿ ರಸ್ತೆಯಲ್ಲಿರುವ ನಿಲ್ದಾಣಗಳು ಭವಿಷ್ಯದಲ್ಲಿ ಆರು ಬೋಗಿಗಳ ರೈಲು ಬಳಕೆಯಷ್ಟು ಸಾಮರ್ಥ್ಯ ಹೊಂದಿದೆ. ಮಾಗಡಿ ರಸ್ತೆಯಲ್ಲಿನ ನಿಲ್ದಾಣಗಳು ಆರು ಬೋಗಿಗಳ ರೈಲುಗಳಿಗೆ ಅವಕಾಶ ಕಲ್ಪಿಸುವಷ್ಟು ವಿಶಾಲವಾಗಿವೆ.

BRMCL ಎಂಡಿ ಪ್ರತಿಕ್ರಿಯೆ
ಮೆಟ್ರೋ ಮೊದಲ ಹಂತದ ಯೋಜನೆಯಲ್ಲಿ ಮಾಡಿದಂತೆಯೇ ಈ ಮಾರ್ಗದಲ್ಲಿ ಆರಂಭದಲ್ಲಿ ಮೂರು ಬೋಗಿಗಳ ರೈಲು ಓಡಿಸಲಿದ್ದೇವೆ ಎಂದು BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಮಾಹಿತಿ ನೀಡಿದ್ದಾರೆ.
ಸದ್ಯ ಡಿಪಿಆರ್ ಪರಿಷ್ಕರಿಸಿದ ಬಳಿಕ ಯೋಜನೆಯ ಒಟ್ಟು ವೆಚ್ಚದಲ್ಲಿ ತುಸು ಇಳಿಕೆ ಆಗಿದೆ. ಅಂದರೆ ಒಟ್ಟು ಯೋಜನೆಯ 16,000 ಕೋಟಿ ರೂಪಾಯಿ ಅಂದಾಜಿನಲ್ಲಿ ಈಗ 15,600 ಕೋಟಿ ರೂಪಾಯಿಗೆ ಕಡಿಮೆ ಆಗಿದೆ.
ರೋಲಿಂಗ್ ಸ್ಟಾಕ್ ಆಕ್ಸಲ್ ಲೋಡ್ ವಿಚಾರತದಲ್ಲಿ ಬಿಎಂಆರ್‌ಸಿಎಲ್ ಸವಾಲೊಂದನ್ನು ಎದುರಿಸುತ್ತಿದೆ. ನಮ್ಮ ಮೆಟ್ರೋ ಯೋಜನೆಯ ಮೊದಲ ಮತ್ತು ಎರಡನೇ ಹಂತಗಳಲ್ಲಿ, ನಿಲ್ದಾಣಗಳು ಮತ್ತು ಡಿಪೋಗಳನ್ನು 15 ಟನ್‌ಗಳ ಆಕ್ಸಲ್ ಲೋಡ್‌ನೊಂದಿಗೆ 2,880 ಮಿ.ಮೀ ರೋಲಿಂಗ್ ಸ್ಟಾಕ್‌ಗೆ ಸರಿಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಒಪ್ಪಂದದ ಆದ್ಯತೆ ಮೇರೆಗೆ 16-ಟನ್ ಆಕ್ಸಲ್ ಲೋಡ್‌ನೊಂದಿಗೆ 2,900 mm ಕೋಚ್ ವಿನ್ಯಾಸಗೊಳಿಸಲಾಗಿದೆ.
ಮೂರನೇ ಹಂತದ ಯೋಜನೆಯ ಡಿಪಿಆರ್ ಈವರೆಗೆ ಮೂರರಿಂದ ನಾಲ್ಕು ಪರಿಷ್ಕರಣೆಗೆ ಒಳಗಾಗಿದೆ. ಮುಂಬರಲಿರುವ ಹೆಬ್ಬಾಳ - ಸರ್ಜಾಪುರ ರಸ್ತೆ (3ನೇ ಹಂತ-A) ಯೋಜನೆಗೆ ಬಹುತೇಕ ಪರಿಪೂರ್ಣ ಡಿಪಿಆರ್ ರಚನೆ ಈಗಿನ ಅನುಭವ, ಎದುರಾದ ಸವಾಲು ನೆರವಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಭಿಪ್ರಾಯ ಪಟ್ಟಿದೆ.












Click it and Unblock the Notifications