Bengaluru metro: ಕ್ಯೂಆರ್ ಕೋಡ್‌ಗಿಂತ 'ಟೋಕನ್' ಟಿಕೆಟ್ ಬಳಸುವವರೇ ಹೆಚ್ಚು, ಅಂಕಿ-ಅಂಶಗಳು

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು ಮೆಟ್ರೋ ಜಾಲ ವಿಸ್ತರಿಸಿದಂತೆಲ್ಲ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತಿದೆ. ಈ ಸಲುವಾಗಿ ಒಂದೇ ಕ್ಯೂಆರ್ ಕೋಡ್‌ ನಲ್ಲಿ ಆರು ಮಂದಿಗೆ ಸಂಚರಿಸುವ ಅವಕಾಶ, ಸ್ಮಾರ್ಟ್ ಕಾರ್ಡ್‌ ವ್ಯವಸ್ಥೆ, ವಿನಾಯಿತಿಯನ್ನು BMRCL ಜಾರಿಗೆ ತಂದಿದೆ. ಹೀಗಿದ್ದರೂ ಸಹ ಜನರು ಭೌತಿಕ ಟಿಕೆಟ್ (ಟೋಕನ್) ಅನ್ನೇ ಹೆಚ್ಚು ಬಳಸುತ್ತಿರುವುದು ಬಹಿರಂಗವಾಗಿದೆ. ಹಾಗಾದರೆ ಯಾವ ಟಿಕೆಟ್‌ಗಳು ಎಷ್ಟು ಬಳಕೆ? ಆಗುತ್ತಿದೆ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಟಿಕೆಟಿಂಗ್‌ನ ಕ್ಯೂಆರ್ ಕೋಡ್ ಮತ್ತು ಸ್ಮಾರ್ಟ್ ಕಾರ್ಡ್‌ಗಳು ಬಳಕೆ ಮಾಡುವವರಿಗೆ ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ಕಡಿತ ಮಾಡುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣಿಕರ ಒಟ್ಟು ಸಂಖ್ಯೆಯಲ್ಲಿ ಬಹುತೇಕ ಪ್ರಯಾಣಿಕರು ಡಿಜಿಟಲ್ ಆಯ್ಕೆಗಳಿಗಿಂತ ಭೌತಿಕ ಟೋಕನ್ ಬಳಕೆ ಮಾಡುತ್ತಿದ್ದಾರೆ.

Namma Metro Passengers Use Tocken Ticket More Than Smart QR Tickets, Know Smart card users

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಅವರು, ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡಿದ್ದೇವೆ. ಅಗತ್ಯ ವಿನಾಯಿತಿ ಸಹ ನೀಡುತ್ತಿದ್ದೇವೆ. ವೇಗ ಮತ್ತು ಸುರಕ್ಷತೆಯ ಸಾರಿಗೆಯಲ್ಲಿ ಮೆಟ್ರೋ ಹೆಸರು ವಾಸಿಯಾಗಿದೆ.

ಟೋಕನ್ ಪಡೆಯಲು ಸರತಿ ಸಾಲು

ಈ ಕಾರಣದಿಂದ ಉತ್ತಮ ಸಂಖ್ಯೆಯ ಪ್ರಯಾಣಿಕರನ್ನು ನಮ್ಮ ಮೆಟ್ರೋ ಆಕರ್ಷಿಸಿದೆ. ಇಂದಿನಿಂದ ದಿನಮಾನಗಳಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಜನ ಕಿಕ್ಕಿರಿದು ಜನರು ಕಾಣುತ್ತಿದ್ದು, ಟೋಕನ್ ಪಡೆಯಲು ಸರತಿಸಾಲಿನಲ್ಲಿ ನಿಂತಿರುತ್ತಾರೆ. ಸ್ಮಾರ್ಟ್ ಕಾರ್ಡ್ ಡಿಜಿಟಲ್ ಗಿಂತಲ ಟೋಕ್ ಬಳಸುವವರೇ ಹೆಚ್ಚಾಗಿದ್ದಾರೆ ಎಂದರು.

ಕ್ಯೂಆರ್ ಟಿಕೆಟ್ ಗಿಂತ 3ಪಟ್ಟು ಟೋಕನ್ ಬಳಕೆ

ನಮ್ಮ ಮೆಟ್ರೊದಲ್ಲಿ ನಿತ್ಯ 1,60, 66,040 ಪ್ರಯಾಣಿಕರು ಸಂಚರಿಸುತ್ತಾರೆ. ಇದರಲ್ಲಿ 55, 54, 647 ಪ್ರಯಾಣಿಕರು ಟೋಕನ್ ಖರೀದಿಸಿ ಓಡಾಡುತ್ತಾರೆ. ಇದು ಕ್ಯೂಆರ್‌ ಕೋರ್ಡ್ ಟಿಕೆಟ್ (18,76,894) ಬಳಸುವವರ ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ. ಸ್ಮಾರ್ಟ್ ಕಾರ್ಡ್ ಅನ್ನು 86,34,499 ಜನ ಬಳಸುತ್ತಾರೆ ಎಂದು ತಿಳಿಸಿದ್ದಾರೆ.

Namma Metro Passengers Use Tocken Ticket More Than Smart QR Tickets, Know Smart card users

BMRCL ನವೆಂಬರ್ ತಿಂಗಳಿನಿಂದ ಗರಿಷ್ಠ ಆರು ಪ್ರಯಾಣಿಕರಿಗೆ ಒಂದೇ ಕ್ಯೂಆರ್ ಕೋಡ್ ಟಿಕೆಟ್ ಯೋಜನೆ ಜಾರಿಗೊಳಿಸಿತ್ತು. ಕೋವಿಡ್ ನಂತರದ ಅವಧಿಯು ಕಾರ್ಡ್ ಬಳಕೆದಾರರು ಅನೇಕ ತೊಂದರೆಗಳನ್ನು ಎದುರಿಸಿದ್ದರಿಂದ ಅನೇಕ ಪ್ರಯಾಣಿಕರು ಅವುಗಳನ್ನು ಬ್ಯಾಕಪ್ ಆಗಿ ಇಟ್ಟುಕೊಂಡು ಟೋಕನ್‌ಗಳನ್ನು ಖರೀದಿಸಲು ಆರಂಭಿಸಿದರು. ಆದರೆ ಆ ಸಮಸ್ಯೆಗಳನ್ನು ಈಗಿಲ್ಲ ಎನ್ನಲಾಗಿದೆ.

ನಿಯಮಿತವಾಗಿ ಓಡಾಡುವವರಿಗೆ ಕಾರ್ಡ್ ಬೆಸ್ಟು

ಟೋಕನ್‌ಗಳ ಬಳಕೆ ಪ್ರಯಾಣಿಕರು ಏಗೆ ಹೆಚ್ಚು ಒಗ್ಗಿಕೊಂಡಿದ್ದಾರೆ ಎಂದು ನೋಡುವುದಾದರೆ, ಮೆಟ್ರೋ ಪ್ರಯಾಣಿಕರಾದ ನಿತಿಕಾ ಕುಮಾರ್ ಎಂಬುವವು ನಿತ್ಯವು ಮೆಟ್ರೋ ಪ್ರಯಾಣ ಮಾಡುವುದಾದರೆ ನೀವು ಕಾರ್ಡ್ ಖರೀದಿಸುವುದು ಅರ್ಥಪೂರ್ಣ ಎಂಬುದು ನನ್ನ ಭಾವನೆ. ಅಪರೂಪಕ್ಕೆ ಒಮ್ಮೆ ಮೆಟ್ರೋದಲ್ಲಿ ಓಡಾಡುವುದಿದ್ದರೆ ನಾನು ಏಕೆ ಕಾರ್ಡ್ ಖರೀದಿಸಬೇಕು.

ಅಪರೂಪಕ್ಕೆ ಮೆಟ್ರೋ ಬಳಕೆಗೆ ಟೋಕನ್ ಉತ್ತಮ

ಕಾರ್ಡ್ ಖರೀದಿಸಿದರೆ ಅದನ್ನು ಜೊತೆಗೆ ಒಯ್ಯಬೇಕು. ಅದರ ಬದಲಾಗಿ ಟೋಕನ್ ಬಳಸಿದರೆ ಆಯಾ ದಿನದಂದು ಅಲ್ಲಿಯೇ ಖರೀದಿ ಬರುವಾಗ ಅದನ್ನು ಅಲ್ಲಿಯೇ ವಿಲೇ ಮಾಡಬಹುದು. ಹೀಗಾಗಿ ಸ್ಮಾರ್ಟ್‌ ಕಾರ್ಡ್‌ಗಿಂತ ಆಗೋಮ್ಮೆ ಈಗೊಮ್ಮೆ ಪ್ರಯಾಣ ಮಾಡುವುದಿದ್ದರೆ ಟೋಕ್ ಬೆಸ್ಟು ಎನ್ನುತ್ತಾರೆ ಅವರು.

ಮೆಟ್ರೋದಲ್ಲಿ ಪದೇ ಪದೇ ಪ್ರಯಾಣಿಸದ ಮತ್ತೊಬ್ಬ ವ್ಯಕ್ತಿಯು, ಮೆಟ್ರೋವನ್ನು ನಿರಂತರವಾಗಿ ಬಳಸುವುದಿಲ್ಲ. ಹೀಗಾಗಿ ಅನಗತ್ಯವಾಗಿ ನಾನು 50 ರೂಪಾಯಿ ಕೊಟ್ಟು ಖರೀದಿಸಲು ಮನಸ್ಸು ಮಾಡುವುದಿಲ್ಲ. ಹೆಚ್ಚು ಕಾರ್ಡ್ ಬಳಕೆಯಾದರೆ ಅದು ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಆಧಾಯ. ಏಕೆಂದರೆ ಕಾರ್ಡ್‌ಗೆ ಶುಲ್ಕ ವಿಧಿಸಿರುತ್ತಾರೆ. ಆದ್ದರಿಂದ ನನಗೆ ಟೋಕನ್ ಪಡೆಯುವುದು ಅನುಕೂಲ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+