Namma Metro: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಹೊಸ ರೂಲ್ಸ್; ಕಿರಿಕ್ ಮಾಡಿದರೆ ಕ್ರಮ ಗ್ಯಾರಂಟಿ- ಈ ಕುರಿತು ತಿಳಿಯಿರಿ
ಬೆಂಗಳೂರು, ಆಗಸ್ಟ್ 09: ನಮ್ಮ ಮೆಟ್ರೊದಲ್ಲಿ ಕಿರಿಕ್ ಮಾಡುವ ಪ್ರಯಾಣಿಕರಿಗೆ ಹೊಸದಾಗಿ ರೂಲ್ಸ್ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಯದ್ವಾತದ್ವಾ ಬೋರ್ಡಿಂಗ್ ಮಾಡುವವರನ್ನು, ಅನುಚಿತವಾಗಿ ವರ್ತಿಸುವ ಪ್ರಯಾಣಿಕರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಮೆಟ್ರೋ ನಿಲ್ದಾಣದ ನಿರ್ವಹಣೆಯನ್ನು ಸುಧಾರಿಸಲು ಹಾಗೂ ಪೀಕ್ ಅವರ್‌ಗಳಲ್ಲಿ ಹೆಚ್ಚು ಎಚ್ಚರವನ್ನು ವಹಿಸಲು ಬಿಎಂಆರ್‌ಸಿಎಲ್ 'ವಿಶೇಷ ಕಾರ್ಯಾಚರಣೆ ಕಾರ್ಯಕ್ರಮ'ವನ್ನು ಪರಿಚಯಿಸಿದೆ.

ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುತ್ತಿಲ್ಲ. ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸಂದರ್ಭದಲ್ಲಿ ಶಿಸ್ತನ್ನು ಪಾಲಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಸರಿಯಾದ ನಿರ್ವಹಣೆಯ ಇಲ್ಲ ಎಂದು ಪ್ರಯಾಣಿಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಮೆಟ್ರೋ ಜಾಲದ ವಿಸ್ತರಣೆಯ ಮಧ್ಯೆ ಅವ್ಯವಸ್ಥೆ
ನಮ್ಮ ಮೆಟ್ರೊ ಜಾಲದ ವಿಸ್ತರಣೆಯು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ನಿಲ್ದಾಣಗಳಲ್ಲಿ ಅವ್ಯವಸ್ಥೆ ಮತ್ತು ದಟ್ಟಣೆ ಹೆಚ್ಚಿದೆ. ಪ್ರೋಟೋಕಾಲ್‌ಗಳ ಅನುಸರಣೆ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕರ ಪಾತ್ರದ ಬಗ್ಗೆ ಕಳವಳಗಳು ಹುಟ್ಟಿಕೊಂಡಿವೆ.

ಪ್ರಯಾಣಿಕರ ಆಕ್ರೋಶ
ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಲ್ದಾಣಗಳಲ್ಲಿ ಶಿಸ್ತುಬದ್ಧ ಸರತಿ ವ್ಯವಸ್ಥೆ ಇಲ್ಲ. ಬೋರ್ಡಿಂಗ್ ಹಾಗೂ ಡಿಬೋರ್ಡಿಂಗ್‌ನಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ವಿಶೇಷವಾಗಿ ಮೆಜೆಸ್ಟಿಕ್‌ನಂತಹ ಪ್ರಮುಖ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ ದಟ್ಟಣೆ ಮತ್ತು ಕೆಟ್ಟ ಅನುಭವಗಳ ನಿದರ್ಶನಗಳು ವರದಿಯಾಗಿವೆ.
ಬಿಎಂಆರ್‌ಸಿಎಲ್ ಹೇಳಿದ್ದೇನು?
ಪ್ರಯಾಣಿಕರ ಆಕ್ರೋಶ ಹಾಗೂ ಸಾಮಾಜಿಕ ಮಾಧ್ಯಮಳಲ್ಲಿನ ಟೀಕೆಗಳಿಗೆ ಬಿಎಂಆರ್‌ಸಿಎಲ್ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಮಾತನಾಡಿರುವ ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್, 'ಹೆಚ್ಚಿನ ಪ್ರಯಾಣಿಕರು ಸರತಿ ಸಾಲು ವ್ಯವಸ್ಥೆಗೆ ಬದ್ಧರಾಗಿರಬೇಕೆಂದು ಒತ್ತಿ ಹೇಳಿದ್ದಾರೆ. ಸರಿಯಾದ ಸರತಿ, ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಪ್ರೋಟೋಕಾಲ್‌ಗಳನ್ನು ಉತ್ತೇಜಿಸಲು ವಿಶೇಷ ಕಾರ್ಯಾಚರಣೆ ಕಾರ್ಯಕ್ರಮದ ಅಡಿಯಲ್ಲಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ' ಎಂದು ತಿಳಿಸಿದ್ದಾರೆ.

ಒಂದು ವೇಳೆ, ಪ್ರಯಾಣಿಕರು ಶಿಸ್ತುಬದ್ಧವಾಗಿ ನಡೆದುಕೊಳ್ಳದಿದ್ದರೆ, ನಿಲ್ದಾಣಗಳಲ್ಲಿ ನಿಯೋಜಿಸಲಾಗಿರುವ ಹೋಮ್‌ಗಾರ್ಡ್‌ಗಳು ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.
ದಟ್ಟಣೆ ಕಡಿಮೆ ಮಾಡಲು ಕ್ರಮ
ಮೆಟ್ಟಿಲುಗಳು ಮತ್ತು ಎಸ್ಕಲೇಟರ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಯತ್ನಿಸಲಾಗುತ್ತಿದೆ. ಮುಖ್ಯವಾಗಿ ಪೀಕ್ ಅವರ್‌ಗಳಲ್ಲಿ ಸಾವು ಹವಲು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಬಿಎಂಆರ್‌ಸಿಎಲ್ ರೈಲುಗಳಲ್ಲಿ ಜೋರಾಗಿ ಲೌಡ್‌ಸ್ಪೀಕರ್‌ಗಳು ಹಾಕುವಂತಿಲ್ಲ. ಪ್ರಯಾಣಿಕರು ಕಡ್ಡಾಯವಾಗಿ ಹೆಡ್‌ಫೋನ್ ಬಳಸಬೇಕು. ಒಂದು ವೇಳೆ, ಇದನ್ನು ಉಲ್ಲಂಘಿಸಿದರೆ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಆ ಮೂಲಕ ಸಹ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ವಾತಾವರಣವನ್ನು ನಿರ್ಮಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಹೇಳಿದೆ.












Click it and Unblock the Notifications