Namma Metro: ಅಸ್ತಿತ್ವದ ಮೆಟ್ರೋ ನಿಲ್ದಾಣಗಳಿಗೆ ಪಿಎಸ್‌ಡಿ ಅಳವಡಿಕೆ ಅಸಾಧ್ಯ, ಯಾಕೆ?
ಬೆಂಗಳೂರು, ಮಾರ್ಚ್ 22: ಬೆಂಗಳೂರು ನಮ್ಮ ಮೆಟ್ರೋ (Namma Metro) ಟ್ರ್ಯಾಕ್ ಮೇಲೆ ಯುವಕ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ಮತ್ತೆ ಆಗ್ರಹ ಶುರುವಾಗಿದೆ. ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಕ್ರೀನ್ ಡೋರ್ (PSD) ಅಳವಡಿಸಿದ್ದ ಇಂತಹ ಅನಾಹುತ ತಪ್ಪಿಸಲು ಸಹಾಯವಾಗುತ್ತದೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮೆಟ್ರೋ ನಿಲ್ದಾಣಗಳಲ್ಲಿ ಈ ಪಿಎಸ್‌ಟಿ ಅಳವಡಿಕೆಗೆ ಹೆಚ್ಚು ವೆಚ್ಚವಾಗಲಿದೆ. ಕೆಲವು ತಾಂತ್ರಿಕ ಸವಾಲುಗಳ ಮಧ್ಯೆ ಇದನ್ನು ಎಲ್ಲ ನಿಲ್ದಾಣಗಳಲ್ಲಿ ಅಳವಡಿಸುವುದು ಸಾಧ್ಯ ಆಗಲಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಹೊಸ ಮಾರ್ಗಗಳ ಭೂಗತ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಕೆಗೆ ನಿರ್ಧರಿಸಲಾಗಿದೆ. ಆದರೆ ಹಾಲಿ (ಹಳೆಯ) ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರುವುದು ಕಷ್ಟಸಾಧ್ಯವೆಂದು ಎಂದು "ಡಿಎಚ್' ವರದಿ ಮಾಡಿದೆ.

ಈ ಪ್ಲಾಟ್‌ಫಾರ್ಮ್ ಸ್ಟೀನ್ ಡೋರ್ (PSD) ವ್ಯವಸ್ಥೆಯನ್ನು ನಿಲ್ದಾಣಗಳಲ್ಲಿ ಜನರು ಟ್ರ್ಯಾಕ್‌ಗಳಿಗೆ ಜಿಗಿಯುವುದನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ. ಭೂಗತ ನಿಲ್ದಾಣಗಳಲ್ಲಿ ಕಡಿಮೆ ಹವಾನಿಯಂತ್ರಣದ ಅಗತ್ಯತೆಗಳ ಇರುವ ಕಾರಣದಿಂದ ಈ ವ್ಯವಸ್ಥೆ ಸಹಾಯಕ್ಕೆ ಬರಲಿದೆ.
ದೆಹಲಿ, ಮುಂಬೈ, ಚೆನ್ನೈನಲ್ಲಿ ಪಿಎಸ್‌ಡಿ ಜಾರಿ
ದೇಶದ ಮೆಟ್ರೋ ನಗರಗಳಾದ ಚೆನ್ನೈ, ದೆಹಲಿ, ಮುಂಬೈಗಳಲ್ಲಿ ಭೂಗತ ಮತ್ತು ಎತ್ತರದ ಮೆಟ್ರೋ ನಿಲ್ದಾಣಗಳಲ್ಲಿ ಈ ಪಿಎಸ್‌ಡಿ ವ್ಯವಸ್ಥೆ ಜಾರಿಯಲ್ಲಿದೆ. ಇನ್ನೂ ಬೆಂಗಳೂರಿನಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಹಳಿಗೆ ಇಳಿಯುವ ಪ್ರಕರಣ ವರದಿ ಆಗುತ್ತಿದ್ದಂತೆ ಇದರ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ.
ನಮ್ಮ ಮೆಟ್ರೋ ಹಲವು ಭೂಗತ ನಿಲ್ದಾಣಗಳಲ್ಲಿ ಪಿಎಸ್‌ಡಿ
ಹೊಸ ಮಾರ್ಗವಾದ ಮೆಟ್ರೋ ಮಾರ್ಗಗಗಳ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ. ಕಾಳೇನ ಅಗ್ರಹಾರ-ನಾಗವಾರವರೆಗೆಇನ ಗುಲಾಬಿ ಮಾರ್ಗ, ಸಿಲ್ಕ್ ಬೋರ್ಡ್- ವಿಮಾನ ನಿಲ್ದಾಣದ 'ನೀಲಿ ಮಾರ್ಗ' ಒಟ್ಟು 12 ಭೂಗತ ನಿಲ್ದಾಣಗಳಲ್ಲಿ ಈ ಪಿಎಸ್‌ಡಿಗಳು ಸ್ಥಾಪನೆಯಾಗಲಿವೆ. ಹಳೆಯ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಲು ಮುಂದಾದರೆ ರೈಲು ಸಂಚಾರಕ್ಕೆ ತೊಂದರೆ ಆಗಲಿದೆ. ನಿಲ್ದಾಣಗಳನ್ನು ಕೆಲ ಕಾಲ ಮುಚ್ಚಬೇಕಾಗುತ್ತದೆ.
ಗುಲಾಬಿ ಮಾರ್ಗದಲ್ಲಿ 06 ಎತ್ತರ ನಿಲ್ದಾಣಗಳು ಸೇರಿದಂತೆ 13ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನಿಂಗ್ ಗೇಟ್ (PSG) ವ್ಯವಸ್ಥೆ ಅಳವಡಿಕೆ ಆಗಲಿದೆ. ಈ ಗುಲಾಬಿ ಮಾರ್ಗವು 2025 ರಲ್ಲಿ ಹಾಗೂ ನೀಲಿ ಮಾರ್ಗವು ಜೂನ್ 2026 ವೇಳೆ ಪೂರ್ಣಗೊಳ್ಳುವ ನಿರೀಕ್ಷೆಗಳು ಇವೆ.
ಹೇಗಿರಲಿದೆ ಪಿಎಸ್‌ಡಿ ವ್ಯವಸ್ಥೆ
ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಿಂದ ಹಳಿ ಮಧ್ಯೆ ಎತ್ತರ ಗೇಟ್‌ನಂತೆ ಮಾಡಿರಲಾಗುತ್ತದೆ. ರೈಲು ಬಂದಾಗ ಅದು ಬಾಗಿಲ ರೀತಿ ತೆರೆದುಕೊಳ್ಳುತ್ತದೆ. ಈ ಪ್ರತಿ ಪಿಎಸ್‌ಡಿಯು 2.15 ಮೀಟರ್ ಎತ್ತರ ಇರಲಿವೆ. ಪಿಎಸ್‌ಜಿಯ ಎತ್ತರ 1.4 ಮೀಟರ್ ಇರುತ್ತವೆ. ಈ ಯೋಜನೆ ಸಾಕಾರಕ್ಕೆ ಜಪಾನ್ ಇಂಟರ್ ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ಹಣದ ಸಹಾಯ ನೀಡುತ್ತಿದೆ.

ಕಂಪನಿಗಳ ಜತೆ ನಮ್ಮ ಮೆಟ್ರೋ ಒಪ್ಪಂದ
ಮಾರ್ಚ್ 2023 ರಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಆಹ್ವಾನಿಸಿದ ಅಂತಾರರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ಡಿಂಗ್ (ICB) ಗಾಗಿ ಆಲ್‌ಸ್ಟೋಮ್ ಟ್ರಾನ್ಸ್‌ಪೋರ್ಟ್ ಕಡಿಮೆ ಬಿಡ್ಡರ್ ಆಗಿ ಹೊರಹೊಮ್ಮಿತು. ಇದೇ ವರ್ಷ ಜನವರಿಯಲ್ಲಿ ಪಿಎಸ್‌ಡಿ ಅಳವಡಿಕೆ, ಸಿಬ್ಬಂದಿ ತರಬೇತಿ, ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣದ ವಿನ್ಯಾಸ, ತಯಾರಿಕೆ ಪೂರೈಕೆಗಾಗಿ ಒಪ್ಪಂದವಾಗಿದೆ.
ಒಂದು ನಿಲ್ದಾಣದಲ್ಲಿ ಪಿಎಸ್‌ಡಿ/ಪಿಎಸ್‌ಜಿ ಅಳವಡಿಸಲು ಸುಮಾರು 7-8 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ವೆಚ್ಚದ BMRCL ಅಧಿಕಾರಿಗಳು ವಿನ್ಯಾಸದ ಅಂಶಗಳನ್ನು ಮೌಲ್ಯಮಾಪನ ಮಾಡಬೇಕಿದೆ. ನಾವು ಸಮಗ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಎಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಡಿಎಚ್‌ಗೆ ತಿಳಿಸಿದರು.
ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಸ್ಥಾಪನೆ
BMRCL ಮೆಜೆಸ್ಟಿಕ್ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಒಂದು ಪ್ಲಾಟ್‌ಫಾರ್ಮ್‌ನಲ್ಲಿ ರೇಲಿಂಗ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದು ಪಿಎಸ್‌ಡಿ ರೀತಿ ಸಹಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನದಟ್ಟಣೆಯಿಂದ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಮಾತನಾಡಿದರು.
ಗುರುವಾರ ಮಧ್ಯಾಹ್ನ ಮುಂಬೈ ಮೂಲದ ಯುವಕ ಬೆಂಗಳೂರಿನಲ್ಲಿ ಕಾನೂನು ಪದವಿ ಓದುತ್ತಿದ್ದ. ಈತ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆ ಮೆಟ್ರೋ ಹಳಿಗೆ ಜಿಗಿದಿದ್ದಾರೆ. ಪರಿಣಾಮ ರೈಲು ಆತನ ಮೇಲೆ ಹರಿದಿದೆ. ಅತ ಸಾವನ್ನಪ್ಪಿದ್ದಾನೆ. ಹೀಗೆ ನಿಲ್ದಾಣದಲ್ಲಿ ಪ್ರಯಾಣಿಕರು ಹಳಿಗೆ ಜಿಗಿಯದಂತೆ ತಡೆಯಲು ಈ ಪಿಎಸ್‌ಡಿ/ಪಿಎಸ್‌ಜಿಗಳು ನೆರವಾಗಲಿವೆ.












Click it and Unblock the Notifications