Namma Metro: ಸರ್ಜಾಪುರ-ಹೆಬ್ಬಾಳ ಮೆಟ್ರೋ ಕಾಮಗಾರಿಗೆ ಯುಡಿಡಿ ಗ್ರೀನ್‌ಸಿಗ್ನಲ್
ನಮ್ಮ ಮೆಟ್ರೋ 3-ಎ ಹಂತದ ಯೋಜನೆ ಬಗ್ಗೆ ಮಹತ್ವದ ಅಪ್‌ಡೇಟ್ ಒಂದು ಲಭ್ಯವಾಗಿದೆ. ನಗರದ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಸರ್ಜಾಪುರ-ಹೆಬ್ಬಾಳ ನಡುವಿನ ನಮ್ಮ ಮೆಟ್ರೋ ಯೋಜನೆಗೆ ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಅನುಮತಿ ಕೊಟ್ಟಿದೆ. ಯುಡಿಡಿ ಅನುಮೋದನೆ ಬಳಿಕ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಹಣಕಾಸು ಇಲಾಖೆ ಪರಿಶೀಲನೆ ನಡೆಸಲಿದ್ದು, ಯೋಜನಾ ವೆಚ್ಚವನ್ನು ನಿರ್ಧಾರ ಮಾಡಲಿದೆ.
ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವ ಪ್ರಕಾರ, ಸರ್ಜಾಪುರ-ಹೆಬ್ಬಾಳ ಮೆಟ್ರೋ ಯೋಜನೆಗೆ ಯುಡಿಡಿ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ ರಾಜ್ಯದ ಬಜೆಟ್ ಮೇಲೆ ಆರ್ಥಿಕ ಪರಿಣಾಮವನ್ನು ನಿರ್ಧಾರ ಮಾಡಲು ಹಣಕಾಸು ಇಲಾಖೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಿದೆ. ಬಳಿಕ ರಾಜ್ಯ ಬಜೆಟ್‌ನಲ್ಲಿ ಕಾಮಗಾರಿಗೆ ಅನುಮೋದನೆ ನೀಡಿ, ಹಣ ಬಿಡುಗಡೆ ಮಾಡಲಿದೆ.

ಹೆಬ್ಬಾಳ-ಸರ್ಜಾಪುರ 37 ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಯುಡಿಡಿ ಬಿಬಿಎಂಪಿ ಜೊತೆ ಸಮಾಲೋಚನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರಿಗೆ ಈ ಮೆಟ್ರೋ ಮಾರ್ಗ ಮಹತ್ವದ್ದಾಗಿದೆ. ನಗರಟ ಟೆಕ್ ಹಬ್ ಅನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ. ಯುಡಿಡಿ ಅನುಮೋದನೆ ನೀಡಿದ ಬಳಿಕ ಹಣಕಾಸು ಇಲಾಖೆ ಅನುಮೋದನೆ ಕೊಟ್ಟರೆ ಕ್ಯಾಬಿನೆಟ್‌ನಲ್ಲಿ ಅನುಮೋದನೆ ಸಿಕ್ಕರೆ ಕಾಮಗಾರಿ ಪ್ರಾರಂಭವಾಗಲಿದೆ.
28 ನಿಲ್ದಾಣಗಳ, ಎಲಿವೇಟೆಡ್ ರಸ್ತೆ
ಹೆಬ್ಬಾಳದಿಂದ ಸರ್ಜಾಪುರದ ನಡುವೆ 37 ಕಿಮೀ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಬರಲಿವೆ. ಇದರಲ್ಲಿ 11 ನಿಲ್ದಾಣಗಳು ಸುರಂಗ ಮಾರ್ಗದಲ್ಲಿ ನಿರ್ಮಾಣವಾಗಲಿವೆ. ಇಬ್ಬಲೂರು, ಕೋರಮಂಗಲ, ಶಾಂತಿನಗರ, ಟೌನ್ ಹಾಲ್, ಮೇಖ್ರಿ ಸರ್ಕಲ್, ಸರ್ಜಾಪುರದಂತಹ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದಲ್ಲಿ ಎಲಿವೇಟೆಡ್ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣಕ್ಕೆ ಕೂಡ ಯೋಜಿಸಲಾಗಿದೆ. ಸದ್ಯ ಡಿಪಿಆರ್ ಮೆಟ್ರೋ ಮಾರ್ಗದ ಬಗ್ಗೆ ಮಾತ್ರ ಇರುವುದರಿಂದ, ಎಲಿವೇಟೆಡ್ ರಸ್ತೆಗೆ ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಹಣ ನೀಡಬೇಕಿದೆ.
ಕೇಂದ್ರ ಸರ್ಕಾರ ಸೆಪ್ಟೆಂಬರ್ 27ರಂದು ಹೊರವರ್ತುಲ ರಸ್ತೆ (ಜೆಪಿ ನಗರ-ಕೆಂಪಾಪುರ) ಮತ್ತು ಮಾಗಡಿ ರಸ್ತೆ ನಡುವಿನ 15,600 ಕೋಟಿ ರೂಪಾಯಿ ವೆಚ್ಚದ 3ನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
3ಎ ಯೋಜನೆಗೂ ಆದಷ್ಟು ಬೇಗ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಕ್ಕ ಬಳಿಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬಳಿಕ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ.












Click it and Unblock the Notifications